ಹೂವಿನಹಡಗಲಿ
ಬಳ್ಳಾರಿ ಜಿಲ್ಲೆ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಾನವ ದಿವಸಗಳನ್ನು ನಿರ್ಮಿಸಿ ನಿಗಧಿತ ಅವಧಿಯಲ್ಲಿ ಹಣ ಪಾವತಿಯಲ್ಲೂ ನೂರರಷ್ಟು ಸಾಧನೆ ಮಾಡಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿರುವುದಾಗಿ ಬಳ್ಳಾರಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರೇಗಾರ್ ತಿಳಿಸಿದರು.
ಪಟ್ಟಣದ ತಾ.ಪಂ. ಆವರಣದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ ಬಳ್ಳಾರಿ ಹಾಗೂ ತಾಲೂಕು ಪಂಚಾಯ್ತಿ ಹೂವಿನಹಡಗಲಿ ಇವರ ಸಹಯೋಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನಪ್ರತಿನಿಧಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹೂವಿನಹಡಗಲಿ ತಾಲೂಕು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇಕಡಾ ನೂರರಷ್ಟು ಮಾನವ ದಿವಸಗಳನ್ನು ನಿರ್ಮಿಸಿ 78.438 ಕಾಮಗಾಋಇ ನಿರ್ವಹಿಸಿ ಒಟ್ಟು 33128 ಕಾರ್ಡದಾರರ ಪೈಕಿ 22616 ಉದ್ಯೋಗ ಕಾಥ್ರಿ ಕಾರ್ಡ ಫಲಾನುಭವಿಗಳಿಗೆ ಕೆಲಸ ನೀಡಿ, ಪ್ರಥಮ ಸ್ಥಾನ ಪಡೆದಿರುವುದಾಗಿ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗಲು ಜಿ.ಪಂ. ಸಿಇಓ ನಿರೀಕ್ಷೆಮೀರಿ ಶ್ರಮಿಸಿದ್ದು, ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಲ್ಲಿ ಸದರಿ ಯೋಜನೆಯ ಕುರಿತು ತರಬೇತಿ ಕಾರ್ಯಾಗಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿ 1 ಕೋಟಿ ಮಾನವ ದಿವಸ ನಿರ್ಮಾಣದ ಗುರಿ ಹೊಂದಿದ್ದು, ಮಧ್ಯಮವರ್ತಿಗಳಿಗೆ ಅವಕಾಶವಿಲ್ಲದೇ, ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿರುವುದಾಗಿ ಹೇಳಿದರು.
ನರೇಗಾ ಯೋಜನೆ ಯಶಸ್ವಿಗೆ ಜನಪ್ರತಿನಿಧಿಗಳ ಸಹಭಾಗಿತ್ವ ಅಗತ್ಯವಿದ್ದು, ಯೋಜನೆ ಇನ್ನೂ ಹೆಚ್ಚು ಅನುಷ್ಠಾನಗೊಳೀಸಲು ಸಹಕಾರಿಯಾಗಲಿದೆ ಎಂದರು.
ಕೂಲಿಕಾರರಿಗೆ ಒತ್ತು ನೀಡಿ ಆಸ್ತಿಗಳ ಸೃಜನತೆಯನ್ನು ಮಾಡುವುದರ ಜೊತೆಗೆ ವಯಕ್ತಿಕ ಕಾಮಗಾರಿಗಳಿಗೂ ಆಧ್ಯತೆ ನೀಡಿ, ಬರಗಾಲಕ್ಕೆ ತುತ್ತಾಗಿರುವ 7 ತಾಲೂಕುಗಳಲ್ಲಿ ದುಡಿಯಲು ಜನ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಹುಡುಕಿಕೊಂಡು ಬೇರೆ ಗುಳೇ ಹೋಗದ ಹಾಗೆ ಕ್ರಮವಹಿಸಲು ಬದುಕಿಗಾಗಿ ಖಾಥ್ರಿ ಯೋಜನೆಯಲ್ಲಿ 150 ದಿವಸ ಕೆಲಸ ನೀಡಲು ಸಿದ್ದವಿದ್ದು, ಪ್ರಾರಂಭಿಕವಾಗಿ ಜಿಲ್ಲೆಯ 22 ಗ್ರಾ.ಪಂ. ಗಳಲ್ಲಿ 17 ರಂದು ವಿಶೇಷ ಗ್ರಾಮಸಭೆ ನಡೆಸಿ, 20 ರಂದು ಹೋಬಳಿ ಕೇಂದ್ರದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿ, ನೋಡಲ್ ಅಧಿಕಾರಿಗಳು ಪ್ರತಿ ಹಳ್ಳಿಯಲ್ಲಿ ರೈತರ ಮನೆ ಮನೆಗೆ ಭೇಟಿನೀಡಿ ಅವರಿಗೆ ಬೇಕಾದ ರೈತರ ಮತ್ತು ಕೂಲಿಕಾರರನ್ನು ಗುರುತಿಸಿ, ಕಾಮಗಾರಿ ನೀಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮನ್ವಯತೆಹೊಂಧಿ ಯೋಜನೆಯಡಿ 21 ಅಂಶಗಳೊಂಧಿಗೆ ಗ್ರಾಮೀಣ ಬದುಕಿನಲ್ಲಿ ಆಸ್ತಿ ಸೃಜನತೆಯ ಕ್ರಮಗಳಿಗೆ ಒತ್ತುನೀಡಿ, ಬರಗಾಲದಲ್ಲಿ ಭೂಮಿಯ ಉತ್ಪಾದನ ಕ್ಷಮತೆ, ಮಣ್ಣಿನ ಸಂರಕ್ಷಣೆ, ಜಲ ಭದ್ರತೆಯನ್ನು ಒದಗಿಸಲು ತೋಟಗಾರಿಕೆ, ರೇಷ್ಮೆ ಅಭಿವೃದ್ದಿ, ಅರಣ್ಯ ಗಿಡನಡುವುದು, ಕುರಿ 1 ದನದ ದೊಡ್ಡಿ, ಆಟದ ಮೈದಾನ, ಕೃಷಿಹೊಂಡ, ನಮ್ಮ ಹೊಲ ನಮ್ಮ ದಾರಿ ಚೆಕ್‍ಡ್ಯಾಂ ನಿರ್ಮಾಣ ಸೇರಿದಂತೆ ಶೌಚಾಲಯ ಶುದ್ಧ ಕುಡಿಯುವ ನೀರಿನ ಘಟಕ, ಕಾಮಗಾರಿ ಒಳಗೊಂಡಿದ್ದು, ಪ.ಜಾತಿ, ಪ.ಪಂಗಡ ಮತ್ತು ಬಿ.ಪಿ.ಎಲ್. ಹೊಂದಿದ ಫಲಾನುಭವಿಗಳಿಗಾಗಿ ಬದುಕು ಖಾತ್ರಿ ಯೋಜನೆ ಜಾರಿಗೊಳಿಸಲಾಗಿದ್ದು, ಸರ್ವರಿಗೂ ಯೋಜನೆಯ ಯಶಸ್ವಿಗೆ ಶ್ರಮಿಸಲು ಮುಂದಾಗಬೇಕೆಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಜನಪ್ರತಿನಿಧಿಗಳು ಹಾಗೂ ಸಮುದಾಯದ ಸಹಭಾಗಿತ್ವ ಜಾಗೃತಿ ಮೂಡಟಿಸಬೇಕಿದೆ, ಅಗತ್ಯತೆ ಕುರಿತು ಮಾಹಿತಿ ನೀಡಿದರು.ತಾ.ಪಂ. ಇ.ಓ. ಯು.ಎಚ್.ಸೋಮಶೇಖರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಬದುಕು ಕಾತ್ರಿ ಯ ಕರಪತ್ರವನ್ನು ಬಳ್ಳಾರಿ ಜಿ.ಪಂ. ಸಿ.ಪಿ.ಓ. ಮತ್ತು ಉಪ ಕಾರ್ಯದರ್ಶಿಗಳು ಬಿಡುಗಡೆಗೊಳೀಸಿದರು.
ತಾ.ಪಂ. ಅಧ್ಯಕ್ಷೆ ಕೆ.ಶಾರದಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯರಾದ ಎಂ.ವೀಣಾ ಪರಮೇಶ್ವರಪ್ಪ, ಕೆ.ಶೀಲಾ ಕೊಟ್ರೇಶ, ಲಲಿತಾಬಾಯಿ ಸೋಮಿನಾಯ್ಕ, ತಾ.ಪಂ. ಉಪಧ್ಯಕ್ಷೆ ಪುಷ್ಪಾವತಿ, ಸ್ಥಾಯಿಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಅಭಿವೃದ್ದಿ ಮತ್ತು ರೈತಸಿರಿಯ ಲಾಭ ಪಡೆದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಜಿ.ಪಿ.ಜಿ. ಪ.ಪೂ.ಕಾಲೇಜ್ ವಿದ್ಯಾರ್ಥಿಗಳು ಪ್ರಾರ್ಥಿಸಿ, ಬಿಸಿಯೂಟ ಯೋಜನೆಯ ಅಧಿಕಾರಿ ಸಿ.ಜೆ.ಮಲ್ಲಪ್ಪ ಸ್ವಾಗತಿಸಿ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಚಂದ್ರಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ