ಹಗರಿಬೊಮ್ಮನಹಳ್ಳಿ
ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿರುಪಾಕ್ಷಿ ಹಂಪಸಾಗರ್ ಹಾಗೂ ಬಿ.ಲೋಕಪ್ಪ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಗಳ ಪರಿವೀಕ್ಷಕ ಕೃಷ್ಣನಾಯ್ಕ ಘೋಷಿಸಿದರು.
ಖಾಲಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಗೆ ಹಾಜರಾದ ನಿರ್ದೇಶಕರು, ಇಲ್ಲಿಂದ ಮುಂದಿನ ಒಂದುವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ವಿರುಪಾಕ್ಷಿ ಹಂಪಸಾಗರ ಅಧ್ಯಕ್ಷ ಸ್ಥಾನಕ್ಕೆ, ಬಿ.ಲೋಕಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬೇರಾರು ಸ್ಪರ್ಧಾಳುಗಳಿಲ್ಲದ ಕಾರಣ, ಎರಡು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ-ಉಪಾಧ್ಯಕ್ಷರೆಂದು ಘೋಷಣೆಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಟಿ.ಎ.ಪ.ಎಂ.ಎಸ್.ಅಧ್ಯಕ್ಷ ಟಿ.ವೆಂಕಟೇಶ, ನಿರ್ದೇಶಕರಾದ ಹೊನ್ನೂರಪ್ಪ, ದಾಸರ ಷಣ್ಮುಖಪ್ಪ, ಸುಳ್ಳಪ್ಪರ ರಾಮಪ್ಪ, ಕನ್ನಿಹಳ್ಳಿ ಲೋಕಪ್ಪ, ಡಿ.ಹುಲಿಗೆಮ್ಮ, ಕರಿಬಸಪ್ಪ, ಮುಖಂಡರಾದ ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್, ಹುಡೇದ್ ಗುರುಬಸವರಾಜ್, ಚಿಂತ್ರಪಳ್ಳಿ ದೇವೇಂದ್ರ, ಗ್ರಾಮದ ಕೆ.ವೆಂಕಟೇಶ್, ಎ.ಬಸವರಾಜ್ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ವಿರುಪಾಕ್ಷಿ ಹಂಪಸಾಗರ ಮಾತನಾಡಿ, ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದ ನಿರ್ದೇಶಕರಿಗೂ ಮತ್ತು ಮುಖಂಡರಿಗೂ ಹಾಗೂ ವಾಸ್ತವಗ್ರೂಪ್, ಪೂರ್ಣಪ್ರಜ್ಞ ಸ್ವಸಹಾಯ ಸಂಘ ಹಾಗೂ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
