ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟಾಂಡದಲ್ಲಿ ಸಾರ್ವಜನಿಕರಿಗೆ ಬಿದಿನಾಟಕದ ಮೂಲಕ ಮತದಾನದ ಜಾಗೃತಿ.

ಹಾವೇರಿ

      ಜಿಲ್ಲಾ ಪಂಚಾಯತಿ, ಹಾಗೂ ತಾಲೂಕ ಲೋಕ ವಯಸ್ಕರ ಶಿಕ್ಷಣ ಸಮಿತಿ ಮತ್ತು ತಾಲೂಕ ಪಂಚಾಯತಿ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಾವೇರಿ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಲ್ಲಿ ವಿವಿಧ ಗ್ರಾಮಗಳಿಗೆ ಹೋಗುವ ನೆರೆದ ಸಾರ್ವಜನಿಕರಿಗೆ ಬಿದಿನಾಟಕದ ಮೂಲಕ ಮತದಾರರ ಜಾಗೃತಿ ಜರುಗಿಸಲಾಯಿತು.

       ಸದರಿ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಮತಿ ಅನ್ನಪೂರ್ಣ ಮುದುಕಮ್ಮನವರ ಕಂಜಿರಾ (ತಮಟೆ) ಬಾರಿಸುವುದರ ಮೂಲಕ ಬಿದಿನಾಟಕವನ್ನು ಉದ್ಗಾಟಿಸಿ, ನಂತರ ಮಾತನಾಡಿ ಪ್ರತಿಯೊಬ್ಬ ಪ್ರಜೆಯು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಹೇಳಿದರು.

       ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ವಾಹನಗಳ ಮೂಲಕ ಸ್ಟಿಕ್ಕರ್ಸ ಹಾಗೂ ಕರಪತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂಧರ್ಭದಲ್ಲಿ ಮತದಾನ ಅತ್ಯಂತ ಪವಿತ್ರ ಹಕ್ಕು, ಪ್ರಜಾಪಭುತ್ವದ ಬಲವರ್ದನೆಗಾಗಿ ಎಲ್ಲಾರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಹಾಗೂ ಮತದಾನದಲ್ಲಿ ಭಾಗವಹಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕಾ ವಯಸ್ಕರ ಶಿಕ್ಷಣ ಮತ್ತು ತಾಲೂಕ ಪಂಚಾಯತ ಸಿಬ್ಬಂದಿ ವರ್ಗದವರು, ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link