ಶಿರಾ:
ನಗರದ ಕೋಟೆ ಬಡಾವಣೆಯ ಮೂಲಕ ಚೆನ್ನನಕುಂಟೆ ಗ್ರಾಮಕ್ಕೆ ಹೋಗುವ ರಸ್ತೆಯ ಸಮೀಪದಲ್ಲಿನ ಭೂದಿನ್ನೆ ಸ್ಮಶಾನದಲ್ಲಿ ಸಾರ್ವಜನಿಕರು ಹಾಗೂ ನಗರಸಭೆಯವರು ಕಸಕಡ್ಡಿಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದು ಈ ಕೂಡಲೇ ಸ್ಮಶಾನದಲ್ಲಿನ ಪರಿಸರವನ್ನು ಸಂರಕ್ಷಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಮಾರು ಅರ್ಧ ಎಕರೆಯಷ್ಟು ಜಮೀನು ಸ್ಮಶಾನಕ್ಕಾಗಿ ಚೆನ್ನಕುಂಟೆ ರಸ್ತೆಯಲ್ಲಿ ಮೀಸಲಾಗಿದ್ದು ಇಲ್ಲಿ ಆರಂಭದಲ್ಲಿ ವೀರಶೈವ ಸಮಾಜದವರು ಅಂತ್ಯ ಸಂಸ್ಕಾರ ಮಾಡುತ್ತಿದ್ದು ಈಗ ಎಲ್ಲಾ ಸಮಾಜದವರು ಕೂಡಾ ಅಂತ್ಯ ಸಂಸ್ಕಾರ ಮಾಡುತ್ತಿರುವುದು ಸರಿಯಷ್ಟೆ. ಅಂತ್ಯ ಸಂಸ್ಕಾರಕ್ಕಾಗಿ ಮೃತ ದೇಹಗಳನ್ನು ತಂದ ನೊಂದ ಕುಟುಂಬಗಳ ಕಣ್ಣಿಗೆ ನಗರಸಭೆ ಹಾಗೂ ಸ್ಥಳೀಯ ಜನತೆ ಈ ಸ್ಮಶಾನಕ್ಕೆ ತಂದು ಹಾಕುವ ತ್ಯಾಜ್ಯ ವಸ್ತುಗಳು ಕಣ್ಣಿಗೆ ರಾಚುತ್ತಿದ್ದು ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.