ಕೊರಟಗೆರೆ:-
ಪ್ರೀಯತಮನ ಜೊತೆ ನಾಲ್ಕು ದಿನದ ಹಿಂದೆ ಪರಾರಿಯಾದ ಯುವತಿಯ ಪೋಷಕರು ತಮ್ಮ ಜಮೀನಿನ ಸಮೀಪದ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡುತ್ತೀದ್ದ ಮಹಿಳೆಯ ಮೇಲೆ ಅನುಮಾನಗೊಂಡು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಆಗದೇ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಸೋಂಪುರ ಗ್ರಾಮದ ದ್ವಾರಕರಾಧ್ಯನ ಮಡದಿ ಭಾಗ್ಯಮ್ಮ(37) ಮೃತಪಟ್ಟ ದುರ್ದೈವಿ. ಮೃತ ಮಹಿಳೆ ಕಳೆದ ಎರಡು ವರ್ಷದಿಂದ ತಿಗಳರಪಾಳ್ಯ ಗ್ರಾಮದ ಸಮೀಪದ ದೀಪಕ್ ಎಂಬುವರಿಗೆ ಸೇರಿದ ಎಸ್ಟೇಟ್‍ನಲ್ಲಿ ಕುಟುಂಬ ಸಮೇತ ಕೂಲಿ ಕೆಲಸ ಮಾಡುತ್ತೀದ್ದರು ಎನ್ನಲಾಗಿದೆ.
ತಿಗಳರಪಾಳ್ಯ ಗ್ರಾಮದ ಮಲ್ಲೇಶಪ್ಪನ ಮಗಳು ಕಳೆದ ನಾಲ್ಕು ದಿನದ ಹಿಂದೆ ಇದೇ ಎಸ್ಟೇಟ್‍ನಲ್ಲಿ ಮಾವಿನ ಕಾಯಿ ಕೀಳಲು ಬಂದ ಕೆಲಸಗಾರನೊಂದಿಗೆ ಮನೆಯಿಂದ ಪರಾರಿಯಾಗಿದ್ದಾರೆ. ಇವರ ಪ್ರೀತಿಯ ಸಹಾಯಕ್ಕಾಗಿ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತೀದ್ದ ಭಾಗ್ಯಮ್ಮ ಯುವತಿಗೆ ಮೊಬೈಲ್ ನೀಡಿದ್ದಳು ಎಂದುಅನುಮಾನಗೊಂಡ ಪೋಷಕರು ಭಾನುವಾರ ಮಧ್ಯಾಹ್ನ ಏಕಾಏಕಿ ಎಸ್ಟೇಟ್‍ಗೆ ನುಗ್ಗಿ ಥಳಿಸಿದ್ದಾರೆ.
ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಭಾಗ್ಯಮ್ಮ ಕಳೆದ 15ವರ್ಷದ ಹಿಂದೆ ಸೋಂಪುರ ಗ್ರಾಮದ ದ್ವಾರಕರಾಧ್ಯನೊಂದಿಗೆ ವಿವಾಹ ವಾಗಿದ್ದಾರೆ. ಕುಟುಂಬ ನಿರ್ವಹಣೆಗಾಗಿ ತಿಗಳರಪಾಳ್ಯ ಗ್ರಾಮದ ಎಸ್ಟೇಟ್‍ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತೀದ್ದ ಗಂಡ ಹೆಂಡತಿಯ ಮೇಲೆ ಯುವತಿಯ ಪೋಷಕರು ಕಬ್ಬಿಣ್ಣದರಾಡು , ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದ ಪರಿಣಾಮ ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಯುವತಿಯ ಪೋಷಕರು ಕಳೆದ ಎರಡು ದಿನದ ಹಿಂದೆ ಕಾಣೆಯಾದ ಯುವತಿಯ ಪತ್ತೇಗೆ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಭ್ಯಾಗ್ಯಮ್ಮನ ಮೇಲೂ ಅನುಮಾನ ವ್ಯಕ್ತಪಡಿಸಿದ ಹಿನ್ನಲೆ ಪೊಲೀಸರು ವಿಚಾರಣೆ ನಡೆಸಿದ ನಂತರವು ಯುವತಿಯ ಪೋಷಕರು ಮತ್ತೇ ಎಸ್ಟೇಟ್ ಬೀಗ ಮುರಿದು ಒಳಗೆ ಪ್ರವೇಶಿಸಿ ಭಾಗ್ಯಮ್ಮನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ ಎನ್ನಲಾಗಿದೆ.
ಯುವತಿಯ ತಂದೆ ಮಲ್ಲೇಶಪ್ಪ ಸೇರಿ 8ಜನರ ಗುಂಪು ಭ್ಯಾಗ್ಯಮ್ಮನಿಗೆ ಹಿಗ್ಗಾಮುಗ್ಗಾ ಥಳಿಸಿ ಬಿಡಿಸಲು ಹೋದ ಗಂಡನ ಮೇಲು ಸಹ ಹಲ್ಲೇ ನಡೆಸಿದ್ದಾರೆ .ತಲೆಗೆ ತೀರ್ವ ಪೇಟ್ಟಾಗಿ ಕುಸಿದು ಬಿದ್ದ ಭಾಗ್ಯಮ್ಮನಿಗೆ ಆಸ್ಪತ್ರೆಗೆ ಸೇರಿಸಲು ಬಿಡದೇ ಯುವತಿಯ ಪೋಷಕರು ಬೆದರಿಕೆ ಹಾಕಿದ್ದಾರೆ . ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಬಂದ ಪೊಲೀಸರ ಸಹಾಯದಿಂದ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ .
ಕೊರಟಗೆರೆಗೆ ದಾಖಲಾದ ಭಾಗ್ಯಮ್ಮನಿಗೆ ಪ್ರಜ್ಞೆ ಇಲ್ಲದ ಪರಿಣಾಮ ತುಮಕೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ .ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಭಾಗ್ಯಮ್ಮ ಮೃತ ಪಟ್ಟಿದ್ದಾಳೆ . ಕೊರಟಗೆರೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ . ಆರೋಪಿಗಳನ್ನು ಸಿಪಿಐ ಮುನಿರಾಜು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ