ಜೋಮಾಟೋ ನೌಕರರ ಪ್ರತಿಭಟನೆ

ಬೆಂಗಳೂರು

      ಜೋಮಾಟೋ ಆಹಾರ ಸರಬರಾಜು ಕಂಪನಿಯ ಆಹಾರ ಸರಬರಾಜಿನ ಸಂಚಾರ ಭತ್ಯೆ ಕಡಿತಗೊಳಿಸಿರುವುದನ್ನು ವಿರೋಧಿಸಿ ನೂರಾರು ಡೆಲವರಿಬಾಯ್‍ಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

        ನಾಗವಾರ ವೃತ್ತದ ಬಳಿಯ ದಿ ಗ್ಲೋಬಲ್ ಶಾಲೆಯ ಮೈದಾನದಲ್ಲಿ ಮಂಗಳವಾರ ಯಲಹಂಕ, ನಾಗವಾರ, ಆರ್.ಟಿ.ನಗರ, ಸಹಕಾರನಗರ, ಕಮ್ಮನಹಳ್ಳಿ, ಬಾಣಸವಾಡಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಡೆಲವರಿ ಬಾಯ್‍ಗಳು ಸೇರಿ ಪ್ರತಿಭಟನೆ ನಡೆಸಿ, ಹಿಂದೆ ನೀಡುತ್ತಿದ್ದ ಮಾದರಿಯಲ್ಲಿಯೇ ಸಂಚಾರ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

         ಈ ಹಿಂದೆ ಒಂದು ಆರ್ಡರ್ 40ರೂ. ಭತ್ಯೆ ನೀಡಲಾಗುತ್ತಿತ್ತು. ಆದರೆ, ನ.26ರಿಂದ 30ರೂ.ಗೆ ಇಳಿಸಿದ್ದಾರೆ. ಹೀಗಾಗಿ, ನಾವು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಿದೆ. ಪ್ರತಿನಿತ್ಯ 10ರಿಂದ 15ಆರ್ಡರ್ ನೀಡುತ್ತದೆ. ನಮ್ಮ ದಿನದ ದುಡಿಮೆಯ ಒಟ್ಟು ಮೊತ್ತವನ್ನು ಸೇರಿಸಿದರೂ ಸಹ 700ರೂ. ಆಗುತ್ತದೆ. ಕೆಲಮೊಮ್ಮೆ 13ರಿಂದ 15ಗಂಟೆಗಳ ಕಾಲ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ನಮ್ಮ ಕುಟುಂಬದ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲವನ್ನು ಮರೆತು ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅಳಲು ತೋಡಿಕೊಂಡರು.

        ಒಂದು ಆರ್ಡರ್‍ಗೆ ತೆರಳಿ ಆಹಾರ ಸರಬರಾಜು ಮಾಡಿದರೆ ನಮಗೆ ಕನಿಷ್ಠ12ರಿಂದ 18ರೂ. ಪೆಟ್ರೊಲ್ ವೆಚ್ಚ ತಗಲುತ್ತದೆ.ಪ್ರಸಕ್ತವಾಗಿ ಪೆಟ್ರೊಲ್ ಬೆಲೆ 80ರ ಗಡಿಯಲ್ಲಿದೆ. ಹೀಗೆ ಏಕಾಏಕಿ ನಮ್ಮ ಭತ್ಯೆ ಕಡಿತಗೊಳಿಸಿದರೆ, ನಾವು ಮಾಡುವ ಕೆಲಸದ ಅರ್ಧ ಪರಿಶ್ರಮವನ್ನು ವಾಹನದ ಇಂಧನಕ್ಕಾಗಿಯೇ ವಿನಿಯೋಗಿಸಬೇಕಾಗುತ್ತದೆ. ನಮ್ಮನ್ನು ನಂಬಿರುವ ಕುಟುಂಬನ್ನು ಸಾಕುವುದಾದರೂ ಹೇಗೆ? ನಮ್ಮ ಸಮಸ್ಯೆ ಅರಿತು ಹಿಂದೆ ನೀಡುತ್ತಿದ್ದ ಮಾದರಿಯಲ್ಲಿಯೇ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.

        10ಕಿ.ಮಿ.ದೂರ ಕ್ರಮಿಸಿ ಆಹಾರ ಸರಬರಾಜು ಮಾಡಿದರೆ 40ರೂ. ಕೊಡುತ್ತಾರೆ. ಹೋಗಿ ಬರುವುದಕ್ಕೆ 20ಕಿ.ಮಿ.ಆಗುತ್ತದೆ. 5ಸ್ಟಾರ್ ರೇಟಿಂಗ್ ನೀಡಿದರೆ ಮಾತ್ರ 40 ರೂ. ನೀಡುತ್ತೇವೆಂದು ಹೊಸ ನಿಯಮ ಜಾರಿಗೊಳಿಸಿದ್ದಾರೆ.ಆಹಾರ ಸರಬರಾಜು ಮಾಡಲು ತೆರಳಿದ ವೇಳೆ ಕೆಲವೊಮ್ಮ ಗ್ರಾಹಕರು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ ಅವರ ಬಳಿ ಫೈವ್ಸ್ ಸ್ಟಾರ್ ರೇಟಿಂಗ್ ಕೊಡುವುದಿರಲಿ ಮಾತನಾಡಲು ಅಸಡ್ಡೆ ತೋರುತ್ತಾರೆ .ಪರಿಸ್ಥಿತಿ ಹೀಗಿರುವಾಗ ರೇಟಿಂಗ್ ಕೊಡಿ ಎಂದು ಕೇಳುವುದಾದರೂ ಹೇಗೆ ನಾಗವಾರ ಡೆಲವರಿ ಬಾಯ್ ಸದ್ದಾಂ ಪ್ರಶ್ನಿಸಿದರು.

         ಕಂಪನಿವತಿಯಿಂದ ನಮಗೆ ನೀಡುವ ಭತ್ಯೆಯಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಒಪ್ಪಂದ ಪತ್ರ ನೀಡಬೇಕು. ಇಲ್ಲವಾದಲ್ಲಿ ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಡೆಲವರಿ ಬಾಯ್ ಗಳು ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link