ಶಾಂತಭೀಷ್ಮ ಚೌಡಯ್ಯನವರ ತೃತೀಯ ಜಯಂತೋತ್ಸ

ಹಾನಗಲ್ಲ:

        ಹಾವೇರಿ ಜಿಲ್ಲೆಯ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದಲ್ಲಿ ಜ.14 ಮತ್ತು 15 ರಂದು ಜರುಗಲಿರುವ ಶಾಂತಭೀಷ್ಮ ಚೌಡಯ್ಯನವರ ತೃತೀಯ ಜಯಂತೋತ್ಸವ, ಶಾಂತಭೀಷ್ಮ ಚೌಡಯ್ಯನವರ ದ್ವೀತಿಯ ಪೀಠಾರೋಹಣದ ವಾರ್ಷಿಕೋತ್ಸವ ಹಾಗೂ ಶರಣ ಸಂಸ್ಕತಿ ಉತ್ಸವ ಮತ್ತು ನೂತನ ಮಹಾ ರಥೋತ್ಸವದ ಕಾರ್ಯಕ್ರಮಕ್ಕೆ ಹಾನಗಲ್ಲ ತಾಲೂಕಿನಿಂದ ಶೆಖರಿಸಿದ ರೊಟ್ಟಿ, ಗುರೆಳ್ಳು ಚಟ್ನಿ, ಶೇಂಗಾ ಚಟ್ನಿ, ಹೋಳಿಗೆ, ಅಕ್ಕಿ, ಬ್ಯಾಳಿ, ಪುಠಾಣಿ ಚಟ್ನಿ, ರವೆ ಉಂಡಿ, ಕರ್ಚಿಕಾಯಿ, ಬೆಲ್ಲ ಪದಾರ್ಥವನ್ನು ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ ಅವರ ನಿವಾಸದಲ್ಲಿ ಶೇಖರಿಸಿ ರವಿವಾರ ಚೌಡಯ್ಯದಾನಪುರಕ್ಕೆ ಕಳಿಸಲಾಯಿತು.

         ತಾಲೂಕಾ ಅಧ್ಯಕ್ಷ ರಾಜೇಂದ್ರ ಬಾರ್ಕಿ, ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ, ಪ್ರಮುಖರಾದ ಅನಂತವಿಕಾಸ ನಿಂಗೋಜಿ, ನಾಗೇಂದ್ರ ತುಮರಿಕೊಪ್ಪ, ಬಾಸ್ಕರ ಹುಲಮನಿ, ನಾರಾಯಣ ಕಠಾರಿ, ಲಕ್ಷ್ಮಣ ಬಾಳಂಬೀಡ, ಮಲ್ಲಪ್ಪ ಹುಲಿ, ಭೀಮಣ್ಣ ನಿಂಗೋಜಿ, ಬಲ್ಲಪ್ಪ ಬಂಕಾಪೂರ, ಮಂಜುನಾಥ ಪೂಜಾರ, ಕರಬಸಪ್ಪ ಬಾರ್ಕಿ, ಕರಿಯಪ್ಪ ಆನವಟ್ಟಿ, ಗುಡ್ಡಪ್ಪ ಕರೆಣ್ಣನವರ, ಧರ್ಮಣ್ಣ ಪೂಜಾರ, ಗುಡ್ಡಪ್ಪ ಕಳ್ಳಿಮನಿ, ಸತೀಶ ಕೂಸನೂರ, ಉಮೇಶ ಮಾಳಿಗುತ್ತೆಣ್ಣನವರ, ಅರ್ಜುನ ಚಿಕ್ಕಣ್ಣನವರ, ಶಿವಾನಂದ ಹಳೇಕೋಟಿ, ಮಂಜುನಾಥ ಕಳ್ಳಿಮನಿ, ಬಸವಂತಪ್ಪ ಗುಡಿಕೇರಿ, ಶೇಖಪ್ಪ ಹಳೇಕೋಟಿ, ಚಂದ್ರಗೌಡ ಪಾಟೀಲ, ಹನುಮಂತಪ್ಪ ಸುರಳೇಶ್ವರ, ಚಿಕ್ಕಪ್ಪ ನಿಂಗೋಜಿ, ಸಹದೇವಪ್ಪ ಸುರಳೇಶ್ವರ, ಬಸಲಿಂಗಪ್ಪ ದೊಡ್ಡಮನಿ, ಗುತ್ತೆಪ್ಪ ಸುಣಗಾರ, ರಾಮಚಂದ್ರ ಮಲಗುಂದ, ಬಸವರಾಜ ನೆರೆಗಲ್ಲ, ಸುರೇಶ ದೊಡ್ಡಮನಿ, ಸುರೇಶ ಲಕ್ಷ್ಮಣ್ಣನವರ, ಹೇಮಣ್ಣ ದೊಡ್ಡಮನಿ, ಸಹದೇವಪ್ಪ ಚಿಕ್ಕಣ್ಣನವರ, ಲಕ್ಷ್ಮವ್ವ ಮಲಗುಂದ, ಶಾರದಾ ಮಲಗುಂದ, ಸರಿತಾ ಗೊರನವರ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link