ಬೆಂಗಳೂರು
ಕ್ಯಾಬ್ ಚಾಲಕನನ್ನು ಪ್ರೀತಿಸಿ ವಿವಾಹವಾಗಿದ್ದ ಮಹಿಳೆಯೊಬ್ಬರು ತನ್ನ ಐದು ತಿಂಗಳ ಹೆಣ್ಣುಮಗು ಸೇರಿದಂತೆ, ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆಮಾಡಿ ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಠನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮನೋರಾಯನಪಾಳ್ಯದ ಪುಷ್ಪವತಿ (30)ಇನ್ನು ಹೆಸರಿಡದ ತನ್ನ ಐದು ತಿಂಗಳ ಹೆಣ್ಣುಮಗು ಹಾಗೂ 8 ವರ್ಷದ ಜೀವನ್ ಎಂಬ ಮಗನಿಗೆ ವಿಷಹಾಕಿ ಕೊಂದು ನಂತರ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಬೆಸಿ ಗ್ರೂಪ್ ಕಂಪನಿಯಲ್ಲಿ ಕಾರು ಚಾಲಕನಾಗಿದ್ದ ನಾಗರಾಜ್‍ನನ್ನು 10 ವರ್ಷಗಳ ಹಿಂದೆ ಪುಷ್ಪವತಿ ಪ್ರೀತಿಸಿ ವಿವಾಹವಾಗಿದ್ದರು ದಂಪತಿಯು ಮನೋರಾಯನಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ದಂಪತಿಗೆ ಮೂರನೇ ತರಗತಿಗೆ ಹೋಗುತ್ತಿದ್ದ ಜೀವನ್ ಹಾಗೂ ಐದು ತಿಂಗಳ ಹೆಣ್ಣುಮಗುವಿದೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆರಾತ್ರಿ 8.30ರ ವೇಳೆ ಪತಿ ಕೆಲಸಕ್ಕೆ ಹೋಗಿದ್ದಾಗ ಮೂರನೇ ತರಗತಿಗೆ ಹೋಗುತ್ತಿದ್ದ ಜೀವನ್ ಹಾಗೂ ಐದು ತಿಂಗಳ ಹೆಣ್ಣುಮಗುವಿಗೆ ವಿಷ ಹಾಕಿದ ಊಟ ತಿನ್ನಿಸಿ ಕೊಲೆಮಾಡಿ ನಂತರ ಪುಷ್ಪವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಜೀವನದಲ್ಲಿ ಜುಗುಪ್ಸೆಯಿಂದಾಗಿ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ಸಾವಿಗೆ ನಾನೇ ಕಾರಣ ಎನ್ನುವ ಪತ್ರವನ್ನು ಪುಷ್ಪವತಿ ಬರೆದಿಟ್ಟಿದ್ದಾರೆ.
ರಾತ್ರಿಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಬಂದ ತಡರಾತ್ರಿ ಮನೆಗೆ ಬಂದ ನಾಗರಾಜ್ ಎಷ್ಟು ಬಾರಿ ಬಡಿದರೂ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಹೆಬ್ಬಾಳ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
