ಹಾಸನಾಂಬೆಗೆ ಸತ್ವ ಪರೀಕ್ಷೆ

0
696

ಹಾಸನ: 

     ದೇವರು ಮನುಷ್ಯನಿಗೆ ಪರೀಕ್ಷೆ ಮಾಡುವುದು ಸಾಮಾನ್ಯ ಆದರೆ ಮನುಷ್ಯನೇ ದೇವರನ್ನು ಪರಿಕ್ಷಿಸುವುದು ಧಾರ್ಮಿಕವಾಗಿ ಅಕ್ಷಮ್ಯ ಅಪರಾಧ ಇದೆ ರೀತಿಯ ಅಪವಾದ ತಮ್ಮ ಮೇಲೆ ಬಂದರೂ ಸರಿ ಪರೀಕ್ಷೆ ಮಾಡೋಣ ಎಂದು ಹಾಸನದಿಂದ ಕೆಲವರು ಮುಂದೆ ಬಂದಿದ್ದಾರೆ.  ಇನ್ನೇನು ಮುಂದಿನ ತಿಂಗಳಿಂದ ಹಾಸನದ ಶಕ್ತಿ ದೇವತೆ ಹಾಸನಾಂಬೆಯ ಉತ್ಸವ ನಡೆಯಲಿದ್ದು, ಇದೀಗ ಹಾಸನಾಂಬೆಯ ಪವಾಡ, ಮಹಿಮೆಯ ಪರೀಕ್ಷೆ ಮಾಡಬೇಕು ಎಂಬ ಕೂಗು ಎದ್ದಿದೆ.

     ಹಾಸನಾಂಬೆಯ ದೇವಾಲಯದ ಬಾಗಿಲನ್ನು ವರ್ಷಕೊಮ್ಮೆ ವರ್ಷಕೊಮ್ಮೆ ಮಾತ್ರ ತೆಗೆಯುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಮುಚ್ಚಲಾಗುತ್ತದೆ. ಕಳೆದ ವರ್ಷ ಹಚ್ಚಿದ ದೀಪ ಉರಿಯುತ್ತಲೆ ಇರುತ್ತದೆ. ಇಟ್ಟ ಅನ್ನದ ನೈವೇದ್ಯ ಹಳಸುವುದಿಲ್ಲ. ಹೂವು ಬಾಡುವುದಿಲ್ಲ. ಎಂಬ ಪ್ರತೀಥಿ ಇದೆ ಅದನ್ನೆ ಪರೀಕ್ಷಿಸಲು ಕೆಲವರು ಹೊರಟಿದ್ದಾರೆ ತೀವ್ರ ವಿರೋಧದ ನಡುವೆಯೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ ಆದರೆ ಈ ಬಗ್ಗೆ ನಿರ್ಧಾರವನ್ನು ಹಾಸನ ಜಿಲ್ಲಾಡಳಿತ ತೆಗೆದು ಕೊಳ್ಳಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here