ತ್ಯಾಜ್ಯ ತುಂಬುವ ಸ್ಥಳವಾದ ಉರ್ದುಶಾಲೆ ಮೈದಾನ!!!

ತಿಪಟೂರು

      ಒಂದು ಕಡೆ ಕೊರೊನಾ ತಾಂಡವವಾಡುತ್ತಿದ್ದರೆ ಇನ್ನುಂದು ಕಡೆ ಕೊರೊನಾದಿಂದಾ ಶಾಲೆಗಳು ಮುಚ್ಚಿದ್ದನ್ನು ಸದುಪಯೋಗ ಪಡಿಸಿಕೊಂಡಿರುವ ಕುಡುಕರು ನಗರದ ಗಾಂಧಿನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು ಕುಡುಕರ ಮತ್ತು ಪುಂಡ ಪೋಕರಿಗಳ ಅಡ್ಡಯಾಗಿ ಪರಿವರ್ತನೆಯಾಗಿದ್ದು ಶಿಕ್ಷರಿಗೆ ದಿನನಿತ್ಯ ನರಕದ ದರ್ಶನಮಾಡಿಸುತ್ತಿದ್ದಾರೆ.

      ನಗರದ ಗಾಂಧಿನಗರದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 104 ಜನ ವಿದ್ಯಾರ್ಥಿಗಳಿಗೆ 5ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಶಾಲೆಯು ಈಗ ದಿನನಿತ್ಯ ಕುಡುಕರ ಪುಂಡಪೋಕರಿಗಳ ಹಾವಳಿಯಿಂದಾಗಿ ಶಿಕ್ಷಕರು ದಿನನಿತ್ಯ ಖಾಲಿ ಬಾಟಲಿ, ಗುಟ್ಕಾ ಪಾಕೇಟ್‍ಗಳು, ಬಾಗಿಲುಗಳ ಮೇಲಿನ ಮಲಮೂತ್ರಗಳನ್ನು ಸ್ವಚ್ಚಗೊಳಿಸಿ ಬಾಗಿಲನ್ನು ತೆಗೆಯುವ ಪರಿಸ್ಥಿತಿಯನ್ನು ನಿರ್ಮಾಣಮಾಡಿದ್ದಾರೆ.

     ಈ ಶಾಲೆಯು 1959ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಓದಿದ ಕೆಲವರು ಉನ್ನತ ಅಧಿಕಾರಿಗಳು, ಉದ್ಯಮಿಗಳು, ವ್ಯಾಪಾರಿಗಳಾದ ದೇಶದ ಸೇವೆಯಲ್ಲಿ ತೊಡಗಿದ್ದಾರೆ. ಈ ಶಾಲೆಯ ಕಟ್ಟಡವನ್ನು ಮೈಸೂರು ಸಂಸ್ಥಾದ ಪೌರಾಡಳಿತ ಸಚಿವರಾದ ಬಿ.ಎಂ.ಪಾಟೀಲ್ 1970ರಲ್ಲಿ ಉದ್ಘಾಟನೆಮಾಡಿದ್ದರು. ಆದರೆ ಈ ಕಟ್ಟಡ ಈಗ ಸಂಪೂರ್ಣವಾಗಿ ಹಾಳಾಗಿದ್ದು ವಿದ್ಯಾರ್ಥಿಗಳ ಮೇಲೆ ಬೀಳುವ ಹಂತದಲ್ಲಿವೆ. ಈ ಕಟ್ಟಡವನ್ನು ರೀಪೇರಿಗೊಳಿಸಲಂತು ಸಾಧ್ಯವೇ ಇಲ್ಲ. ಈ ಕಡವನ್ನು ನೆಲಸಮಗೊಳಿಸಿ ವಿದ್ಯಾರ್ಥಿಗಳಿಗೆ ಆಟವಾಡಲು ಸ್ಥಳವಾದರೂ ದೊರೆಯುತ್ತದೆ ಮತ್ತು ಈ ಕಟ್ಟಡವನ್ನು ತೆರುವುಗೊಳಿಸಿದರೆ ಸ್ವಲ್ಪ ಬಯಲಿನಂತಾಗಿ ಪುಂಡಪೋಕರಿಗಳಿಗೆ ಮರೆಇಲ್ಲದಂತಾಗಿ ಆಗಲಾದರೂ ಹಾವಳಿ ಕಡಿಮೆಯಾಗುತ್ತದೋ ನೋಡಬೇಕು.

ಶತಮಾನ ದಾಟಿದ ಉರ್ದುಶಾಲೆಯ ಸ್ಥಿತಿ ಕೇಳುವಂತಿಲ್ಲ :

      1904ರಲ್ಲಿ ಪ್ರಾರಂಬವಾದ ಗಾಂದಿನಗರದ ಸರ್ಕಾರಿ ಉರ್ದು ಶಾಲೆಯು ಸುತ್ತಮುತ್ತಲ ಆಟದ ಮೈದಾನ ಎಲ್ಲವೂ ಸೇರಿ 4.5 ಎಕರೆ ಜಮೀನನ್ನು ತನ್ನ ಖಾತೆಯಲ್ಲಿ ಹೊಂದಿದೆ ಆದರೆ ಈ ಜಮೀನು ಕೇವಲ ದಾಖಲೆಯಲ್ಲಿ ಇದೇ ಹೊರತು ಶಾಲೆಯ ಹಿಡಿತಕ್ಕೆ ಒಳಪಡುತ್ತಲೇಇಲ್ಲ. ಈ ಮೈದಾನವನ್ನು ಒಂದು ಕಡೆ ನಗರಸಭೆಯ ಕುಡಿಯುವ ನೀರಿನ ಶುದ್ದೀಕರಣ ಘಟಕವು ಒತ್ತುವರಿ ಮಾಡಿದ್ದರೆ ಇನ್ನೊಂದು ಕಡೆ ರಸ್ತೆ, ಒಂದು ಕಡೆ ಪೆಟ್ಟಿಗೆ ಅಂಗಡಿಗಳು, ಇನ್ನೊಂದು ಕಡೆ ರಸ್ತೆಯ ಸಂಪೂರ್ಣ ತ್ಯಾಜ್ಯ, ಹಳೆಯ ಕಟ್ಟಡಗಳ ತ್ಯಾಜ್ಯ, ಸುತ್ತಮುತ್ತಲ ಘನತ್ಯಾಜ್ಯದೊಂದಿಗೆ ಸರ್ಕಾರಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ತಮ್ಮ ಡಂಪಿಂಗ್ ಯಾರ್ಡ್‍ಆಗಿ ಪರಿವರ್ತಿಸಿಕೊಂಡಿದ್ದಾರೆ.

      ಈ ಶಾಲೆಯಲ್ಲು 103 ವಿದ್ಯಾರ್ಥಿಗಳಿದ್ದು ಮಕ್ಕಳು ದಿನನಿತ್ಯ ಕುಡುಕರ ತ್ಯಾಜ್ಯವನ್ನು ಎತ್ತಿಹಾಕಬೇಕು, ಕೊರೊನಾ ಸಮಯದಲ್ಲಿ ಶಿಕ್ಷಕರು ಈ ಕೊರೊನಾ ತ್ಯಾಜ್ಯವನ್ನು ತೆಗೆಯುವಾಗ ಎಲ್ಲಿ ಕೊರೊನಾ ಸೊಂಕು ತಗಲುತ್ತದೋ ಎನ್ನುವ ಭೀತಿಯಲ್ಲಿದ್ದಾರೆ. ಈ ಶಾಲೆಯ ಶೌಚಾಲಯವನ್ನು ನೋಡುವುದಿರಲಿ ಶಾಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಕ್ಷರ ದಾಸೋಹದ ಕೊಠಡಿಯಲ್ಲಿ ದಿನನಿತ್ಯ ಅಸಹ್ಯವನ್ನು ತೆಗೆದು ಅಡುಗೆ ಮಾಡಬೇಕಾಗುತ್ತದೆ ಎಂದು ಶಾಲೆಯ ಆಯಾ ತಿಳಿಸುತ್ತಾರೆ.

      ಉರ್ದು ಶಾಲೆಯ ಶಿಕ್ಷಕರಾದ ಮಂಜಪ್ಪ ಹೇಳುವಂತೆ ನಮಗೆ ಸುತ್ತಮುತ್ತಲ ಹಾಳಾಗಿರುವ ಕಟ್ಟಡಗಳನ್ನು ಮತ್ತು ಮೈದಾನದ ತುಂಬಾ ಇರುವ ತ್ಯಾಜ್ಯವನ್ನು ತೆಗೆಸಿದರೆ ಉತ್ತಮ ಮೈದಾನವಾಗುತ್ತದೆ. ನಮ್ಮ ಶಾಲೆಗೆ ಮಕ್ಕಳ ದಾಖಲಾತಿಯು ಹೆಚ್ಚುತ್ತದೆ. ಶಾಲೆಯು ನಡೆಯುತ್ತಿರ ಬೇಕಾದರೆ ಯಾವುದೇ ಅಂಜು-ಅಳಿಕೆ ಇಲ್ಲದೆ ಮೂತ್ರವಿಸರ್ಜನೆಯನ್ನು ಗೋಡೆಯಮೇಲೆ ಮಾಡುತ್ತಾರೆ ಮತ್ತು ಶಾಲೆಯ ಆವರಣದಲ್ಲೇ ಕುಡಿಯುತ್ತಾರೆ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಮೈದಾನದಲ್ಲಿನ ತ್ಯಾಜ್ಯವನ್ನು ತೆಗೆಸ ಬೇಕೆಂದು ಒತ್ತಾಯಿಸಿದ್ದಾರೆ.

    ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಗಣನೀಯವಾಗಿ ಹೆಚ್ಚುತ್ತಿದೆ ಈ ಸಂದರ್ಭದಲ್ಲಿ ಶಾಲೆಗಳ ಸ್ಥಿತಿ ಹೀಗಿದ್ದರೆ ಯಾರು ತಾನೆ ಮಕ್ಕಳನ್ನು ಸೇರಿಸುತ್ತಾರೆ ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಿಸಿ ಸರಿಪಡಿಸದಿದ್ದರೆ ಈ ಶಾಲೆಗಳಿಗೆ ಮಕ್ಕಳನ್ನು ಯಾರು ಸೇರಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap