ಬೆಂಗಳೂರು
ವೇಗವಾಗಿ ಬಂದ ಲಾರಿ ಡಿಕ್ಕಿಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕೆ.ಆರ್. ಪುರಂ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರಾಮಮೂರ್ತಿನಗರದ ಮುಖ್ಯರಸ್ತೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ನಾಗವಾರಪಾಳ್ಯದ ಅಶ್ವತ್ಥಪ್ಪ ಲೇಔಟ್‍ನ ಪೂವರಸನ್ (22) ಮೃತಪಟ್ಟವರನ್ನು ಗುರುತಿಸಲಾಗಿದೆ,ಖಾಸಗಿ ವಿಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂವರಸನ್ ಮುಂಜಾನೆ 3.30ರ ವೇಳೆ ರಾಮಮೂರ್ತಿನಗರದ ಸ್ನೇಹಿತನ ಮನೆಗೆ ಹೋಗಿ, ಬೈಕ್‍ನಲ್ಲಿ ವಾಪಸ್ ಆಗುತ್ತಿದ್ದರು.
ಮಾರ್ಗಮಧ್ಯೆ ರಾಮಮೂರ್ತಿನಗರ ಸಿಗ್ನಲ್ ಬಳಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಲಾರಿ ಎದುರಿನಿಂದ ಬಂದು ಡಿಕ್ಕಿಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಕೆ.ಆರ್. ಪುರಂ ಸಂಚಾರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಸಾವು
ಕೆಂಗೇರಿಯ ಉಪಗ್ರಹ ಬಸ್ ನಿಲ್ದಾಣದ ಕದಂಬ ಹೊಟೇಲ್ ಬಳಿ ಭಾನುವಾರ ರಾತ್ರಿ ರಸ್ತೆ ದಾಟುತ್ತಿದ್ದ ಸೆಕ್ಯುರಿಟಿ ಗಾರ್ಡ್ ಒಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿದ್ದಾರೆ.
ಮರಿಯಪ್ಪನಪಾಳ್ಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ (42)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ರಾತ್ರಿ 7.50ರ ವೇಳೆ ಬಸ್ ಇಳಿದು ಕೆಂಗೇರಿಯ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಂಗೇರಿ ಸಂಚಾರ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.