ಕೊಟ್ಟೂರು
ಬಜೆಟ್‍ನಲ್ಲಿ ಕೊಟ್ಟೂರು ಕೆರೆ ಹಾಗೂ ತಾಲ್ಲೂಕಿನ ಹತ್ತು ಕೆರೆಗಳಿಗೆ ರಾಜುವಳಿಯಿಂದ ನೀರು ತುಂಬುವ ಯೋಜನೆ ಸುಮಾರು 200ಕೋಟಿ ಅನುದಾನದಲ್ಲಿ ಜಾರಿಯಾಗಲಿದೆ ಎಂಬ ವಿಶ್ವಾಸವನ್ನು ಹಗರಿಬೊಮ್ಮನಹಳ್ಳಿ ಶಾಸಕ ಎಸ್.ಭೀಮಾನಾಯ್ಕ್ ವ್ಯಕ್ತಪಡಿಸಿದರು.
ಕೊಟ್ಟೂರು ತಾಲ್ಲೂಕಿನ ರಾಂಪುರ, ಹೊಸಕೊಡಿಹಳ್ಳಿ, ಸುಟ್ಟಕೊಡಿಹಳ್ಳಿ, ಬೊರನಹಳ್ಳಿಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ, ಸಿಸಿ ರಸ್ತೆ ಕಾಮಾಗಾರಿ, ಪಶು ಅಸ್ಪತ್ರೆ ಉದ್ಘಾಟನೆ ಸೇರಿದಂತೆ 2.43 ಕೋಟಿ ರು. ಕಾಮಾಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕೊಟ್ಟೂರು ಕೆರೆ ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳ ನೀರು ತುಂಬಿಸುವ ಯೋಜನೆಗೆ ಬಜೆಟ್‍ನಲ್ಲಿ ಹಣ ಮಂಜೂರು ಆಗುವುದು ಖಚಿತ.
ಈ ಭಾಗದಲ್ಲಿ ನೀರಾವರಿ ಹಾಗೂ ಅಂತರ್ಜಲವೂ ಹೆಚ್ಚಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.ಕಳೆದ ಏಳು ತಿಂಗಳಿಂದ ಬಿಜೆಪಿಯವರು ಬಜೆಟ್ ಮಂಡನೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ, ಇದೆಲ್ಲ ಸುದ್ದಸುಳ್ಳು, ರಾಜ್ಯ ಸರ್ಕಾರಕ್ಕೆ ಬಿಜೆಪಿಯಿಂದ ಯಾವುದೇ ದಕ್ಕೆ ಇಲ್ಲ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ರಾಜ್ಯದ ಮುಖ್ಯಮಂತ್ರಿ ಹೆಚ್,ಡಿ,ಕುಮಾರಸ್ವಾಮಿಯವರು, ನಮ್ಮ ಕಾಂಗ್ರೇಸ್ ನಾಯಕರು ಸಿದ್ದರಾಮಯ್ಯನವರು. ನಮ್ಮ ಶಾಸಕರು ಅವರವರ ಭಾವಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಎಂದು ಪ್ರೀತಿ ವಿಶ್ವಾಸಕ್ಕೆ ಹೇಳುತ್ತಿದ್ದಾರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯವರೆ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಅಭಿವೃದ್ಧಿ ದೃಷ್ಠಿಯಿಂದ ನೋಡಿದರೆ ದೇವರಾಜು ಅರಸು ಬಿಟ್ಟರೆ, ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ ಎಂದರು.ಉಜ್ಜಿನಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್, ಕಾಂಗ್ರೇಸ್ ಮುಖಂಡ ಪಿ.ಹೆಚ್.ದೊಡ್ಡರಾಮ್ಮಣ್ಣ, ವಿವೇಕನಂದ ಗೌಡ, ಭರಮಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ ನಾಯ್ಕ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಕಾಧಿಕಾರಿ ಬಸಣ್ಣ ಇದ್ದರು