ರೂ.15 ಸಾವಿರ ಕೋಟಿ ಹಣ ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ ಬಳಕೆಯಾಗಲಿ:ಎಸ್‍ಆರ್ ಹಿರೇಮಠ

ಬಳ್ಳಾರಿ

       ಸುಪ್ರೀಂ ಕೋರ್ಟ್‍ನ ಆದೇಶವನ್ನು ಸ್ವಾಗತಿಸಿರುವ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ ಅವರು ರೂ.15 ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶಗಳ ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

        ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 25 ಸಾವಿರ ಕೋಟಿ ಹಣವನನು ಗಣಿಬಾದಿತ ಜನರ ಉಪಜೀವನಕ್ಕೆ ಬಳಕೆಯಾಗಬೇಕು. ಅವರ ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಪುನಶ್ಚೇತನಕ್ಕಾಗಿ ಪರಿಣಾಮಕಾರಿಯಾಗಿ ಬಳಸಬೇಕು. ಇಲ್ಲದೇ ಹೋದರೆ ನ್ಯಾಯಾಂಗ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

         ದೇಶದ ಅತಿ ದೊಡ್ಡ ಕಬ್ಬಿಣ ಅದಿರಿನ ಹಗರಣದ ಕೇಂದ್ರಬಿಂದುವಾದ ಸಂಡೂರು ಭಾಗದಲ್ಲಿ ವ್ಯವಸ್ಥಿತ ಹಾಗೂ ಪರಿಣಾಮಕಾರಿ ಅಧ್ಯಯನದ ವರದಿಯನ್ನು ಪ್ರಶಾಂತ ಭೂಷಣ್ ಪರಿಣಾಮಕಾರಿ ವಾದ ಮಂಡಿಸಿದ್ದನ್ನು ಸ್ಮರಿಸಿದ ಅವರು, ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿ ಹಾಗೂ ಸಪಸ ನಿಯೋಗ ಕಳೆದ ಅಕ್ಟೋಬರ್ ನಲ್ಲಿ ಅಭಿವೃದ್ಧಿ ಕಮೀಷನರನ್ನು ಭೇಟಿ ಮಾಡಿ ನಂಜುಂಡಪ್ಪ ಕಮಿಟಿ ವರದಿಯಂತೆ ಹಣವನ್ನು ಕಾಳಜಿಯಿಂದ ಬಳಕೆ ಮಾಡುವಂತೆ ಒತ್ತಾಯಿಸಿದರು.

        ಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಜನವಿರೋಧಿ ಎನ್‍ಡಿಎ ಸರ್ಕಾರ ಹಾಗೂ ಸಂಘ ಪರಿವಾರಗಳನ್ನು ಜನತೆ ದೂರ ಇಡಬೇಕು. 1977ರಲ್ಲಿ ಸಿವಿಲ್ ಸೊಸೈಟಿಯು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸಿದ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರನ್ನು ಸೋಲಿಸಿದಂತೆ ಇಂದಿನ ಗಂಭೀರ ಪರಿಸ್ಥಿತಿಗೆ ಕಾರಣರಾದ ಮೋದಿ ಅವರನ್ನು ಸೋಲಿಸುವಂತೆ ಕರೆ ನೀಡಿದರು.

         ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್, ಸಿಟಿಜನ್ ಫಾರ್ ಡೆಮಾಕ್ರಸಿ, ಗಣಿಬಾಧಿತ ಜನರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಶ್ರೀಶೈಲ ಆಲದಹಳ್ಳಿ, ಚಂದ್ರಶೇಖರ ಮೇಟಿ, ಎ.ದೇವದಾಸ, ಐಜಿ ಪುಲ್ಲಿ, ಆರ್.ಸೋಮಶೇಖರಗೌಡ, ಹೊನ್ನೂರುಸಾಬ, ಶಿವಾನಂದಯ್ಯ ಹೆಚ್‍ಎಂ. ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link