ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದ ಸಣ್ಣ ಉಳಿತಾಯ ಕಚೇರಿಯಲ್ಲಿರುವ ದೂರು ನಿರ್ವಹಣಾ ಕೋಶಕ್ಕೆ ಚುನಾವಣಾ ವೆಚ್ಚ ವೀಕ್ಷಕಿ ಅನಿತಾ ಮಹಾದಾಸ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದುವರಗೆ ಬಂದಿರುವ ದೂರುಗಳು ಮತ್ತು ವಿಲೇವಾರಿಗಳ ಕುರಿತು ಮಾಹಿತಿ ಪಡೆದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಆನ್‍ಲೈನ್ ಮತ್ತು ಲಿಖಿತ ದೂರುಗಳ ಹಾಗೂ ದೂರುವಾಣಿ ಮೂಲಕ ಬರುತ್ತಿರುವ ದೂರುಗಳ ಕುರಿತು ವಿಚಾರಿಸಿದರು.
ಸುವಿಧಾ,ಜಿಪಿಎಸ್ ಹಾಗೂ ಇನ್ನೀತರ ಮಾಹಿತಿಗಳ ಕುರಿತು ವೆಚ್ಚ ವೀಕ್ಷಕಿ ಅನಿತಾ ಮಹಾದಾಸ್ ಅವರಿಗೆ ನೋಡಲ್ ಅಧಿಕಾರಿ ಹಲೀಮಾ ಮತ್ತು ಮೇಲ್ವಿಚಾರಕ ಅಧಿಕಾರಿ ಸುಧೀಶಕುಮಾರ್ ಅವರು ವಿವರಿಸಿದರು.ಈ ಸಂದರ್ಭದಲ್ಲಿ ವೆಚ್ಚ ವೀಕ್ಷಕರ ಲೈಸನಿಂಗ್ ಅಧಿಕಾರಿ ದೇವರಾಜ್ ಹಾಗೂ ದೂರು ನಿರ್ವಹಣಾ ಕೋಶದ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








