ಜೀವ ಜಲ ಸಂರಕ್ಷಣೆ ನಮ್ಮೇಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ

ಹಾವೇರಿ :

        ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಜಿ.ಪಂ. ಹಾವೇರಿ ಹಾಗೂ ಜನನಿ ಜಾನಪದ ಕಲಾತಂಡ ಯಕ್ಲಾಸಪುರ ಇವರ ಸಂಯುಕ್ತ ಆಶ್ರಯದಲ್ಲಿ ಜೀವ ಜಲ ಸಂರಕ್ಷಣೆ ನಮ್ಮೇಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಜರುಗಿತು.ಗ್ರಾಮೀಣ ಭಾಗದ ಜನರಿಗೆ ಮತ್ತು ರೈತರಿಗೆ ಕುಡಿಯುವ ನೀರನ್ನು ಮಿತವಾಗಿ ಬಳಸಿ, ನೀರು ಪೊಲಾಗದಂತೆ ಸಂರಕ್ಷಿಸಿ, ಶೌಚಾಲಯ ಬಳಸಿ, ಇಂಗು ಗುಂಡಿಗಳನ್ನು ನಿರ್ಮಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಿ, ಜಮೀನಿನ ಸುತ್ತಲೂ ಸಸಿಗಳನ್ನು ನೆಡಿ ಎಂದು ಜಾಗೃತಿ ಮೂಡಿಸಲಾಯಿತು.

       ರೈತರು ತಮ್ಮ ಜಮೀನಿನಲ್ಲಿ ಬದುಗಳನ್ನು ಹಾಕಿಸಿ, ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕುರಿತು ಮಾಹಿತಿಯನ್ನು ನೀಡಿದರು. ಹಾಗೂ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.ರೈತ ಗೀತೆ, ಸ್ವಚ್ಛತಾ ಗೀತೆ ಹೇಳುವುದರೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಜಲ ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಯೋಜನೆಗಳ ಹಾಗೂ ಅವುಗಳ ಅನುಷ್ಠಾನ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ಜಾಗೃತಿ ಮೂಡಿಸಲಾಯಿತು. ಗ್ರಾಮದ ಮುಖಂಡರಾದ ಶಿವಲಿಂಗಪ್ಪ ದಾಸಣ್ಣನವರ, ರಾಮಣ್ಣ ಬಂಕಾಪುರ, ವೀರನಗೌಡ ಲೆಕ್ಕನಗೌಡ್ರ, ಫಕ್ಕೀರಪ್ಪ ರಿತ್ತಿ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಶಿಕ್ಷಕ ವೃಂದದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link