ಬೆಂಗಳೂರು
ದೃಶ್ಯ ಮಾಧ್ಯಮ ಅಬ್ಬರದ ನಡುವೆಯೂ ನಗರ ಜೀವನದ ಒತ್ತಡ ಕಡಿಮೆಯಾಗಲು ಶ್ರವ್ಯ ಮಾಧ್ಯಮ ನೆರವಾಗಿದೆ ಎಂದು ರಂಗಭೂಮಿ ಕಲಾವಿದೆ ಡಾ. ಲಕ್ಷ್ಮೀ ಚಂದ್ರಶೇಖರ್ ಹೇಳಿದ್ದಾರೆ.
ರಾಜ್ಯೋತ್ಸವ ನಿಮಿತ್ತ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅವರು, ಈಗ ಆಡಿಯೋ ಬುಕ್‍ಗೆ ಬೇಡಿಕೆ ಹೆಚ್ಚಾಗಿದ್ದು ವಿದೇಶಗಳಲ್ಲೂ ದೂರದ ಪ್ರಯಾಣದ ಸಂದರ್ಭಗಳಲ್ಲಿ ಪುಸ್ತಕ ಓದುವ ಬದಲು ಕೇಳುವ ಅಭ್ಯಾಸವಿದೆ. ಆಕಾಶವಾಣಿ ಸೇರಿದಂತೆ ಶ್ರವ್ಯ ಮಾಧ್ಯಮದ ಕಾರ್ಯಕ್ರಮಗಳನ್ನು ಆಲಿಸುತ್ತಾ ಉಲ್ಲಾಸದಿಂದಿರಬಹುದು ಎಂದರು.
ನಿಲಯದ ಉಪಮಹಾನಿರ್ದೇಶಕ ಹನುಮಂತು, ಕನ್ನಡ ನಾಡು ನುಡಿಗೆ ನಮನ ಸಲ್ಲಿಸುವ ಕಾರ್ಯಕ್ರಮಗಳನ್ನು ಆಕಾಶವಾಣಿ ಬಿತ್ತರಿಸುತ್ತಿದೆ ಎಂದರು.
ಬೆಂಗಳೂರು ನಿಲಯದ ನಿರ್ದೇಶಕ ಜಿ.ಕೆ.ರವೀಂದ್ರಕುಮಾರ್, ಸುದ್ದಿ ವಿಭಾಗದ ಉಪನಿರ್ದೇಶಕ ಟಿ.ಬಿ.ನಂಜುಂಡಸ್ವಾಮಿ, ಸಿಸಿಡಬ್ಲ್ಯು ಮುಖ್ಯಸ್ಥ ಅಜಯ್‍ಕುಮಾರ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಹ.ನ.ಗೋಪಿನಾಥ್, ವಿವಿಧ ಕೇಂದ್ರಗಳ ಸಿಬ್ಬಂದಿಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
