ಬಳ್ಳಾರಿ
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯಿಂದ ಜಿಲ್ಲೆಯ ಯಾವುದೇ ಅಸಂಘಟಿಕ ಕಾರ್ಮಿಕರು ಹೊರಗಿರಬಾರದು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಪಿ.ಎಂ.ಎಸ್.ವೈ.ಎಂ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಕೆಳ ವರ್ಗದಿಂದ ಬಂದತಹ ಪ್ರಧಾನಮಂತ್ರಿ ಅವರಿಂದ ಮಾತ್ರ ಇಂತಹ ಹಲವು ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಸಾಧ್ಯ.
ಈ ಯೋಜನೆಯಿಂದ 170 ವಲಯಗಳಲ್ಲಿ ಕಾರ್ಯನಿರ್ವಹಿಸುವ ಮಾಸಿಕ 15 ಸಾವಿರ ರೂ.ಗಳಗಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರು ಈ ಯೋಜನೆ ಮೂಲಕ 60 ವರ್ಷಗಳ ನಂತರ ಮಾಸಿಕ 3 ಸಾವಿರ ರೂ.ಗಳ ಪಿಂಚಣಿ ಬರಲಿದೆ ಎಂದು ಹೇಳಿದ ಅವರು ಅಸಂಟಿತ ಕಾರ್ಮಿಕರು ಈ ಯೋಜನೆಯಿಂದ ವಂಚಿತರಾಗದಂತೆ ತ್ವರಿತಗತಿಯಲ್ಲಿ ನೊಂದಣಿ ಮಾಡಿಸಿಕೊಳ್ಳಲು ಕರೆ ನೀಡಿದರು.
ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 18 ರಿಂದ 40 ವರ್ಷದೊಳಗಿನ ಪಿ.ಎಫ್., ಇ.ಎಸ್.ಐ ಯೋಜನೆಯ ಲಾಭ ಪಡೆಯದ ಕಾರ್ಮಿಕರು ಇದರಲ್ಲಿ ನೊಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಈ ಯೋಜನೆಯ ಕುರಿತು ವಿಡೀಯೋ ವೀಕ್ಷಣೆ ಮಾಡಿದರು. ಕಾರ್ಯಕ್ರಮದಲ್ಲಿ ನಗರದ ಎಲ್.ಐ.ಸಿ ಕಚೇರಿಯ ವ್ಯವಸ್ಥಾಪಕ ಸುಂದರ್, ಇ.ಎಸ್.ಐ ಯೋಜನೆ ಅಧಿಕಾರಿ ಶಿವಕುಮಾರ್, ಕಾರ್ಮಿಕ ನಿರೀಕ್ಷಕ ಎಂ.ರವಿದಾಸ್, ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ್, ಎನ್.ನಾಗರಾಜ್ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.
ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ