ಹಗರಿಬೊಮ್ಮನಹಳ್ಳಿ
ಸರ್ಕಾರಿ ಶಾಲೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ದರ್ಶನ ಯೋಜನೆ ಅಡಿಯಲ್ಲಿ, ತಾಲೂಕಿನಿಂದ ಕೈಗೊಂಡ 4ದಿನದ ಪ್ರವಾಸಕ್ಕೆ ಬಿಇಒ ಶೇಖರಪ್ಪ ಎಂ.ಹೊರಪೇಟೆ ಭಾನುವಾರ ಬಿಇಒ ಕಚೇರಿಯ ಆವರಣದಿಂದ ಚಾಲನೆ ನೀಡಿದರು.
ಚಾಲನೆ ನೀಡಿದನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಪ್ರವಾಸ ಯೋಜನೆಯಲ್ಲಿ, ತಾಲೂಕಿನ 56 ಶಾಲೆಗಳಿಂದ 102 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ, ಅವರ ರಕ್ಷಣೆಗಾಗಿ 7ಜನ ಶಿಕ್ಷಕರು ಪ್ರವಾಸಕ್ಕೆ ತೆರಳಲಿದ್ದಾರೆ. ಈ ಯೋಜನೆಯ ಉದ್ದೇಶವೆಂದರೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಅಲ್ಲದೆ ಇತಿಹಾಸ ತಿಳಿದುಕೊಳ್ಳಬೇಕು ಮತ್ತು ಪಾಠ್ಯಕ್ರಮಕ್ಕೆ ಅನುಗುಣವಾಗಿ ಸಮಾಗ್ರ ಮಾಹಿತಿ ಪಡೆಯಲು ಅನುಕೂಲವಾಗಿದೆ ಎಂದರು.
ನಂತರ ಶಿಕ್ಷಣ ಸಂಯೋಜನೆ ಮುಸ್ತಾಕ್ ಮಾತನಾಡಿ, ಒಂದೊಂದು ಶಾಲೆಯಿಂದ ಒಬ್ಬಿಬ್ಬರು ಸೇರಿ 102 ವಿದ್ಯಾರ್ಥಿಗಳಾಗಿದ್ದು, ಸರ್ಕಾರಿ ಬಸ್‍ಗಳಲ್ಲಿ ಪ್ರವಾಸ ಕೈಗೊಂಡು ಬೆಂಗಳೂರು, ಮೈಸೂರು ಹಾಗೂ ಮಡಿಕೇರಿ ಮತ್ತು ಮಾರ್ಗಮಧ್ಯದಲ್ಲಿ ಬರುವ ಕೆಲ ಸ್ಥಳಗಳನ್ನು ವೀಕ್ಷಿಸಲಾಗುತ್ತದೆ ಎಂದು ತಿಳಸಿದರು.
ಈ ಸಂದರ್ಭದಲ್ಲಿ ಸಿಆರ್‍ಪಿ ಮೋರ್ನಾಳ್ ಎಂ.ಸುರೇಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಓಬಯ್ಯ, ಶಿಕ್ಷಕರಾದ ವಿ.ಬಿ.ಮಲ್ಲೇಶ್, ಕೊಟ್ರಪ್ಪ ಕೊಟಿಗಿ, ನಾಗರಾಜ್, ಕವಿತಾ, ವಿಜಯಾಲಕ್ಷ್ಮೀ, ನಬಿಸಾಬ್, ಅಲಬೂರು ಮುಖ್ಯ ಶಿಕ್ಷಕ ಬಿ.ಮಲ್ಲೇಶ್, ಕಡಲಬಾಳು ಮುಖ್ಯಶಿಕ್ಷಕ ಎಸ್.ಕರಿಯಪ್ಪ ಮುಂತಾದವರಿದ್ದರು.