ಮೋದಿ ಪ್ರಧಾನಿಯಾಗಲು ದೇವೇಂದ್ರಪ್ಪನವರನ್ನು ಗೆಲ್ಲಿಸಿ:-ಕೆ.ನೇಮರಾಜ್‍ನಾಯ್ಕ

ಹಗರಿಬೊಮ್ಮನಹಳ್ಳಿ

      ಮೋದಿಯವರ 5 ವರ್ಷಗಳ ಅಧಿಕಾರ ಅವಧಿಯಲ್ಲಿ ದೇಶ ಬಡತನದ ನಿರ್ಮೂಲನೆಯತ್ತ ಸ್ಪಷ್ಟ ಹೆಜ್ಜೆ ಇಟ್ಟಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10 ಮೀಸಲಾತಿ ತಂದಿದೆ. 2,11,694 ಕೋಟಿ ವೆಚ್ಚದಲ್ಲಿ ರೈತರ ಕಲ್ಯಾಣಕ್ಕಾಗಿ ದಾಖಲೆಯ ಬಜೆಟ್ ಹಂಚಿಕೆ ಯಾಗಿ ಅನ್ನಧಾತ ಸಖೀಭವ ಯೋಜನೆ ಜಾರಿಯಲ್ಲಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ ಹೇಳಿದರು.

        ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿ ದೇಶದಲ್ಲಿ 15,37,00,000 ಸಣ್ಣ ಉದ್ಯಮಿದಾರರು ಮುದ್ರಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರಿಂದ ಯುವಕರು ಉದ್ಯೋಗ ಪಡೆದು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಿಂದ 15 ಸಾವಿರ ಸ್ಟಾರ್ಟ್‍ಅಫ್ ಉದ್ಯಮಿಗಳಿಂದ ಲಕ್ಷಾಂತರ ಉದ್ಯೋಗ ಸೃಷ್ಠಿಯಾಗಿದೆ ಈ ಎಲ್ಲಾ ಕಾರಣಗಳಿಂದಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಸಂಕಲ್ಪಗಳ ಸಾಕಾರವಾಗಿರುವುದರಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕಿದೆ.

       ಇನ್ನು ನಿಮ್ಮ ಜಿಲ್ಲೆಯವನೇ ಆದ ನಾನು ಮೊದಲಿನಿಂದಲೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯನಾಗಿದ್ದು ಜನರೊಂದಿಗೆ ಕೂಡಿ ಬೆಳೆದಿದ್ದೇನೆ. ಶ್ರೀಸಾಮಾನ್ಯರ ಹಾಗೂ ಬಡವರ ಮತ್ತು ರೈತರ ಕಷ್ಟ ಸುಖಗಳನ್ನು ಅರಿತಿರುವ ಮೂಲತಃ ರೈತನಾಗಿರುವ ನನ್ನನ್ನು ಈ ಬಾರಿ ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನ ಸೇವಕರನ್ನಾಗಿ ಮಾಡಲು ಸನ್ನದ್ದರಾಗಿರುವ ಯುವಶಕ್ತಿ ನನಗೆ ಮತಹಾಕುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಮಾಡಲು ಸಹಕರಿಸಿ ಎಂದರು.

       ಮಾಜಿ ಶಾಸಕ ಕೆ.ನೇಮರಾಜ್‍ನಾಯ್ಕ ಮಾತನಾಡಿ ನರೇಂದ್ರಮೋದಿಯವರ 5 ವರ್ಷದ ಅಧಿಕಾರ ಅವಧಿಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಫಸಲ್ ಭೀಮಾಯೋಜನೆಯಡಿ 3742 ರೈತರಿಗೆ ವಿಮಾಸೌಲಭ್ಯ ದೊರೆತಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 15.715 ಮನೆಗಳು ಮಂಜೂರಾಗಿವೆ. ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 1,45,738 ಶೌಚಾಲಯ ನಿರ್ಮಾಣವಾಗಿವೆ.

         ಗ್ರಾಮ ಜ್ಯೋತಿ ಯೋಜನೆಯಡಿ ಜಿಲ್ಲೆಗೆ 79.60 ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೇ ಎಲ್ಲಾ ಚತುಷ್ಪದ ರಸ್ತೆಗಳು ಕಾಮಗಾರಿ ಜಾರಿಯಲ್ಲಿವೆ. ಇಷ್ಟೆಲ್ಲಾ ಯೋಜನೆಗಳು ಜಾರಿಯಾಗಿದ್ದರೂಸಹ ವಿರೋಧ ಪಕ್ಷದವರು ಜಿಲ್ಲೆಗೆ ಮೋದಿಯವರ ಕೊಡುಗೆ ಏನು ಎಂದು ಕೇಳುತ್ತಾರೆಂದರೆ ಅವರಂತಹ ಮೂರ್ಕರು ಇನ್ನೊಬ್ಬರಿಲ್ಲ. ಮೊನ್ನೆ ನಡೆದ ಮೊದಲನೇ ಹಂತದ ಚುನಾವಣೆಯಲ್ಲಿ ತನ್ನ ಓಟನ್ನೇ ಚಲಾಯಿಸದ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಜಿಲ್ಲೆಯಲ್ಲಿ ಜನರ ಬಳಿ ಮತಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಆದ್ದರಿಂದ ನಮ್ಮ ಜಿಲ್ಲೆಯವರೇ ಆದ ರೈತ ಸಮುದಾಯದ ಪ್ರತೀಕದಂತಿರುವ ವೈ.ದೇವೇಂದ್ರಪ್ಪನವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸೋಣ ಎಂದರು.

       ಪಟ್ಟಣದ ನೀರಾವರಿ ಇಲಾಖೆಯ ಆಂಜನೇಯ ಸ್ವಾಮಿದೇವಸ್ಥಾನದಿಂದ ಆರಂಭವಾದ ಬಿಜೆಪಿ ಕಾರ್ಯಕರ್ತರ ಭರ್ಜರಿ ರೋಡ್ ಶೋ ಪಟ್ಟಣದ ಬಸವೇಶ್ವರ ಸರ್ಕಲ್, ಸಿನಿಮಾ ಸರ್ಕಲ್, ಕೂಡ್ಲಿಗಿ ಸರ್ಕಲ್ ಮುಖಾಂತರ ತೇರುಬೀದಿ ಮಾರ್ಗವಾಗಿ ಹಲವುಕಡೆ ನಡೆಯಿತು. ಈ ಬೃಹತ್ ರ್ಯಾಲಿಯಲ್ಲಿ ಬಿಜೆಪಿಯ ಸುಮಾರು 3000 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲೆಲ್ಲೂ ಕೇಸರಿ ಬಾವುಟಗಳು ಹಾರಾಡುತ್ತಿದ್ದವು. ನಗರವೆಲ್ಲಾ ಸಂಪೂರ್ಣ ಕೇಸರಿಮಯವಾಗಿತ್ತು.

       ಈ ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್ ಕಾರ್ಯದರ್ಶಿ ಜೆ.ಬಿ.ಶರಣಪ್ಪ, ಡಾ|| ಅಜ್ಜಯ್ಯ, ಪುರಸಭೆ ಸದಸ್ಯ ಮೃತ್ಯುಂಜಯ ಬದಾಮಿ, ಹುಳ್ಳಿ ಮಂಜುನಾಥ, ಲಕ್ಷ್ಮಣ, ನಗರಘಟಕ ಅಧ್ಯಕ್ಷ ಸಂದೀಪ್ ಶಿವಮೊಗ್ಗ, ಮುಖಂಡರಾದ ಕಿನ್ನಾಳ್ ಸುಭಾಷ್, ಪನ್ನಂಗಧರ, ಸೂರ್ಯಬಾಬು, ರಾಜಲಿಂಗಪ್ಪ, ಕಲ್ಲಳ್ಳಿ ನಿಂಗಪ್ಪ, ಸಿದ್ದಪ್ಪ, ಸೇರಿದಂತೆ ಸಾವಿರಾರು ಮುಖಂಡರು ಹಾಗೂ ಕರ್ಯಕರ್ತರು ಈ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link