ತುಮಕೂರು
ನಗರದ ಸದಾಶಿವನಗರ ಬಲ ನಗರದ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್‍ನೊಂದಿಗೆ ಕೈಗೊಂಡಿರುವ ಮನೆ ಮನೆಗೆ ಜಿಯೊ ನೆಟ್ ವರ್ಕ್ ಕೇಬಲ್ ಹಾಗೂ ಟಿವಿಗೆ ಸಂಪರ್ಕ ಕೊಡಲೆಂದು ಪ್ರತಿ ರಸ್ತೆಗೆ ಎರಡರಿಂದ ನಾಲ್ಕು ಚೇಂಬರ್‍ಗಳನ್ನು ಮಾಡಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಅವುಗಳಿಗೆ ಚೇಂಬರ್ ಬಾಕ್ಸ್ ಕೂರಿಸಿದ ನಂತರ ಅವುಗಳ ಸುತ್ತಲೂ ಕಾಂಕ್ರೀಟ್ ಹಾಕುವ ಕಾರ್ಯ ಕೈಗೊಂಡಿದ್ದಾರೆ.
ಆದರೆ ಕಾಮಗಾರಿ ನಿರ್ವಹಿಸುತ್ತಿರುವ ಕಂಟ್ರಾಕ್ಟರುಗಳು ಹಾಗೂ ಕೆಲಸಗಾರರು ಕಾಂಕ್ರಿಟ್ ಹಾಕಿದ ನಂತರ ನಂತರದ ದಿನಗಳಲ್ಲಿ ಕ್ಯೂರಿಂಗ್ ಮಾಡುವುದು ಅವರ ಜವಾಬ್ದಾರಿಯಾಗಿದೆ ಆದರೆ ಅವುಗಳನ್ನೆಲ್ಲ ಗಾಳಿಗೆ ತೂರಿ ಕೇವಲ ಒಂದು ದಿನವೂ ಅವುಗಳಿಗೆ ನೀರನ್ನು ಹಾಕದೆ ಕಳಪೆ ಕಾಮಗಾರಿ ಮುಂದುವರಿಸಿದ್ದಾರೆ ಇದಕ್ಕೆ ಪುಷ್ಟಿ ನೀಡುವಂತೆ ಸದಾಶಿವನಗರದ ಪ್ರತಿ ರಸ್ತೆಗಳಲ್ಲಿರುವ ಚೇಂಬರ್ಗಳಲ್ಲಿ ಸುತ್ತ ಹಾಕಿರುವ ಕಾಂಕ್ರೀಟ್ ಕೇವಲ ಹತ್ತು ಹದಿನೈದು ದಿನಗಳಲ್ಲಿ ಕರಗಿ ಹೋಗುತ್ತಿದೆ.
ಪ್ರತಿ ದಿನ ಸ್ಮಾರ್ಟ್ ಸಿಟಿಗಳಲ್ಲಿ ಒಂದಿಲ್ಲೊಂದು ಗೊಂದಲ ಹಾಗೂ ಕಳಪೆ ಕಾಮಗಾರಿಗಳಿಗೆ ಪುಷ್ಟಿ ನೀಡುವಂತಹ ಘಟನೆ ನಡೆದಿದೆ ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಎಂಜಿನಿಯರ್ ಆಗಲಿ ಅಥವಾ ಪಾಲಿಕೆಯ ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿ ಕಂಟ್ರಾಕ್ಟರ್‍ಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಕೇಳಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ