ಬೆಂಗಳೂರು
ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸುಳ್ಳು ಹೇಳಿ ನಂಬಿಸಿ ಗ್ರಾಹಕರನ್ನು ಕರೆಸಿಕೊಂಡು ಅವರ ಮೇಲೆ ರಾಸಾಯನಿಕ ಸಿಂಪಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿ, 15 ಲಕ್ಷ ನಗದು ದೋಚಿದ್ದಲ್ಲದೇ ರೂಪಾಯಿ ಮತ್ತು ಡಾಲರ್‌ಗಳನ್ನು ನಕಲು ಮಾಡುತ್ತಿದ್ದ ಇಬ್ಬರುಖತರ್ನಾಕ್ ವಿದೇಶಿ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಕ್ಯಮೊರಾನ್ ದೇಶದ ಕುಂಬಾ ಸಿಟಿಯ ಇಯೋಂಗ್ ಲೂಯಿಸ್ ಬೆಟೆ (35), ಐವರಿಕೋಸ್ಟ್‌ನ ಆಲಿಡ್ಜನ್ ಸಿಟಿಯ ಅಕ್ರೋಮನ್ ಬೆಟ್ರೋ ಜೆನ್ (35) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 2 ಲಕ್ಷ 50 ಸಾವಿರ ನಗದು,100 ನಕಲಿ ಡಾಲರ್‌ಗಳು 2 ಮೊಬೈಲ್ ನಕಲಿ ನೋಟುಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳು ನಕಲಿ ಡಾಲರ್‌ಗಳು ಸೇರಿ 44 ಲಕ್ಷ 80 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಆರೋಪಿಗಳು ಅಪ್ಪಲ್‌ನಾಯ್ಡು ಎಂಬುವರಿಗೆ ಸೇರಿದ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಮೆಸೆಂಜ್ ಕಳುಹಿಸಿ ವ್ಯವಹಾರ ಕುದುರಿಸಿ, ಕಲ್ಯಾಣ ನಗರ ಪ್ಯಾರಾಡೈಸ್ ಹೋಟೆಲ್‌ಗೆ ಕರೆಸಿಕೊಂಡು ಲ್ಯಾಪ್‌ಟಾಪ್ ಖರೀದಿಸಲು ತಂದಿದ್ದ 15 ಲಕ್ಷ ಹಣವನ್ನು ದೋಚಿ, ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ವಿದ್ಯಾರ್ಥಿ ವೀಸಾದಲ್ಲಿ ನಗರಕ್ಕೆ ಬಂದು ಅಪರಾಧ ಕೃತ್ಯದಲ್ಲಿ ತೊಡಗಿದ್ದರು ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








