ಬೆಂಗಳೂರು
ಅತಿ ವೃಷ್ಠಿ,ಅನಾವೃಷ್ಠಿ,ಭೂಕಂಪ,ಪ್ರಹಾರ ಇನ್ನಿತರ ನೈಸರ್ಗಿಕ ವಿಕೋಪ ಎದುರಾದಾಗ ಜನರೇ ಸ್ವಯಂ ಪ್ರೇರಿತರಾಗಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತಹ ತರಬೇತಿ ನೀಡಬೇಕಾದ ಅಗತ್ಯವನ್ನು ಶಿಕ್ಷಣ ತಜ್ಞ ಡಾ.ಎಂ.ಕೆ.ಶ್ರೀಧರ್ ಅವರು ಪ್ರತಿಪಾದಿಸಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬುಧವಾರ ಆಯೋಜಿಸಿದ್ದ, ವಿಶ್ವ ರೆಡ್ ಕ್ರಾಸ್ ದಿನಾಚರಣೆ -2019 ಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಕೋಪ ಪರಿಹಾರದಲ್ಲಿ ಜನರೇ ಪಾಲ್ಗೊಳ್ಳಲು ಸಹಕಾರಿಯಾಗುವಂತೆ ರೆಡ್‍ಕ್ರಾಸ್‍ನಿಂದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ತರಬೇತಿ ನೀಡಿದರೆ ನೈಸರ್ಗಿಕ ವಿಕೋಪ ಆದಾಗ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರದ ಸಿಬ್ಬಂದಿ, ವಿಶೇಷ ತಂಡಗಳನ್ನು ಅವಲಂಬಿಸುವುದು ತಪ್ಪಲಿದೆ ಎಂದ ಅವರು ನಮ್ಮಲ್ಲಿ ಮಾನವೀಯತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.
ದಾನ ನೀಡುವ ಮೂಲಕ ರೆಡ ಕ್ರಾಸ್ ಸಂಸ್ಥೆ ಕಟ್ಟಡ ತಲೆ ಎತ್ತುವಂತೆ ಮಾಡಿದರು.ರಕ್ತದಾನ ಶಿಬಿರ, ರಕ್ತದಾನ ದಿನಾಚರಣೆಗಳಲ್ಲಿ ರೆಡ್ ಕ್ರಾಸ್ ಮೊದಲಿನಿಂದಲೂ ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ ಎಂದು ಅವರು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆ ಸ್ವಿಜ್‍ರಲೆಂಡನ ವ್ಯಾಪಾರಿ ಹೆನ್ರಿ ಡುನೆಂಟ ಅವರಿಂದ 1863 ರಲ್ಲಿ ಸ್ಥಾಪನೆಗೊಂಡಿತು ವಿಶ್ವದ ಮೊದಲ ಹಾಗೂ ಎರಡನೆ ಯುದ್ದದಲ್ಲಿ ಸೈನಿಕರ ಜೀವ ಕಾಪಾಡಲು ಅಹೋರಾತ್ರಿ ರೆಡ್ ಕ್ರಾಸ್ ಶ್ರಮಿಸಿತು. ತನ್ನ ಸೇವಾ ಕಾರ್ಯಗಳಿಂದ ಮೂರು ಸಲ ನೋಬಲ್ ಶಾಂತಿ ಪುರಸ್ಕಾರ ಪಡೆದ ಹೆಮ್ಮೆಯ ಸಂಸ್ಥೆ ರೆಡ್ ಕ್ರಾಸ್‍ಆಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಸಿಇಒ ಮೃತ್ಯುಂಜಯ ಮಹಾಪಾತ್ರ,ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಕೆ.ಶ್ರೀಧರ್, ಸಭಾಪತಿ ಎಸ್.ನಾಗಣ್ಣ, ಉಪ ಸಭಾಪತಿ ಡಾ.ವಿ.ಎಲ್.ಎಸ್.ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಚಂದ್ರಶೇಖರ್ ಅವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ