ಬಳ್ಳಾರಿ
ಪ್ರಸಕ್ತ ರಾಜ್ಯ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೆರೆ ಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಬೃಹತ್ ಛಾಯಾಚಿತ್ರ ಪ್ರದರ್ಶನ ಬಳ್ಳಾರಿಯ ಕೇಂದ್ರ ಬಸ್‍ನಿಲ್ದಾಣದಲ್ಲಿ ಸೋಮವಾರ ಆರಂಭವಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಈ ಛಾಯಾಚಿತ್ರ ಪ್ರದರ್ಶನ ಗಮನಸೆಳೆಯಿತು ಮತ್ತು ಸರಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ(ಸಾಧನೆಗಳ) ಅನಾವರಣವಾಯಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಈ ಬೃಹತ್ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಹೈಕ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ, ಗುವಿವಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಧ್ಯಯನ ಪೀಠ ಸ್ಥಾಪನೆ, ಕಲ್ಯಾಣ ಕರ್ನಾಟಕ ಭಾಗದ 21 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ, ಈ ಭಾಗದಲ್ಲಿ ಅಪೌಷ್ಠಿಕತೆ ನಿವಾರಣೆ ಮತ್ತು ಶಿಕ್ಷಣದ ಫಲಿತಾಂಶ ಉತ್ತಮಗೊಳಿಸಲು ಒತ್ತು, ಕಲ್ಯಾಣ ಕರ್ನಾಟಕ ಸಮಗ್ರ ಕಲ್ಯಾಣಕ್ಕೆ ಒತ್ತು ನೀಡಿರುವುದು ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆದ್ಯತೆ,ಕಲಬುರಗಿಯಲ್ಲಿ ಕೆಎಟಿ ಪ್ರಾರಂಭ, 371(ಜೆ)ಗೆ ಸಂಬಂಧಿಸಿದಂತೆ ವಿಶೇಷ ಕೋಶದ ಶಾಖಾ ಕಚೇರಿ ಕಲಬುರಗಿಯಲ್ಲಿ ಪ್ರಾರಂಭಕ್ಕೆ ನಿರ್ಧಾರ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಪರ್ವಕ್ಕೆ ಸರಕಾರ ಒತ್ತು ನೀಡಿರುವ ಛಾಯಾಚಿತ್ರಗಳ ಪ್ರದರ್ಶನ ಈ ಸಂದರ್ಭದಲ್ಲಿ ಗಮನಸೆಳೆದವು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಕೇಂದ್ರ ಸರಕಾರದ ಜೊತೆಗೆ ರಾಜ್ಯದ ಕೊಡುಗೆ(ಕೇಂದ್ರದ ವಾರ್ಷಿಕ 6 ಸಾವಿರ ರೂ.ನೆರವಿನೊಂದಿಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ 4 ಸಾವಿರ ರೂ.),ರೈತರು ಬೆಳೆಯುವ ಹಸಿರು ಮೇವು ಖರೀದಿ ದರ ಪ್ರತಿ ಟನ್‍ಗೆ 3 ಸಾವಿರ ರೂ.ಗಳಿಂದ 4 ಸಾವಿರಕ್ಕೆ ಹೆಚ್ಚಳ, ಅನ್ನದಾತ ರೈತರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಿರುವ ಬೃಹತ್ ಛಾಯಾಚಿತ್ರಗಳ ಫಲಕಗಳ ಪ್ರದರ್ಶನಕ್ಕಿಡಲಾಗಿತ್ತು.
ಎಸ್ಸಿ/ಎಸ್ಟಿ ಅಭಿವೃದ್ಧಿಗಾಗಿ ಎಸ್‍ಸಿಪಿ/ಟಿಎಸ್ಪಿ ಅಡಿ 30455 ಕೋಟಿ ರೂ.ಅನುದಾನ, ಈವರೆಗೆ 5868 ಕೋಟಿ ರೂ.ವೆಚ್ಚ, ಪರಿಶಿಷ್ಟ ಜಾತಿ ಕಾಲೋನಿಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಕ್ಕೆ ಒತ್ತು ನೀಡಿರುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿ 207 ಅಂಗನವಾಡಿ ಕಟ್ಟಡಗಳ ನಿರ್ಮಾಣ, 1 ಸಾವಿರ ಅಂಗನವಾಡಿ ಕಟ್ಟಡಗಳ ದುರಸ್ತಿಗೆ 10 ಕೋಟಿ ರೂ ಬಿಡುಗಡೆ, ಪ್ರಧಾನಮಂತ್ರಿಗಳ ಮಾತೃವಂದನಾ ಯೋಜನೆ ಅಡಿ 3 ಕಂತುಗಳಲ್ಲಿ 5 ಸಾವಿರ ರೂ.ಸಹಾಯಧನ, 97246 ಫಲಾನುಭವಿಗಳಿಗೆ ಪ್ರಯೋಜನ ಮತ್ತು 44.65ಕೋಟಿ ರೂ.ನೆರವು, ಮಹಿಳಾ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಒದಗಿಸಲು ಹಣ ಬಿಡುಗಡೆ ಮಾಡಿರುವ ಛಾಯಾಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ 129305 ಫಲಾನುಭವಿಗಳಿಗೆ ಚಿಕಿತ್ಸೆ ಅನುಮೋದನೆ,197 ಕೋಟಿ ರೂ.ವೆಚ್ಚ, ಇದುವರೆಗೆ 23 ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, 49 ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಠಿಕ ಪುನಶ್ಚೇತನ ಕೇಂದ್ರಗಳ ಸ್ಥಾಪನೆ ಮಾಡಿರುವ ಛಾಯಾಚಿತ್ರಗಳನ್ನು ಸಾರ್ವಜನಿಕರು ಹಾಗೂ ಗಣ್ಯರು ವೀಕ್ಷಿಸಿದರು.
ಶಿಕ್ಷಕರ ವೃತ್ತಿಪರ ಕೌಶಲಗಳನ್ನು ಹೆಚ್ಚಿಸಲು ಗುರುಚೇತನ ತರಬೇತಿ; ಒಂದು ಲಕ್ಷ ಶಿಕ್ಷಕರಿಗೆ ಪ್ರಯೋಜನ,ಪ್ರಾಥಮಿಕ ಶಾಲೆಗಳ 3202,ಪ್ರೌಢಶಾಲೆಗಳ 2120 ಹಾಗೂ ಸರಕಾರಿ ಪಿಯು ಕಾಲೇಜುಗಳ 449 ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿಗೆ ಅನುದಾನ ಬಿಡುಗಡೆ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಒತ್ತು ನೀಡಿಕೆ.
ಅತಿವೃಷ್ಠಿಯಿಂದ ತತ್ತರಿಸಿದ ರಾಜ್ಯದ 103 ಪ್ರವಾಹ ಪೀಡಿತ ತಾಲೂಕುಗಳಲ್ಲಿ ನರೇಗಾಡಿ 1577 ಕೋಟಿ ರೂ.ವೆಚ್ಚ, ಗ್ರಾಮೀಣ ಜನರಿಗೆ ಶುದ್ಧಕುಡಿಯುವ ನೀರು ಪೂರೈಕೆಗೆ 2795 ಕೋಟಿ ಬಿಡುಗಡೆ 833 ಕೋಟಿ ರೂ.ವೆಚ್ಚ. 1.34ಲಕ್ಷ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಹಾಗೂ 68 ಸಮುದಾಯ ಶೌಚಾಲಯಗಳ ನಿರ್ಮಾಣ, ಎಲ್ಲ ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಾಪನೆಗೆ ನಿರ್ಧಾರ ಮಾಡಿರುವ ಛಾಯಾಚಿತ್ರಗಳ ಫಲಕಗಳು ಅಳವಡಿಸಲಾಗಿದೆ.
ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಹಾಗೂ ತಳಸಮುದಾಯದ ಜನರ ಕಲ್ಯಾಣಕ್ಕೆ ಸರಕಾರ ವಹಿಸಿದ ವಿಶೇಷ ಕ್ರಮಗಳು ಇದುವರೆಗೆ ಅವರಿಗೆ ಮಾಡಿರುವ ವೆಚ್ಚ. ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ವಿಶೇಷ ಒತ್ತು ನೀಡಿರುವುದು. ಪ್ರಸಕ್ತ ವರ್ಷದಲ್ಲಿ 1.50ಲಕ್ಷ ಮನೆಗಳ ನಿರ್ಮಾಣದ ಗುರಿ;ಈವರೆಗೆ 78285 ಮನೆಗಳ ನಿರ್ಮಾಣ.
ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿ ಸರಕಾರ ಪರಿಹಾರ ಕಾರ್ಯಗಳಿಗೆ 6450 ಕೋಟಿ ರೂ.ಮಂಜೂರು, ಒಟ್ಟು 4.30ಲಕ್ಷ ರೈತ ಕುಟುಂಬಗಳ ಬೆಳೆಹಾನಿ,ಖುಷ್ಕಿ ಭೂಮಿಗೆ ಹೆಕ್ಟೇರ್‍ಗೆ ರೂ.16.800, ನೀರಾವರಿ ಬೆಳೆಗಳಿಗೆ ರೂ.23.500, ವಾಣಿಜ್ಯ ಬೆಳೆಗಳಿಗೆ 28 ಸಾವಿರ ರೂ.ಪರಿಹಾರ. ತಕ್ಷಣದ ಪರಿಹಾರವಾಗಿ ತಲಾ 10 ಸಾವಿರಗಳಂತೆ 2.04ಲಕ್ಷ ಕುಟುಂಬಗಳಿಗೆ ರೂ.204.10ಕೋಟಿ ಬಿಡುಗಡೆ ಸೇರಿದಂತೆ ನಾನಾಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸಂತ್ರಸ್ತರ ನೋವಿಗೆ ಮಿಡಿದಿದೆ.
ಐಟಿ-ಬಿಟಿ ಅಭಿವೃದ್ಧಿಗೆ ಆವಿಷ್ಕಾರ ಪ್ರಾಧಿಕಾರ, ನೇಕಾರರ ಮತ್ತು ಮೀನುಗಾರರ ಸಾಲಮನ್ನಾ, ಕೈಗಾರಿಕೆಗಳ ಉತ್ತೇಜನಕ್ಕೆ ಕೈಗೊಂಡ ಕ್ರಮಗಳು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿರುವುದು, ನಗರಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಛಾಯಾಚಿತ್ರಗಳು ಗಮನಸೆಳೆದವು.
ಸರಕಾರದ ಸಾಧನೆ ಬಿಂಬಿಸುವ “ದಿನ ನೂರು ಸಾಧನೆ ನೂರಾರು” ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಶಾಸಕ ಸೋಮಶೇಖರರೆಡ್ಡಿ ಅವರು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಕೆಎಂಎಫ್ ನಾಮನಿರ್ದೇಶಿತ ಸದಸ್ಯ ವೀರಶೇಖರರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಅಪರ ಜಿಲ್ಲಾಧಿಕಾರಿ ಎಂ.ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಎನ್‍ಇಕೆಎಸ್‍ಆರ್‍ಟಿಸಿ ಚಂದ್ರಶೇಖರ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ, ಕಾರ್ಮಿಕ ನಿರೀಕ್ಷಕ ರವಿದಾಸ್, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ