ಕರ್ನಾಟಕ ರಾಜ್ಯದಲ್ಲಿ ಯುವಜನ ಆಯೋಗ ಸ್ಥಾಪಿಸುವಂತೆ ಆಗ್ರಹ

0
13

ಹಿರಿಯೂರು :

       ಇಂದಿನ ಯುವಜನರು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಯುವಜನರು ದೈಹಿಕ, ಮಾನಸಿಕ ಬೆಳವಣಿಗೆಯ ಹಂತದಲ್ಲಾಗುವ ಆರೋಗ್ಯದ ಸವಾಲಿನೊಂದಿಗೆ ಶಿಕ್ಷಣ, ಉದ್ಯೋಗ, ಪ್ರೀತಿ, ಗೆಳೆತನ, ಮದುವೆ, ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿಷಯಗಳಲ್ಲಿ ಯುವಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಬಿಕ್ಕಟ್ಟುಗಳಿವೆ ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯುವಜನ ಆಯೋಗ ಸ್ಥಾಪಿಸುವಂತೆ ವಕೀಲರಾದ ಸಂಜಯ್ ಸರ್ಕಾರವನ್ನು ಒತ್ತಾಯಿಸಿದರು.

         ನಗರದ ತಾಲ್ಲೂಕು ಕಛೇರಿಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಯುವಜನ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯರವರಿಗೆ ಮನವಿಪತ್ರ ಅರ್ಪಿಸಿ ಅವರು ಮಾತನಾಡಿದರು.

        ಯುವಜನರು ತಮ್ಮ ಮುಂದಿರುವ ಇಂತಹ ಕ್ಲಿಷ್ಟಕರವಾದ ಸವಾಲುಗಳನ್ನು ಎದುರಿಸಿ ರೂಪಿಸಿಕೊಳ್ಳುವಂತೆ ಮಾಹಿತಿ ಅರಿವು ಕೌಶಲ್ಯ ನೆರವು ನೀಡಿ ಅವರನ್ನು ಸಬಲೀಕರಣಗೊಳಿಸಬೇಕಾದ ಜವಾಬ್ದಾರಿ ಆದ್ಯ ಕರ್ತವ್ಯ ಸರ್ಕಾರದ್ದು ಮತ್ತು ಸಮಾಜದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯುವಜನ ಆಯೋಗವನ್ನು ಸ್ಥಾಪಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.

        ಈಗಾಗಲೇ ಕೇರಳ ರಾಜ್ಯಸರ್ಕಾರ ಆ ರಾಜ್ಯದಲ್ಲಿ ಯುವಜನ ಆಯೋಗದ ಸ್ಥಾಪಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿ ಸುತ್ತಿದ್ದು, ಈ ಆಯೋಗದ ಮಾದರಿಯಲ್ಲಿಲೇ ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಯುವಜನ ಆಯೋಗವನ್ನು ಸ್ಥಾಪಿಸಿ ಸೂಕ್ತ ಕಾಯಿದೆಗಳನ್ನು ರೂಪಿಸಿಕೊಳ್ಳುವ ಮೂಲಕ ಯುವಕರ ಹಕ್ಕುಗಳನ್ನು ರಕ್ಷಿಸಿ ಯುವಶಕ್ತಿಯನ್ನು ರಚನಾತ್ಮಕ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಯುವಮುಖಂಡರುಗಳಾದ ಟಿ.ಸಂಜಯ್, ಪಿ.ಎಂ.ನಯೀಮ್, ಅನಿಲ್‍ಕುಮಾರ್ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here