ಬಳ್ಳಾರಿ
ಬಳ್ಳಾರಿಯಲ್ಲಿ ಇನ್ಮುಂದೆ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಭೂ ಪರಿವರ್ತನೆಗೆ ಮ್ಯಾನ್ಯುಯಲ್ ಆಗಿ ಅರ್ಜಿ ಸಲ್ಲಿಸುವುದಕ್ಕೆ ಜಿಲ್ಲಾಡಳಿತ ಇತಿಶ್ರೀ ಹಾಡಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ.
ಪ್ರಯೋಗಾರ್ಥವಾಗಿ ಇಂದಿನಿಂದ ಆನ್ಲೈನ್ ಅರ್ಜಿ ಸಲ್ಲಿಸುವುದಕ್ಕೆ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆನ್ಲೈನ್ ಅರ್ಜಿ ಸಲ್ಲಿಸುವ ವೆಬ್ಸೈಟ್ಗೆ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಅರ್ಜಿದಾರ ಸಮ್ಮುಖದಲ್ಲಿಯೇ ಶುಕ್ರವಾರ ಚಾಲನೆ ನೀಡಿದರು.
ಪ್ರಾಯೋಗಿಕವಾಗಿ ಚಾಲನೆ ನೀಡಿದ ನಂತರ ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಅ.9 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಯಾವ ದಾಖಲೆಗಳನ್ನು ಲಗತ್ತಿಸಬೇಕು (ಅಪಲೋಡ್) ಎಂಬುದನ್ನು ಆ ವೆಬ್ಸೈಟ್ನಲ್ಲಿಯೇ ವಿವರವಾಗಿ
ನಮೂದಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಿಕೆಯಿಂದ ಮೊದಲ ಅರ್ಜಿ ಸಲ್ಲಿಸಿದವರಿಗೆ ಮೊದಲ ಪ್ರಾಶಸ್ಯ ಎಂಬ ರೀತಿಯಲ್ಲಿ ಕಾನೂನುಬದ್ಧವಾಗಿ ಯಾವ್ಯಾವ ಅರ್ಜಿ ಇರುತ್ತವೆಯೋ ಅವುಗಳನ್ನು 120 ದಿನದೊಳಗೆ ಇತ್ಯರ್ಥ ಪಡಿಸಲಾಗುವುದು ಎಂದು ಅವರು ಹೇಳಿದರು. ಮೊದಲಿಗೆ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗುತ್ತಿದ್ದು, ನಂತರ ತಾಲೂಕು ಹಾಗೂ ನಾಡ ಕಚೇರಿಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಅವರು ಇಂದರಿಂದ ಸಾರ್ವಜನಿಕರ ಅಲೇದಾಟ ತಪ್ಪಲಿದೆ ಮತ್ತು ಮಧ್ಯವರ್ತಿಗಳ ಅವಕಾಶಕ್ಕೆ ಕಡಿವಾಣ ಬಿಳಲಿದೆ ಎಂದು ಹೇಳಿದರು.
ಭೂ ಪರಿವರ್ತನೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಇಲಾಖೆಗಳ ಟೆಕ್ನಿಕಲ್ ಎನ್.ಒ.ಸಿ (ನಿರುಪೇಕ್ಷಣಾ ಪ್ರಮಾಣ ಪತ್ರ) ಗಳನ್ನು ಪಡೆದುಕೊಂಡು ಇದರಲ್ಲಿ ಅಪಲೋಡ್ ಮಾಡಬೇಕು ಎಂದರು.ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಇನ್ಮುಂದೆ ಇ-ಆಫೀಸ್ : ಜಿಲ್ಲಾಧಿಕಾರಿಗಳ ಕಚೇರಿ ಇನ್ಮುಂದೆ ಇ-ಕಚೇರಿ (ಪೇಪರ್ ಲೆಸ್ ಆಫೀಸ್)ಯಾಗಿ ಪರಿವರ್ತನೆ ಮಾಡಲಾಗಿದೆ. ಸಾರ್ವಜನಿಕರ ಅರ್ಜಿಗಳು ಯಾವ ಹಂತದಲ್ಲಿವೆಯೇ ಎಂಬುವುದನ್ನು ವೀಕ್ಷಿಸಬಹುದಾಗಿದೆ.
ಇದರಿಂದ ಕೆಲಸದಲ್ಲಿ ಮತ್ತುಷ್ಟು ಕ್ಷಿಪ್ರಗತಿಯಲ್ಲಿ ಕೆಲಸ ಮಾಡಲು ಅನುಕೂಲವಾಗಲಿದೆ ಹಾಗೂ ಜನರಿಗೆ ಕ್ಷೀಪ್ರಗತಿಯಲ್ಲಿ ಸೇವೆ ದೊರಕಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ