ಹಾನಗಲ್ಲ :
ನಮ್ಮ ಜವಾಬ್ದಾರಿಗಳನ್ನು ನಾವು ಶ್ರದ್ಧೆಯಿಂದ ಹೇಗೆ ನಿರ್ವಹಿಸುತ್ತೇವೆಯೋ ಮತದಾನವೂ ನಮಗಿರುವ ಅಮೂಲ್ಯ ಹೊಣೆಗಾರಿಕೆ ಎಂದರಿತು ಮತದಾನದಲ್ಲಿ ಪಾಲ್ಗೊಂಡು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹಾನಗಲ್ಲ ತಾಲ್ಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಅಭಿಪ್ರಾಯಪಟ್ಟರು.
ಹಾನಗಲ್ಲ ತಾಲೂಕಿನ ಕೊಂಡೋಜಿ ವಡ್ಡರಗೇರಿಯಲ್ಲಿ ಜನತೆಗೆ ವಿವಿಪ್ಯಾಟ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ವಿವಿರ ನೀಡಿದ ಅವರು, ಆದರ್ಶ ರಾಜ್ಯ ನಿರ್ಮಾಣಕ್ಕೆ ಅಧ್ಯತೆ ನೀಡಬೇಕಾಗಿದ್ದು ಮತದಾನ ಕಡ್ಡಾಯವಾಗಬೇಕು. ಈ ಬಾರಿ ಶೇಕಡಾ ನೂರರಷ್ಟು ಮತದಾನ ಮಾಡುವ ಮೂಲಕ ದೇಶಭಕ್ತಿ ಮೆರೆಯಬೇಕಾಗಿದೆ. ಭಾರತ ದೇಶದಲ್ಲಿರುವ ಪ್ರತಿಯೊಬ್ಬರೂ ನಮ್ಮ ಕರ್ತವ್ಯದ ಭಾಗವಾಗಿರುವ ಮತದಾನದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ಮತ ಚಲಾಯಿಸಿದಾಗ ಮಾತ್ರ ನಮಗೆ ಬೆಲೆ ಇರುತ್ತದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಸಿ.ಆರ್.ಪಿ. ಕುಮಾರ ಗೋಣಿಮಠ ಮಾತನಾಡಿ ದೇಶದ ಪ್ರಜೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವುಗಳು ಅಷ್ಟೇ ಜವಾಬ್ದಾರಿಯಿಂದ ಮತದಾನದಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಇದ್ದೂ ಇಲ್ಲದಂತಾಗಿಬಿಡುತ್ತೇವೆ. ನಿಮ್ಮ ಅಮೂಲ್ಯವಾದ ಮತ ದೇಶಕ್ಕೆ ಹಿತವನ್ನು ನೀಡುತ್ತದೆ. ಯಾವುದೇ ಪ್ರಭಾವಕ್ಕೊಳಗಾಗದೇ ಕಡ್ಡಾಯವಾಗಿ ಮತವನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಸೆಕ್ಟರ್ ಅಧಿಕಾರಿ ಬಿ.ಎಂ.ಬೇವಿನಮರದ ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿಯನ್ನು ಭೋಧಿಸಿದರು. ಮತದಾರರಿಗೆ ವಿವಿಪ್ಯಾಟ್ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ಮಾಡುವ ಮೂಲಕ ಮತದಾನದ ಪ್ರಕ್ರಿಯೆಯನ್ನು ತಿಳಿಸಿ ಹೇಳಿದರು. ಕಲ್ಲಾಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಾಯಕ್ಕ ಕೋಳಿ, ಮುಖ್ಯೋಪಾಧ್ಯಾಯ ಎಸ್.ಎಸ್.ಹಂಜೇರ, ಬಿ.ಎಲ್.ಓ. ಪ್ರವೀಣ ನಾಡಿಗೇರ, ಆಶಾ ಕಾರ್ಯಕರ್ತೆಯರಾದ ಸರೋಜಾ ಹೊಂಕಣದವರ, ಅಂಗನವಾಡಿ ಕಾರ್ಯಕರ್ತೆ, ಮುತ್ತವ್ವ ಗೌರಕ್ಕನವರ, ಅಬ್ದುಲ್‍ರಜಾಕ್ ಗೊಂದಿ, ಆನಂದ ಕುನ್ನೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ