ಹೆಚ್1ಎನ್1 ಗೆ ಮಹಿಳೆ ಬಲಿ

ಮಧುಗಿರಿ:

          ಹೆಚ್1 ಎನ್1 ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಾಕಾರಿಯಾಗದೆ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯೆ ರಾತ್ರಿ ನಡೆದಿದೆ.

         ಪಟ್ಟಣದ ರಾಘವೇಂದ್ರ ಕಾಲೋನಿಯ ವಾಸಿ ಪುಷ್ವ (21) ಮೃತಪಟ್ಟವರಾಗಿದ್ದು. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಪಟ್ಟಣದಲ್ಲಿಯೇ ಚಿಕಿತ್ಸೆ ಕೊಡಿಸಿದ್ದರು ಆದರೆ ದಿನೇ ದಿನೇ ಜ್ವರ ಉಲ್ಬಣವಾಗುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ ಮೇಲೆ ಮೃತರಿಗೆ ಹೆಚ್ 1 ಎನ್ 1 ಜ್ವರ ಇರುವುದನ್ನು ವೈದ್ಯರು ಧೃಢಪಟ್ಟಿಸಿದ್ದರು. ಮೃತರಿಗೆ ನಾಲ್ಕು ತಿಂಗಳ ಹೆಣ್ಣು ಮಗುವಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

           ಪಟ್ಟಣದಲ್ಲಿ ಸ್ವಚ್ಚತೆ ಮಾಯವಾಗಿದ್ದು ಎಲ್ಲೆಂದರಲ್ಲಿ ಕಸದ ರಾಶಿ ಹೆಚ್ಚಾಗಿ ಚರಂಡಿಗಳು ನೈರ್ಮಲ್ಯ ಕಾಣದೆ ಸೊಳ್ಳೆಗಳ ಸಂತಾನೋತ್ಪತ್ತಿಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ. ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ತಿಂಗಳುಗಳೆ ಕಳೆದಿವೆ. ಜೂತೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆಂದು ಇರುವ ಫಾಗಿಂಗ್ ಮಿಷಿನ್‍ಗಳನ್ನು ಬಳಸುವುದನ್ನೇ ಸಿಬ್ಬಂದಿ ವರ್ಗ ಮರೆತ್ತಿರುವುದರಿಂದ ಇಂತಹ ಆವಘಡಗಳಿಗೆ ಎಡೆ ಮಾಡಿ ಕೊಟ್ಟಿದೆ. 100ದಿನ ಕಳೆದರೂ ಸ್ವಚ್ಚತೆಯ ಬಗ್ಗೆ ಪ್ರಶ್ನಿಸಲು ಯಾವೊಬ್ಬ ಜನ ಪ್ರತಿನಿಧಿ ಪುರಸಭೆ ಪ್ರವೇಶಿಸಿಲ್ಲ ಆಡಳಿತಾಧಿಕಾರಿಗಳು ಆದಾಯ ಬರುವ ಖಾತೆ ಬದಲಾವಣೆ, ಹಂಚಿಕೆ, ಟೆಂಡರ್‍ಗಳ ಕಡೆ ಕೊಟ್ಟಿರುವ ಗಮನ ಪಟ್ಟಣದ ಸ್ವಚ್ಚತೆ ಕಿಂಚಿತ್ತು ನೀಡುತ್ತಿಲ್ಲ ಹಾಗೂ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿಯೇ ಕೊಳಕು ತಾಂಡವವಾಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಈ ಮಾರಕ ಜ್ವರಕ್ಕೆ ಇನ್ನಷ್ಟೂ ಜೀವಗಳು ಬಲಿಯಾಗುವ ಮುನ್ನಾ ಸಂಭಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳುವರೆ.?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link