ಯಾವುದೇ ಕೆಲಸ ಸಿಕ್ಕರೂ ನಾನು ಮಾಡುತ್ತೇನೆ ಎಂಬ ದೃಢ ನಿರ್ಧಾರ ಹೊಂದಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗಲಿದೆ- ಜಿ.ಸಿದ್ದಪ್ಪ

ಜಗಳೂರು :

      ಯಾವುದೇ ಕೆಲಸ ಸಿಕ್ಕರೂ ನಾನು ಮಾಡುತ್ತೇನೆ ಎಂಬ ದೃಢ ನಿರ್ಧಾರ ಹೊಂದಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಿ.ಸಿದ್ದಪ್ಪ ಹೇಳಿದರು

      ಪಟ್ಟಣದ ಹೋ.ಚಿ. ಬೋರಯ್ಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ , ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ದೇಶಿಸಿ ಅವರು ಮಾತನಾಡಿದರು.

       ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳವಣಿಗೆಯಿಂದ ಹಲವಾರು ಸಮಸ್ಯೆಗಳು ಉದ್ಬವಿಸಲು ಪ್ರಮುಖ ಕಾರಣವಾಗಿ ಪ್ರತಿವರ್ಷ ಲಕ್ಷನುಗಟ್ಟಲೇ ಪದವಿ ಮುಗಿಸಿದ ನಿರುದ್ಯೋಗಿಗಳು ಹೊರ ಬರುತ್ತಿದ್ದಾರೆ. ಇವರೆಲ್ಲರಿಗೂ ಸರಕಾರಿ ಉದ್ಯೋಗ ದೊರೆಯುದಿಲ್ಲ. ಸ್ವಯಂ ಉದ್ಯೋಗದ ಕಡೆ ಆಸಕ್ತಿ ವಹಿಸಬೇಕು. ಜೊತೆಗೆ ಕಂಪನಿಗಳಿಗೆ ಸೇರಿ ಉದ್ಯೋಗ ಪಡೆದು ಕುಟುಂಬ ನಿರ್ವಹಣೆ ಮಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

        ಜಿಲ್ಲಾ ಉದ್ಯೋಗಾಧಿಕಾರಿ ರುದ್ರಣ್ಣಗೌಡ ಮಾತನಾಡಿ ಹಲವಾರು ಕ್ಷೇತ್ರಗಳಲ್ಲಿ ಹೆರಳವಾದ ಅವಕಶವಿದ್ದು ಸದುಪಯೋಗ ಪಡೆಸಿಕೊಳ್ಳವಂತ ಆಸಕ್ತಿ ನಿಮ್ಮಲಿರಬೇಕು. ಖಾಸಗಿ ಕಂನಿಯಲ್ಲಿ ಕೆಲಸ ಮಾಡುತ್ತೇನೆ ಎಂಬ ದೃಡ ನಿರ್ಧರವನ್ನು ನಿವೆಲ್ಲರೂ ಹೊಂದಬೇಕು. ಕಾರಣ ಕೆಲವರಿಗೆ ಆಸಕ್ತಿ ಇರುವುದಿಲ್ಲ ಸೇರಿ ಕೆಲವೇ ದಿನಗಳಲ್ಲಿ ಬಿಟ್ಟು ಹೊಗುತ್ತಾರೆ. ಆದ ಕಾರಣ ನೀವು ಮೋದಲು ಆಸಕ್ತಿಯನ್ನು ಹೊಂದ ಬೇಕು ಎಂದರು , ಫುಡ್ ಪ್ರಾಡಕ್ಟ್ , ಸೆಲ್ಸ್ ಮ್ಯಾನೇಜರ್, ಸೂಪರ್ ವೈಜರ್ ಸೇರಿದಂತೆ ಹಲವಾರು ಉದ್ಯೋಗಗಳು ಇವೆ ಇವುಗಳಲ್ಲಿ ಸೇರಿಕೊಂಡಾಗ ಅನುಭವದ ಜೊತೆಗೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap