ಹಾವೇರಿ
ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದು ಪವಿತ್ರವಾದ ಕೆಲಸ ಎಂದು ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು .
ಶನಿವಾರ ನಗರದ ಜ್ಯೋತಿ ಬುದ್ಧಿಮಾಂಧ್ಯ ವಸತಿಯುತ ಮಕ್ಕಳ ಶಾಲೆಯಲ್ಲಿ ಬರೋಡಾ ಬ್ಯಾಂಕಿನ್ 112 ನೇ ಸಂಸ್ಥಾಪಕ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ನೋಟಬುಕ್ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಮಕ್ಕಳನ್ನು ತುಂಬಾ ಶಿಸ್ತನಿಂದ ಬೆಳಸಿದ್ದಿರಿ, ಅವರೊಂದಿಗೆ ಬೆರೆಯಲು ತಾಳ್ಮೆ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಬರೋಡ ಬ್ಯಾಂಕೀನ್ ವ್ಯವಸ್ಥಾಪಕ ಎನ್.ಜಿ.ಪ್ರಭುದೇವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಎಂದರೆ ಕೇವಲ ಸಾಲ ಕೊಡುವುದು ಸಾಲ ವಸೂಲಿ ಮಾಡವುದು ಮತ್ತು ಗ್ರಾಹಕ ಸೇವೆಯನ್ನು ಒದಗಿಸುವುದು ಅಷ್ಟೆ ಅಲ್ಲ. ಸಿ ಎಸ್.ಆರ್(ಕಾರ್ಪೋರೆಷನ್ ಸೋಸಿಯಲ್ ರೆಸ್ಪಾನ್ಸಬಿಲಿಟಿ) ನಿಯಮದಡಿ ಬ್ಯಾಂಕಿನ ಲಾಭದಲ್ಲಿ ನಿಗಧಿತ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಮಿಸಲಿಡಬೇಕು. ಈ ನಿಯಮದಡಿ ಸಿ.ಎಸ್.ಆರ್ ಇಂದು 900 ಕೋಟಿ ರೂಪಾಯಿಯನ್ನು ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡುತ್ತಿದೆ ಎಂದರು .ಕಾರ್ಯಕ್ರಮದಲ್ಲಿ ದೇನಾ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಗಾಜು ಕೈಗಾರಿಕಾ ಘಟಕದ ಮುಖ್ಯಸ್ಥರಾದ ರವಿ ಮುಧೋಳ, ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ