ಶ್ರೀ ವಡಕರಾಯ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮುಲು

ಹೊಸಪೇಟೆ

     ವೈಯಕ್ತಿಕ ಹಿತಾಸಕ್ತಿಗೆ ಎಂದು ನನ್ನನ್ನು ಏನನ್ನು ಬಯಸದ ನಾನು ರಾಜ್ಯ ಸುರಕ್ಷೆಗಾಗಿ ಕಾಲಕಾಲಕ್ಕೆ ಮಳೆಯಾಗಲಿ ಬೆಳೆಯಾಗಲಿ ರೈತಾಪಿ ವರ್ಗ ಖುಷಿಯಿಂದ ಇರಲಿ ಎನ್ನುವ ಸದುದ್ದೇಶದಿಂದ ದೇವಾರಾಧನೆ ಮಾಡುವ ಪ್ರತಿ ಕ್ಷಣವೂ ಸಂಕಲ್ಪಿಸುತ್ತೇನೆ ಎಂದು ಮಾಜಿ ಸಚಿವ, ಹಾಲಿ ಶಾಸಕ, ಶ್ರೀರಾಮು ತಿಳಿಸಿದ್ದರು.

     ಅವರು ಶ್ರೀ ವಡಕರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಬಹಳ ದಿನಗಳಿಂದ ಸ್ವಾಮಿ ದರ್ಶನ ಮಾಡಿ ಹರಕೆ ತೀರಿಸುವ ಹಂಬಲ ಬಾಲ್ಯದ ಹೊಂದಿದ್ದೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರಥಮ ಪೂಜೆಯನ್ನು ಇಲ್ಲೇ ಸಲ್ಲಿಸಿದ್ದೆ.

     ಈ ಹಿಂದೆ ಮೊಳಕಾಲ್ಮುರು ಚುನಾವಣೆಗೆ ಸ್ಪರ್ಧಿಸಲು ಹೋಗುವಾಗಲೂ ಇಲ್ಲಿಂದ ಪೂಜೆ ನವಗ್ರಹ ಪೂಜೆ ಹೋಮ ಗೋಪೂಜೆ ಮಾಡಿ ಹೋಗಿದ್ದನ್ನು ಸ್ಮರಿಸಿದ ಅವರು ಇಂದು ಶನಿವಾರ ಆ ಸ್ವಾಮಿಯ ವಾರ ಸ್ಮರಿಸಿಕೊಂಡು ದೇವರ ದರ್ಶನಕ್ಕೆ ಬಂದೆನು ಎಂದರು ದೇಶದಲ್ಲಿ ನರೇಂದ್ರ ಮೋದಿ ಆಡಳಿತ ಮತ್ತೊಮ್ಮೆ ಕೇಂದ್ರದಲ್ಲಿ ಸ್ಥಾಪನೆ ಆಗುವುದರ ಮೂಲಕ ದೇಶ ಸುಭೀಕ್ಷೆಯಾಗಲಿ ರೈತರ ಬಾಳು ಹಸನಾಗಬೇಕು ದೇಶ ಭದ್ರವಾಗಿಲು ಕೇಂದ್ರದಲ್ಲಿ ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

     ತುಂಗಭದ್ರೆಯ ನೀರಿನ ಪ್ರಮಾಣ ಕುಸಿದಿದ್ದು ಶೀಘ್ರ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಕುಡಿಯಲು ಮತ್ತು ಜಾನುವಾರುಗಳಿಗೆ ತೊಂದರೆ ಆಗಬಾರದೆಂಬ ಸದುದ್ದೇಶವನ್ನು ಹೊಂದಿದ್ದೇನೆಂದು ತಿಳಿಸಿದ ಅವರು ರಾಜ್ಯದಲ್ಲಿಯೂ ಸುಭಿಕ್ಷೆ ಕಾಲ ಬರುತ್ತದೆ ಎಂದರು

       ಸುಭಿಕ್ಷೆ ಕಾಲವೆಂದರೆ ರಾಜ್ಯಾಡಳಿತದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ ದೇವಸ್ಥಾನದ ಪೂಜೆಗೆ ಬಂದಿರುವ ನಾನು ರಾಜಕಾರಣ ಕುರಿತು ಮಾತನಾಡಲ್ಲ ಎಲ್ಲದಕ್ಕೂ ಕಾಲ ಉತ್ತರಿಸಲಿದೆ ಎಂದು ಮಾರ್ಮಿಕವಾಗಿ ಹೇಳಿದರು ಈ ಸಂದರ್ಭದಲ್ಲಿ ದೇವಸ್ಥಾನದ ಇತಿಹಾಸವನ್ನು ಕೂಲಂಕುಷವಾಗಿ ಅನಿಲ್ ಜೋಶಿ ತಿಳಿಸಿ ವಿಜಯನಗರ ಕಾಲಕ್ಕೂ ಈ ದೇವಸ್ಥಾನದೊಂದಿಗೆ ಸಂಬಂಧ ವಿವರಿಸಿದರು ರೈತ ಹಾಗೂ ಬಿಜೆಪಿ ಮುಖಂಡ ಗೋಸಲ ಭರಮಪ್ಪ ,ಜಂಬಾನಹಳ್ಳಿ ವಸಂತ, ದೇವರಮನೆ ಶ್ರೀನಿವಾಸ, ಪ್ರಿಯಾಂಕಾ ಜೈನ್, ಗುರುರಾಜ್ ಕುಲಕರ್ಣಿ, ಓಬಳೇಶ್ ,ಗುರಿಕಾರ್ ಶ್ರೀನಿವಾಸ ಇತರರು ಇದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link