ಮಿಡಿಗೇಶಿ
ಅಂದಿನ ರಾಜ್ಯದ ಉನ್ನತಶಿಕ್ಷಣ ಮಂತ್ರಿ ಕ್ಯಾಬಿನೆಟ್ ಸಚಿವರು ಇಂದಿನ ಹಾಲಿ ರಾಜ್ಯದ ಉಪಮುಖ್ಯ ಮಂತ್ರಿಗಳಾಗಿರುವಂತಹ ಡಾ || ಜಿ. ಪರಮೇಶ್ವರ್‍ರವರು ಅಂದು ಮಧುಗಿರಿ ತಾಲ್ಲೂಕಿನ ಶಾಸಕರಾಗಿದ್ದರು ಇಂದು ಕೊರಟಗೆರೆ ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲೆಯ ಉಸ್ತುವಾರಿಸಚಿವರಾಗಿ ಅಧಿಕಾರ ನಡೆಸುತ್ತಿರುತ್ತಾರೆ
ಡಾ.ಬಿ.ಆರ್ ಅಂಬೇಡ್ಕರ್ ಭವನದ ಕಾಮಗಾರಿ ಪ್ರಾರಂಭಕ್ಕೆ ಐದು ಲಕ್ಷ ಮತ್ತೆ ಐದು ಲಕ್ಷ ಮತ್ತೊಮ್ಮೆ ಮಾಜಿ ಶಾಸಕ ಕೆ.ಎನ್ ರಾಜಣ್ಣನವರ ಅಧಿಕಾರದವಧಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಎರಡು ಲಕ್ಷ ಸಹ ಇಲ್ಲಿಯವರೆಗೆ ಡಾ||ಬಿ.ಆರ್ ಅಂಬೇಡ್ಕರ್ ಕಾಮಗಾರಿ ಪ್ರಾರಂಭಕ್ಕೆ ಒಟ್ಟು ಹನ್ನೆರಡು ಲಕ್ಷರೂಗಳ ಹಣ ವ್ಯಯವಾಯಿತಾದರೂ ಸಹ ಇಲ್ಲಿಯವರೆಗೆ ಡಾ||ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಅಪೂರ್ಣಗೊಂಡಿದ್ದು ಪೂರ್ಣವಾಗುವುದೇ ಎಂಬ ಯಕ್ಷ ಪ್ರಶ್ನೆ ತಾಲ್ಲೂಕಿನ ಜನರ ಮನದಲ್ಲಿದೆ.
ಡಾ||ಬಿ.ಆರ್ ಅಂಬೇಡ್ಕರ್ ಭವನದ ಅಪೂರ್ಣಗೊಂಡಿರುವ ಬಗ್ಗೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಜಿ.ಪಿ ದೇವರಾಜುರವರ ಗಮನ ಸಳೆದಾಗ ಸದರಿ ಸಮುದಾಯ ಭವನ ಕಾಮಗಾರಿಯ ಅಪೂರ್ಣವಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಶೀರ್ಘದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ತಿಳಿಸಿದ್ದಾರೆ .
2017 -18 ನೇ ಸಾಲಿನಲ್ಲಿ ಮಿಡಿಗೇಶಿ ಗ್ರಾಮದ ಮಿಡಿಗೇಶಿ ಬೆಟ್ಟದ ತಪ್ಪಲಿನಲ್ಲಿ ಡಾ ಜಗಜೀವನ್ ರಾಮ್ ಅಂಬೇಡ್ಕರ್ ಭವನದ ಕಟ್ಟಡದ ತಳಪಾಯ ಹಾಗೂ 18 ಫಿಲ್ಲರ್ ಗಳನ್ನು ಕಟ್ಟಿದ್ದು ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಪತ್ರಿಕೆ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರ ಗಮನ ಸೆಳೆದಾಗ ಸದರಿ ಸಮುದಾಯ ಭವನಕ್ಕೆ ಈಗಾಗಲೇ ಐವತ್ತು ಲಕ್ಷರೂಗಳ ಅನುದಾನ ಮುಂಜೂರಾಗಿತ್ತು ಇದೀಗ ಐವತ್ತು ಲಕ್ಷರೂಗಳ ಅನುದಾನ ಬಿಡುಗಡೆಯಾಗಿರುತ್ತದೆ ಆದ್ದರಿಂದ ಸಂಭಧಿಸಿದ ಗುತ್ತಿಗೆ ದಾರರೊಡನೆ ಚರ್ಚಿಸಿ ಅತಿ ಶೀರ್ಘದಲ್ಲಿ ಡಾ|| ಜಗಜೀವನ್ ರಾಮ್ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ತಿಳಿಸಿರುತ್ತಾರೆ.