ಬೆಂಗಳೂರು
ಆನೇಕಲ್‍ನ ಬನಹಳ್ಳಿಯಲ್ಲಿ ಮಗಳ ಮದುವೆಗೆ ಬಾರದೇ ತನ್ನ ಎರಡನೇ ಪತ್ನಿ ಜೊತೆ ಪತಿರಾಯ ಇದ್ದ ಎಂದು ಸಿಟ್ಟಿಗೆದ್ದ ಮೊದಲ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ಆನೇಕಲ್ ಬನಹಳ್ಳಿಯ ಕೃಷ್ಣಪ್ಪ ಮೊದಲು ಚಂದ್ರಕಲಾ ಅವರರೊಂದಿಗೆ ವಿವಾಹವಾಗಿದ್ದು ನಂತರ ವಸಂತಕುಮಾರಿ ಎಂಬುವರನ್ನು ಎರಡನೇ ಮದುವೆ ಮಾಡಿಕೊಂಡಿದ್ದನು ಮೊದಲ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಎರಡನೇ ಪತ್ನಿ ಜೊತೆ ಮನೆ ಮಾಡಿಕೊಂಡು ವಾಸಿಸುತ್ತಿದ್ದನು.
ಮೊದಲಿಂದಲೂ ಇಬ್ಬರು ಪತ್ನಿಯರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಇತ್ತೀಚಿಗೆ ಮೊದಲ ಪತಿ ಮಗಳ ಮದುವೆ ನೇರವೇರಿಸಿದ್ದು ಮದುವೆಗೆ ಬಾರದೇ ಎರಡನೇ ಪತ್ನಿ ಜೊತೆ ಇದ್ದ ಕೃಷ್ಣಪ್ಪನ ವಿರುದ್ದ ಮೊದಲನೇ ಪತ್ನಿ ಮತ್ತು ಮಕ್ಕಳು ಸಿಟ್ಟಿಗೆದ್ದಿದ್ದಾರೆ.
ವಸಂತಕುಮಾರಿ ಹಾಗೂ ಕೃಷ್ಣಪ್ಪನ ಮನೆಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೃಷ್ಣಪ್ಪ ಹಾಗೂ
ವಸಂತಕುಮಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಹಲ್ಲೆಗೊಳಗಾದ ಕೃಷ್ಣಪ್ಪ ಹಾಗೂ ವಸಂತಕುಮಾರಿ ಪೊಲೀಸರಿಗೆ ದೂರು ನೀಡಿದ್ದು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








