ಬ್ಯಾಡಗಿ:
ಮೋಟೆಬೆನ್ನೂರರಸ್ತೆಯಲ್ಲಿ ನಡೆಸುತ್ತಿರುವ ಯುಜಿಡಿ ಕಾಮಗಾರಿಗೆ ಕಳಪೆ ಇಟ್ಟಿಗೆಗಳನ್ನು ಬಳಸಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರುಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಶನಿವಾರ ನಡೆಯಿತು.
ಕಳೆದ ಕೆಲ ದಿನಗಳಿಂದ ಪಟ್ಟಣದ ಮೋಟೆಬೆನ್ನೂರರಸ್ತೆಯಲ್ಲಿಕಾಮಗಾರಿಯನ್ನು ನಡೆಲಸಾಗುತ್ತಿದೆಆದರೆಯುಜಿಡಿ ಗುಂಡಿಗಳನ್ನು (ಬ್ಲಾಕ್) ನಿರ್ಮಾಣ ಮಾಡಲು ಸರಿಯಾಗಿ ಸುಟ್ಟಿರದ ಮತ್ತುಅತ್ಯಂತ ಕಳಪೆ ಮಟ್ಟದ ಇಟ್ಟಿತಗೆಳನ್ನು ಬಳಸಾಗುತ್ತಿರುವುದೇ ಸಾರ್ವಜನಿಕರಆಕ್ರೋಶಕ್ಕೆಕಾರಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಾಂಡುರಂಗ ಸುತಾರ ಪಟ್ಟಣದಲ್ಲಿ ಸುಮಾರು 66 ಕೋಟಿ ವೆಚ್ಚದಲ್ಲಿಯುಜಿಡಿ ಕಾಮ ಗಾರಿ ನಡೆಸಲಾಗುತ್ತಿದೆಆದರೆಕಾಮಗಾರಿಆರಂಭವಾದಾಗಿನಿಂದಗುತ್ತಿಗೆದಾರ ಮಾಡುತ್ತಿರುವ ಯಡವಟ್ಟುಗಳಿಗೆ ಕೊನೆ ಇಲ್ಲದಂತಾಗಿದ್ದು ಕಳಪೆ ಕಾಮಗಾರಿಯಿಂದಾಗಿ ಇಗಾಗಲೆ ಪಟ್ಟಣದಲ್ಲಿನ ಸುಮಾರು 50 ಕ್ಕೂ ಹೆಚ್ಚು ಬ್ಲಾಕ್‍ಗಳು ಬಳಕೆ ಮಾಡುವಮುನ್ನವೆ ಶಿಥಿಲಾವಸ್ಥೆ ತಲುಪಿವೆ.ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸದಂತೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ನಿಮ್ಮ ಹಳೆ ಚಾಳಿ ಮುಂದುವರಸಿ ಕಳಪೆ ಇಟ್ಟಿಗೆಳನ್ನು ಬಳಸಿ ಬ್ಲಾಕ್ ನಿರ್ಮಾಣ ಮಾಡುತ್ತಿದ್ದಾರಾ ನಿಮಗೆ ಹೇಳುವವರು ಕೇಳುವವರು ಯಾರುಇಲ್ಲವಾ.? ನಿಮ್ಮನ್ನುಯಾರು ಪ್ರಶ್ನಿಸಬಾರದೆ.
ನೀವೇನು ಪ್ರಶ್ನಾತೀತರೇ.?ನೀವೇ ತಪ್ಪು ಮಾಡುತ್ತಿದ್ದರುನಮ್ಮ ಮೇಲೆಯೆ ದಬ್ಬಾಳಿಕೆ ಮಾಡುತ್ತಿರಲ್ಲಎಂದುಆಕ್ರೋಶ ವ್ಯಕ್ತಪಡಿಸಿದರಲ್ಲದೆ ಯಾವುದೇಕಾರಣಕ್ಕೂ ಕಳಪೆ ಇಟ್ಟಿಗೆಯಿಂದಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮಾತಿನ ಚಕಮಕಿ:ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಯುಜಿಡಿಗುತ್ತಿಗೆದಾರ ಹಾಗೂ ಅಭಿಯಂತರರ ನಡುವೆ ಮಾತಿನ ಚಕಮಕಿ ಉಂಟಾಗಿ ಮುಖ್ಯಅಭಿಯಂತರರ್ನು ಸ್ಥಳಕ್ಕೆ ಕರೆಸುವಂತೆ ಸಾರ್ವಜನಿಕರು ಪಟ್ಟು ಹಿಡಿದರು.
ವರ್ತನೆ ಬದಲಿಸಿಕೊಳ್ಳಿ:ಸುರೇಶ ಯತ್ನಳ್ಳಿ ಮಾತನಾಡಿ, ಸಾರ್ವಜನಿಕರತೆರಿಗೆ ಹಣದಲ್ಲಿಯೇ ಈ ಕಾಮಗಾರಿ ನಡೆಯುತ್ತಿರುವುದುಇದು ನಿಮಗೆ ಗೊತ್ತಿಲ್ಲವೇಅಭಯಂತರರೆ..? ಕಳಪೆ ಇಟ್ಟಿಗೆ ಬಳಸುತ್ತಿರುವುದನ್ನೂ ನೋಡಿಯು ಸಾರ್ವಜನಿಕರು ಸುಮ್ಮನಿರಬೇಕೆ.?ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನ ತಿಳಿದುಕೊಳ್ಳಿ ಮೊದಲುನಿಮ್ಮ ವರ್ತನೆ ಬದಲಾಯಿಸಿಕೊಳ್ಳಿ, ಕಳಪೆ ಇಟ್ಟಿಗೆಳನ್ನು ಬದಲಿಸಿ ಗುಣಮಟ್ಟದಇಟ್ಟಿಗೆ ಬಳಸಿ ಕಾಮಗಾರಿ ನಡೆಸಿ ಎಂದು ಸೂಚಿಸಿದರು.
ಇಟ್ಟಿಗೆ ವಾಪಸ:ಸಾರ್ವಜನಿಕರಒತ್ತಡಕ್ಕೆ ಮಣಿದಗುತ್ತಿಗೆದಾರರುಆರೋಪ ಮಾಡಿದಕಳಪೆ ಇಟ್ಟಿಗೆಳನ್ನು ವಾಪಸ ಕಳಿಸಿ ಗುಣಮಟ್ಟದ ಇಟ್ಟಿಗೆಗಳನ್ನು ತರಿಸಿಕಾಮಗಾರಿ ಆರಂಭಿಸಿದ ನಂತರ ಸಾರ್ವಜನಿಕರುಅಲ್ಲಿಂದ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








