ವಿಜಯನಗರ ಕ್ಷೇತ್ರ ಬಿಜೆಪಿ ಶಕ್ತಿ ಕೇಂದ್ರ:ಶೆಟ್ಟರ್

ಹೊಸಪೇಟೆ:

       ಉಪಚುಣಾವಣೆಯಲ್ಲಿ ಅಧಿಕಾರ, ಹಣ ಬಲದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದು ನಿಜವಾದ ಗೆಲುವಲ್ಲ ಎಂದು ಲೋಕಸಭೆ ಕ್ಷೇತ್ರದ ಉಸ್ತುವಾರಿ ಜಗದೀಶ್ ಶೆಟ್ಟರ್ ಹರಿಹಾಯ್ದರು.ನಗರದ‌ ಪಕ್ಷದ ಕಾರ್ಯಕರ್ತರ ಸಭೆಯ ಉದ್ಘಾಟಿಸಿ ಮಾತನಾಡಿದರು.

      ಉಪ ಚುನಾವಣೆಯೇ ಬೇರೆ, ಸಾರ್ವತ್ರಿಕ ಚುನಾವಣೆ ಬೇರೆಯಾಗಿದೆ. ಸಂಸದ ಉಗ್ರಪ್ಪ ಗೆಲುವುದಕ್ಕೆ ಮುನ್ನ ಕರುಣಾಕರ ರೆಡ್ಡಿ, ರಾಮುಲು, ಶಾಂತಾ ಗೆಲುವು ಸಾಧಿಸಿರುವುದನ್ನು ಯಾರು ಮರೆಯಬಾರದು ಎಂದು ಹೇಳಿದರು.
ಸುಂಟರಗಾಳಿ, ಬಿರುಗಾಳಿ, ಸುನಾಮಿ ರೀತಿಯಲ್ಲಿ ಮೋದಿ ಅವರ ಅಲೆ ಎದಿದ್ದೆ ಎಂದರು.

      ಜನಾರ್ದನ ಪೂಜಾರಿ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನವರ ‌ಮನದಲ್ಲಿಯೂ ಮೋದಿ ನೆಲೆಸಿದ್ದಾರೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.

      ಪ್ರಧಾನಿ ಮೋದಿ ರವರು ದೇಶದ ಸುರಕ್ಷತೆ, ಜನರ ಕಲ್ಯಾಣಕ್ಕಾಗಿ ಹಲವು ಜನೋಪಯೋಗಿ ಕಾರ್ಯಗಳನ್ನು ಜಾರಿಗೊಳಿಸಿದ್ದಾರೆ. ಬಿಜೆಪಿ ಸಾಧನೆಯನ್ನು ‌ಜನರಿಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಮಹಾ ಮೈತ್ರಿ ಮಾಡಿಕೊಂಡು ಚುನಾವಣೆಗೆ ಮುಂದಾಗಿರುವ ಪಕ್ಷಗಳ ಮುಂಖಡರೆಲ್ಲರೂ ಪ್ರಧಾನಿಯಾಗುವ ಕನಸು‌ಕಂಡಿದ್ದಾರೆ. ಅದು ನನಸಾಗಲ್ಲ. ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಶಾಸಕ ಶ್ರೀರಾಮುಲು ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಆಯ್ಕೆಯಾದ ಉಗ್ರಪ್ಪ ಉಗ್ರವಾಗಿ ಭಾಷಣಮಾಡಬಹುದು, ಆದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

        ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದ ಕಾರ್ಯಕರ್ತರು ಪ್ರಧಾನಿ ಮೋದಿ ಗೆಲುವಿಗೆ‌ ಶ್ರಮಿಸಬೇಕು. ಏಪ್ರಿಲ್ 2 ರಂದು ನಾಮಪತ್ರ ಸಲ್ಲಿಕೆಗೆ‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದೇವೇಂದ್ರಪ್ಪ ಗೆಲುವಿಗೆ ಶ್ರಮಿಸಬೇಕು ಎಂದರು.

        ಜಿಲ್ಲೆಯಲ್ಲಿ ಬಿಜೆಪಿಗೆ ವಿಜಯನಗರ ಕ್ಷೇತ್ರ ಶಕ್ತಿ ಕೇಂದ್ರವಾಗಿದೆ. ಬಿಜೆಪಿಗೆ ದೇಶ ಮುಖ್ಯ ಎಂದರು.ಉಪಚುಣಾವಣೆ‌ ಪರಿಸ್ಥಿಯೇ ಬೇರೆ, ಸಾರ್ವತ್ರಿಕ ಚುಣಾವಣೆಯೇ ಬೇರೆಯಾಗಿದೆ. ಉಪ ಚುನಾವಣೆಯಲ್ಲಿ ರಾಜ್ಯ ಸರಕಾರವೇ ಬಂದು ಕೂತು ದಬ್ಬಾಳಿಕೆಯಿಂದ ಗೆಲುವು ಸಾಧಿಸಿದೆ. ಉತ್ತರದಲ್ಲಿ ವಾರಣಾಸಿ ಅಭಿವೃದ್ಧಿ ಮಾಡಿದಂತೆ ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ‌ಹಂಪಿಯ ಅಭಿವೃದ್ಧಿಗೆ ಕೇಂದ್ರ ಸರಕಾರ ಸಾಕಷ್ಟು ಅನುದಾನ ಬಿಡುಗಡೆಮಾಡಿದೆ ಎಂದರು.

       ದೇಶದಲ್ಲಿ ಕಾಂಗ್ರೆಸ್ ನೆಲ್ಲಕಚ್ಚಿದೆ. ಅದ್ಕೆ ಎಲ್ಲಿಯೂ ನೆಲೆಯಿಲ್ಲ. ಹಲವು ಕಡೆಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವ ಸ್ಥಿತಿಗೆ ಬಂದಿದೆ. ದೇಶದಲ್ಲಿ ಈ ಬಾರಿ ನಡೆಯುವ ಲೋಕಸಭೆ ಚುನಾವಣೆ ಮಹತ್ವದಾಗಿದೆ ಎಂದು ಹೇಳಿದರು.
ಕಾರ್ಯಕರ್ತರು ಸೈನಿಕರಂತೆ ಚುನಾವಣೆಯಲ್ಲಿ ಕಾರ್ಯನಿರ್ವಯಿಸಬೇಕು ಎಂದರು.

       ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ, ಈ ಚುನಾವಣೆ ದೇಶದ ಉಳಿವಿನ ಪ್ರಶ್ನೆಯಾಗಿದೆ. ಮೊತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಜನಾರ್ಶಿವಾದಿಂದ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವುದಕ್ಕೆ ಶ್ರಮಿಸುವೆ. ಏ. 2 ರಂದು ನಾಮಪತ್ರ ಸಲ್ಲಿಸಲು ಆಗಮಿಸಬೇಕು ಎಂದು ಮನವಿ ಮಾಡಿದರು.

        ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವಣ್ಣ ಗೌಡ, ರಾಣಿ ಸಂಯುಕ್ತಾ, ಮಾಜಿ ಶಾಸಕ ಮೃತ್ಯುಂಜಯ ಜಿನಗಾ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್, ಮುಖಂಡರಾದ ಶ್ರೀನಿವಾಸ ರೆಡ್ಡಿ, ಕಟಿಗಿ ರಾಮಕೃಷ್ಣ, ಸಾಲಿ ಸಿದ್ಧಯ್ಯಸ್ವಾಮಿ, ವಸಂತ ಕುಮಾರ್ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap