ಕೃಷಿಭೂಮಿ ಪರಿವರ್ತನೆಗೆ ಕಾಲಮಿತಿ ಇಳಿಕೆ : ಆರ್ ವಿ ದೇಶಪಾಂಡೆ

ಬೆಂಗಳೂರು

      ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅಫಿಡವಿಟ್ ಆಧಾರದ ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ.

      ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈ ವಿಷಯ ತಿಳಿಸಿದರಲ್ಲದೆ ,ಇದುವರೆಗೆ ಕೃಷಿಭೂಮಿಯನ್ನು ಪರಿವರ್ತಿಸಲು ನೂರಿಪ್ಪತ್ತು ದಿನಗಳ ಕಾಲಾವಕಾಶವಿತ್ತು.ಆದರೆ ಇನ್ನು ಮುಂದೆ ಅರವತ್ತೇ ದಿನಗಳಲ್ಲಿ ಆ ಕೆಲಸಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

     ಕೃಷಿ ಭೂಮಿಯನ್ನು ಕೃಷಿಯೇತರಉದ್ದೇಶಗಳಿಗೆ ಬಳಸಲುಅಗತ್ಯವಾಗುವಂತೆ ಭೂ ಪರಿವರ್ತನೆಮಾಡುವ ಕೆಲಸ ವಿನಾಕಾರಣವಿಳಂಬವಾಗುತ್ತಿತ್ತು.ಆದರೆ ಇನ್ನುಮುಂದೆ ಅಂತಹ ವಿಳಂಬವಾಗದಂತೆನೋಡಿಕೊಳ್ಳಲು ಅಫಿಡವಿಟ್ ಆಧಾರದಆನ್ ಲೈನ್ ವ್ಯವಸ್ಥೆಯನ್ನುಜಾರಿಗೊಳಿಸಲಾಗಿದೆ ಎಂದು ಹೇಳಿದರು.

     ಹಾಗೆಯೇ ಕೃಷಿ ಭೂಮಿಯನ್ನುಕೃಷಿಯೇತರ ಉದ್ದೇಶಕ್ಕಾಗಿ ಬಳಸಲುಭೂ ಪರಿವರ್ತನೆ ಮಾಡಿಕೊಡಲುಇಪ್ಪತ್ತರಿಂದ ಇಪ್ಪತ್ತೈದು ದಾಖಲೆಗಳನ್ನುಕೇಳಲಾಗುತ್ತಿತ್ತು.ಇದರಿಂದಾಗಿ ಜನರಿಗೆತೊಂದರೆಯಾಗುತ್ತಿತ್ತು.

     ಆದರೆ ಇನ್ನು ಮುಂದೆ ಪಹಣಿ,ಇನ್ನೂರುರೂ ಛಾಪಾ ಕಾಗದದ ಮೇಲೆಅಫಿಡವಿಟ್,ಮ್ಯುಟೇಶನ್ ಮತ್ತುಭೂಮಿಗೆ ಹಲವು ಮಾಲೀಕರಿದ್ದರೆ 11 ಇಅರ್ಜಿಯನ್ನು ಸಲ್ಲಿಸಿ,ಹಣ ಪಾವತಿ ಮಾಡಿದರೆ ಸಾಕು.ಅರವತ್ತು ದಿನಗಳಲ್ಲಿಭೂ ಪರಿವರ್ತನೆಮಾಡಿಕೊಡಲಾಗುವುದು ಎಂದುಹೇಳಿದರು.

     ಈ ಮಧ್ಯೆ ಭೂ ಪರಿವರ್ತನೆಮಾಡಿಕೊಡುವಾಗ ಜಿಲ್ಲಾಧಿಕಾರಿಗಳಿಂದಭೂ ಪರಿವರ್ತನೆ ಮಾಡಿಸಿಕೊಳ್ಳುವುದು ಕಾನೂನು.ಆದರೆ ದಕ್ಷಿಣ ಕನ್ನಡ ಮತ್ತುಉಡುಪಿ ಜಿಲ್ಲೆಗಳಲ್ಲಿ ಮಾತ್ರತಹಸೀಲ್ದಾರ್ ಅವರೂ ಕೃಷಿಭೂಮಿಯನ್ನು ಕೃಷಿಯೇತರಉದ್ದೇಶಗಳಿಗೆ ಪರಿವರ್ತನೆಮಾಡಿಕೊಡಲು ಕಾನೂನಿನಲ್ಲಿಅವಕಾಶವಿದೆ.

     ಉಳಿದಂತೆ ಯಾವ ಜಿಲ್ಲೆಗಳಲ್ಲೂ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತನೆ ಮಾಡಿಕೊಡುವ ಅಧಿಕಾರ ತಹಸೀಲ್ದಾರ್ ಗಳಿಗಿಲ್ಲ.ಹಾಗೇನಾದರೂ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ.

     ಶಿವಮೊಗ್ಗ ಸೇರಿದಂತೆ ಕೆಲ ಭಾಗಗಳಲ್ಲಿ ಈ ರೀತಿ ತಹಸೀಲ್ದಾರ್ ಗಳಿಂದ ಭೂಪರಿವರ್ತನೆ ಮಾಡಿಸಿದ ಪ್ರಕರಣಗಳ ಬಗ್ಗೆ ಕೇಳಿ ಬಂದಿದ್ದು ಅಗತ್ಯ ಮಾಹಿತಿ ಸಿಕ್ಕರೆ ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಲೇಔಟುಗಳನ್ನು ಮಾಡಿ ಮಾರಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

     ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾದ್ದರಿಂದ ನೂರು ತಾಲ್ಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಇತ್ತು.ಈ ಕುರಿತು ಪರಿಹಾರ ಕೇಳಿದರೆ 949.39 ಕೋಟಿ ರೂ ಪರಿಹಾರ ನೀಡುವುದಾಗಿ ಕೇಂದ್ರ ಹೇಳಿತ್ತು.ಆದರೆ ಇದುವರೆಗೆ ಪರಿಹಾರದ ಹಣ ಕೇಂದ್ರದಿಂದ ಬಿಡುಗಡೆಯಾಗಿಲ್ಲ ಎಂದು ವಿಷಾದಿಸಿದರು.

      ಇದೇ ರೀತಿ ಹಿಂಗಾರು ಬಾಬ್ತಿನಲ್ಲಿ ನೂರಾ ಐವತ್ತಾರು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು ಈ ಬಾಬ್ತಿನಲ್ಲಿ ಎರಡು ಸಾವಿರ ಕೋಟಿ ರೂಗಳಿಗೂ ಅಧಿಕ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಹೇಳಿದರು.

     ರಾಜ್ಯದಲ್ಲಿ ಐವತ್ತು ಹೊಸ ತಾಲ್ಲೂಕುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದರೂ ಈ ಹೊಸ ತಾಲ್ಲೂಕುಗಳಲ್ಲಿ ಕಂದಾಯ ಇಲಾಖೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.ಉಳಿದಂತೆ ಹದಿಮೂರು ಇಲಾಖೆಗಳು ಹೊಸ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.

     ಹಾಗೆ ಮಾಡಲು ವಿವಿಧ ಇಲಾಖೆಗಳು ಇನ್ನೂ ಸ್ಥಾಪನೆಯಾಗಬೇಕು.ಅದಕ್ಕೆ ಹಣಕಾಸಿನ ಲಭ್ಯತೆಯಾಗಬೇಕು.ವಿವಿಧ ಹುದ್ದೆಗಳ ಮಂಜೂರಾತಿ ಕಾರ್ಯ ನಡೆಯಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ತಿಳಿಸಿದರು.

      ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಭೂಮಿಯನ್ನು ಗುರುತಿಸಲು ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಇಷ್ಟಾದರೂ ಉಭಯ ಇಲಾಖೆಗಳ ಮಧ್ಯೆ ಗೊಂದಲ ಉಳಿದೇ ಇದೆ.ಕೆಲವೆಡೆ ಈ ಭೂಮಿ ನಮ್ಮದು ಎಂದು ಅರಣ್ಯ ಇಲಾಖೆ ಹೇಳುತ್ತದೆ.ಇಲ್ಲ,ಅದು ನಮ್ಮ ಭೂಮಿ ಎಂದು ಕಂದಾಯ ಇಲಾಖೆ ಹೇಳುತ್ತದೆ ಎಂದು ಹೇಳಿದರು.

 

Recent Articles

spot_img

Related Stories

Share via
Copy link