ತಿಪಟೂರು :
ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ)ಯವರು ನೂತನ ಕೇಬಲ್ ಮತ್ತು ಡಿ.ಟಿ.ಹೆಚ್‍ನ ದರಗಳನ್ನು ಏರಿಸಿದ್ದು ಇದಕ್ಕೆ ತಕ್ಕಂತೆ ಸ್ಥಳೀಯ ಕೇಬಲ್ ಆಪರೇಟರ್‍ಗಳು ಸೆಟ್‍ಆಪ್‍ಬಾಕ್ಸ್‍ಗೆ ಹೊಸ ಕಾರ್ಯಕ್ರಮಗಳನ್ನು ಸಿದ್ದಪಡಿಸಿಕೊಳ್ಳಲು ಕಳೆದ 15 ದಿನಗಳಿಂದ ನಗರದಲ್ಲಿ ಕೇಬಲ್ ಟಿ.ವಿ.ಪ್ರಸಾರ ಸ್ಥಗಿತಗೊಂಡಿದೆ.
ಈ ಕೇಬಲ್ ಸ್ಥಗಿತಗೊಂಡ ಹಿನ್ನೆಲೆ, ಮಕ್ಕಳಿಗೆ ರಜೆಯಿರುವುದು ಮತ್ತು ಹೊರಗಡೆ ಇಂದೆಂದೂ ಕಾಣದಂತಹ ಬಿರುಬಿಸಿಲು ಇರುವುದರಿಂದ ಮಕ್ಕಳನ್ನು ಟಿವಿಇಲ್ಲದೆ ಸುಮ್ಮನೆ ಕೂರಿಸುವುದು ಇಂದಿನ ದಿನಗಳಲ್ಲಿ ಅಸಾಧ್ಯವಾದ ಮಾತು. ಆದರೆ ಇದಕ್ಕೆ ದೊಡ್ಡ ಹೊಡೆತವೆಂಬತೆ ಇದೇ ಬೇಸಿಗೆಯಲ್ಲಿ ಕೇಬಲ್ ಟಿ.ವಿ. ಸಹ ಸ್ಥಗಿತ ಆಗಿರುವುದು ಗೃಹಿಣಿಯರನ್ನು ತಲೆನೋವು ತರಿಸಿರುವುದಲ್ಲದೇ ಮತ್ತಷ್ಟು ಹೈರಾಣವಾಗಿಸಿದೆ.
ಸಂಜೆಯಾದರೆ ಸಾಕು ಗೃಹಿಣಿಯರೆಲ್ಲರೂ ಟಿ.ವಿ. ಮುಂದೆ ಕುಳಿತು ಸರಣಿಯಾಗಿ ಪ್ರಸಾರವಾಗುವ ಮುಗಿಯದ ದಾರವಾಹಿಗಳ ಕಥೆಗಳನ್ನು ತಮ್ಮ ತೆಲೆಗೆ ತುಂಬಿಕೊಂಡು ಮುಂದೇನಾಗುತ್ತದೇ ಎಂಬ ಆತಂಕದಲ್ಲಿ ಬಿ.ಪಿ, ಸಕ್ಕರೆಕಾಯಿಲೆಗಳನ್ನು ಮೈಮೇಲು ಎಳೆದುಕೊಳ್ಳುವ ಸಮಯದಲ್ಲಿ ಕಾಲದೂಡುತ್ತಿದ್ದರು. ಇನ್ನು ಮಕ್ಕಳನ್ನು ಕೂರಿಸಲು ಕಾರ್ಟೂನ್ ನೆಟ್‍ವರ್ಕ್, ಚಿಂಟೂ ಮತ್ತು ಪೊಗೋ ಚಾನೆಲ್‍ಗಳನ್ನು ಹಾಕಿಕೊಟ್ಟರೆ ಮಕ್ಕಳು ಊಟ ತಿಂಡಿಯನ್ನು ಕೇಳದೇ ಟಿವಿಯ ಮುಂದೇ ಆಸೀನರಾಗಿ ಕಾರ್ಯಕ್ರಮದಲ್ಲೇ ಮುಳುಗಿ ಹೋಗುತ್ತಿದ್ದರು. ಆದರೆ ಇದೇ ಸಂದರ್ಭದಲ್ಲೇ ಟ್ರಾಯ್‍ನಿಯಮದಂತೆ ಬೆಲೆಹಚ್ಚಳವು ಪುರಷರ ಜೇಬು ಸುಡುತ್ತಿದೆ.
ಗ್ರಾಹಕರ ಜೇಬನ್ನು ಭಸ್ಮ ಮಾಡುತ್ತಿರುವ ಟ್ರಾಯ್ ನೀತಿ : ಹಿಂದಿನ ದರಪಟ್ಟಿಯಂತೆ ಕೇಬಲ್‍ನವರು 200ರೂ ತೆಗೆದುಕೊಂಡು ಎಲ್ಲಾ ಚಾನೆಲ್‍ಗಳನ್ನು ನೀಡುತ್ತಿದ್ದರು, ಆದರೆ ಈಗ ಉಚಿತ ಚಾನಲ್‍ಗಳನ್ನು ವೀಕ್ಷಣೆಮಾಡು ಜಿ.ಎಸ್.ಟಿ ಸೇರಿ 154ರೂ ಮತ್ತೆ ನಮಗೆ ಬೇಕಾದ ಪ್ಯಾಕೇಜ್‍ಗಳಿಗೆ ಅದರಲ್ಲೂ ಕನ್ನಡ ಪ್ಯಾಕೇಜ್‍ಗಳ ದರಪಟ್ಟಿಯನ್ನು ಕಂಡು ನಮಗೆ ಸುತಾಗುತ್ತದೆ.
ಈ ಟೀವಿ ಸಮೂಹಕ್ಕೆ 17ರೂ, ಈಟಿವಿಗೆ 29, ಉದಯ ಟಿವಿ ಸಮೂಹಕ್ಕೆ 31 ಮತ್ತು ಸುವರ್ಣ ಸಮೂಹಕ್ಕೆ 30 ರೂ ಒಟ್ಟು ಸುಮಾರು 261 ಇದರ ಜೊತೆಗೆ ಹಿಂದಿ, ತಮಿಳು ಸೇರಿ, ಕ್ರೀಡೆಗಳು ಬೇಕೆಂದರು ಸುಮಾರು 400 ರೂ ವರೆಗೂ ಮುಟ್ಟುತ್ತದೆ ಆದ್ದರಿಂದ ನಮಗೆ ಟಿ.ವಿ ಸಹವಾಸವೇ ಬೇಡ ಬರೀ ಮೊೈಬೈಲ್ ಸಾಕಪ್ಪ, ಮನೆಯವರಿಗೆ ಕನ್ನಡ ಚಾನೆಲ್ ಬಂದರೆ ಸಾಕೆಂದು ಗಾಂಧಿನಗರ ವಾಸಿ ಉಪನ್ಯಾಸಕ ಎಂ.ಎನ್.ಶಶಿಕುಮಾರ್ ತಿಳಿಸುತ್ತಾರೆ.
ಹೊರಬಂದ ಗ್ರಾಮೀಣ ಕ್ರೀಡೆಗಳು : ಬೇಸಿಗೆಯ ಸಮಯವಾದ್ದರಿಂದ ಮರೆತುಹೋಗಿದ್ದ ಗ್ರಾಮೀಣ ಕ್ರೀಡೆಗಳಾದ ಚೌಕಾಬಾರ, ಪಗಡೆ, ಆನೆಕುದುರೆ ಆಟ, ಅಳುಗುಳಿಮನೆ, ಚದುರಂಗ, ಕೇರಂ, ಮುಂತಾದ ಕ್ರೀಡೆಗಳನ್ನು ಮನೆಮಂದಿ ಮಕ್ಕಳೆಲ್ಲರೂ ಸೇರಿ ಸಮಯ ಕಳೆಯುತ್ತಿದ್ದು ಮಕ್ಕಳು ಇದರಲ್ಲಿ ಆಸಕ್ತಿಯನ್ನು ತೋರುತ್ತಿದ್ದಾರೆ.
ಮನೆಮಂದಿಯಲ್ಲ ಮಾತನಾಡುವಂತಾಗಿದೆ : ಕೇಬಲ್ ಬಂದ್ ಆಗಿರುವುದು ಮನೆಮಂದಿಯಲ್ಲಾ ಕುಳಿತು ಮಾತುಕತೆ ನಡೆಸುವುದಲ್ಲದೇ ಒಟ್ಟಿಗೆ ಕುಳಿತು ಯಾವುದೇ ಗಡಿಬಿಡಿ ಇಲ್ಲದೇ ಊಟತಿಂಡಿ ಮಾಡುವುದಕ್ಕೂ ಸಹಕಾರ ನೀಡಿದೆ.
ದಾರಾವಾಹಿಗಳನ್ನು ನೋಡುತ್ತಾ ಕುಳಿತ ಮಾನಿನಿಯರು ಈ ದಾರಾವಾಹಿ ಮುಗಿಯಲಿ ಇನ್ನೊಂದು ದಾರಾವಾಹಿ ಆರಂಭವಾಗುವುದರೊಳಗೆ ಊಟಮಾಡೋಣ ಎನ್ನುವ ಅವರಸದಲ್ಲಿ ತಿಂದು ಆರೋಗ್ಯವನ್ನು ಕಡೆಸಿಕೊಳ್ಳುತ್ತಿದ್ದರು ಆದರೇ ಕೇಬಲ್ ಟಿ.ವಿ ಸ್ಥಗಿತದಿಂದ ಇಂದು ಈ ಗಡಿಬಿಡಿಯು ಸ್ವಲ್ಪ ಇಲ್ಲದಂತಾಗಿ ಸಾವಕಾಶವಾಗಿ ಊಟವನ್ನು ಬಡಿಸಿ ತಾವು ಊಟಮಾಡುತ್ತಿದ್ದಾರೆ.
ಆದರೆ ಇದರೊಂದಿಗೆ ಇನ್ನೊಂದು ಓದೆಯ ಪಿಶಾಚಿ ಎಂದರೆ ಬಂದೇ ಗವಾಕ್ಷಿಲಿ ಎನ್ನುವಂತೆ ಸ್ಮಾರ್ಟ್‍ಫೋನ್‍ಗಳಲ್ಲಿ ಬಂದು ಅವುಗಳಿಂದ ಸ್ಮಾರ್ಟ್‍ಟಿವಿಗೆ ಸಂಪರ್ಕಸಾಧಿಸುವುದರೊಂದಿಗೆ ಕೇಬಲ್ ಟಿವಿ ಸಹ ಇನ್ನೇನು ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗುತ್ತದೆ ಮತ್ತು ಈಗ ಬರುತ್ತದೆಂದು ಊಹಿಸಿ ಕೆಲಸಮಾಡುತ್ತಿರುವ ರಿಲೆಯನ್ಸ್‍ನ ಜಿಯೋ ಡಿಜಿಟಲ್ ನೆಟ್ ಬಂದೆ ಕೇಬಲ್ ಟಿವಿ ಕೊನೆಯಾಗುವುದರಲ್ಲಿ ಅನುಮಾನ?
ಇನ್ನೊಂದು ಆಯಾಮದಲ್ಲಿ ನೋಡುವುದಾದರೆ ಇವೆಲ್ಲವುಗಳಿಗಿಂತ ವೈದ್ಯರು ಹೇಳುವಂತೆ ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳಿ ಎನ್ನುವುದಕ್ಕೂ ಮೊದಲೆ ನಮ್ಮ ಹಿಂದಿನವರು ಸಂಜೆ ಬೇಗ ಊಟಮಾಡಿ ಮಲಗಿ ಬೆಳಗಿನ ದ್ರುವ ನಕ್ಷತ್ರ (ರೈತನ ಮಿತ್ರ) ಬಂದಮೇಲೆ ಎಳುವುದು ಇನ್ನೇನು ಕೆಲದಿನಗಳಲ್ಲಿ ಮತ್ತೆ ಬರುತ್ತದೆ ಎಲ್ಲರ ಆರೋಗ್ಯ ಸುಧಾರಿಸುವುದರ ಜೊತೆಗೆ ರಕ್ತದೊತ್ತಡ, ಎಲ್ಲಾ ರೋಗಗಳ ತಾಯಿ ಮಧುಮೇಹ ಮತ್ತು ಇದಕ್ಕೆ ಕಾರಣವಾದ ಬೊಜ್ಜು ನಿಯಂತ್ರಣಗೊಳ್ಳುತ್ತದೆಂಬ ಬಾವನೆ ಸಹ ಮೂಡುತ್ತಿದೆ.