ಚಿತ್ರದುರ್ಗ
ಸಭೆ ನಡೆಸಲು ಆಗತ್ಯವಾದ ಸದಸ್ಯರು ಹಾಜರಿರದ ಕಾರಣ ಇಂದು ನಡೆಯಬೇಕಿದ್ದ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಮುಂದೂಡಿದ ಪ್ರಸಂಗ ನಡೆದಿದೆ.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಜೂನ್ 27ರ ಇಂದು ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು ಸಮಯ 11ಕ್ಕೆ ಸಭಾಂಗಣಕ್ಕೆ ಆಗಮಿಸಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯ ನಿರ್ವಹಕ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಆಗಮಿಸಿ ವೇದಿಕೆಯಲ್ಲಿ ವಿರಾಜಮಾನರಾದರು, ಸಭೆಯಲ್ಲಿ ಆ ಸಮಯಕ್ಕೆ ಕೆಲವೇ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸಮಯ 11.15ರ ವೇಳೆಗೆ ಮತ್ತೇ ಕೆಲವು ಸದಸ್ಯರು ಹಾಗೂ ಮತ್ತಷ್ಟು ಇಲಾಖೆಯ ಅಧಿಕಾರಿಗಳು ಆಗಮಿಸಿದರು ಸಮಯ 11.30ರ ವೇಳೆಗೆ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜೀವ ವೈವಿಧ್ಯ ನಿರ್ವಾಣ ಸಮಿತಿಯ ಅಧ್ಯಕ್ಷರು ಸೇರಿದಂತೆ 13 ಜನ ಮಾತ್ರ ಸದಸ್ಯರು ಹಾಜರಿದ್ದರು, 29 ಜನ ಸದಸ್ಯ ಬಲವನ್ನು ಹೊಂದಿದ ಚಿತ್ರದುರ್ಗ ತಾ.ಪಂ. ಸಭೆಯನ್ನು ನಡೆಸಲು 15 ಜನ ಸದಸ್ಯರ ಹಾಜರಾಗಿ ಅಗತ್ಯವಾಗಿದೆ. 13 ಜನ ಸದಸ್ಯರಲ್ಲಿ 7 ಜನ ಮಹಿಳಾ ಮತ್ತು 5 ಜನ ಪುರುಷ ಸದಸ್ಯರು ಮಾತ್ರವೇ ಹಾಜರಿದ್ದರು. ಈ ಮಧ್ಯೆ ಅಧ್ಯಕ್ಷರು ಮತ್ತು ಇತರೆ ಸದಸ್ಯರು ಬೇರೆ ಸದಸ್ಯರಿಗೆ ದೂರವಾಣಿ ಮೂಲಕ ಸಭೆ ಇದೆ ಬನ್ನಿ ಎಂದು ಕರೆಯುತ್ತಿದ್ದ ದೃಶ್ಯ ಕಂಡು ಬಂದಿತು.
ಇಷ್ಠಾದರೂ ಸಹಾ ಸಭೆ ನಡೆಸಲು ಅಗತ್ಯವಾದ ಸಂಖ್ಯಾ ಬಲ ಇಲ್ಲದ ಕಾರಣ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಾಯ್ಕ ಕೋರಂ ಕೊರತೆಯಿಂದಾಗಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಯಾಕೆ ಹೀಗೆ ಎಂದಾಗ ಕೆಲವು ಸದಸ್ಯರು ಮದುವೆಗಳಿಗೆ ಹೋಗಿದ್ದಾರೆ ಮತ್ತೇ ಕೆಲವರಿಗೆ ಆರೋಗ್ಯ ಸರಿಯಿಲ್ಲ ಎಂಬ ಉತ್ತರ ಕೇಳಿ ಬಂತು. ಈ ಮಧ್ಯೆ ಮೂರು ಜನ ಪರುಷ ಸದಸ್ಯರು ಸಭೆಯಿಂದ ಹೊರ ನಡೆದರು ಸ್ವಲ್ಪ ಸಮಯದಲ್ಲಿ ಒಬ್ಬರು ಮಾತ್ರ ಹಿಂದಕ್ಕೆ ಬಂದರು ಇಬ್ಬರು ಮತ್ತೇ ನಾಪತ್ತೆಯಾದರು.
ಸಾಮಾನ್ಯ ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಸುತ್ತೋಲೆ ಇದ್ದರು ಸಹಾ ಇಂದಿನ ಸಾಮಾನ್ಯ ಸಭೆಗೆ ಶೇ.50 ರಷ್ಟು ಮಾತ್ರ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಾಗಿದ್ದರು. ಸಭೆ ಕೊರಂ ಕೊರತೆಯಿಂದ ಮುಂದೂಡಲಾಗಿದೆ ಎಂದು ಕಾರ್ಯ ನಿರ್ವಹಕ ಅಧಿಕಾರಿಗಳು ತಿಳಿಸಿದ ನಂತರವೂ ಕೆಲವೊಂದು ಅಧಿಕಾರಿಗಳು ಸಭಾಂಗಣಕ್ಕೆ ಆಗಮಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
