ಮೇ29ರವರೆಗೆ ಮದ್ಯ ಮಾರಾಟ ನಿಷೇಧ..!!

ತಿಪಟೂರು :

   ಮೇ 29 ರಂದು ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ 31 ವಾರ್ಡ್‍ಗಳಿಂದ 48 ಮತಗಟ್ಟೆಗಳನ್ನು ಒಳಗೊಂಡಿದ್ದು ಇದರಲ್ಲಿ 2 ಅತೀಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪೂವಿತ ತಿಳಿಸಿದರು.

      ನಗರದ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಗರಸಭಾ ಚುನಾವಣೆಯಲ್ಲಿ 31 ವಾರ್ಡ್‍ಗಳಿಂದ 48 ಮತಗಟ್ಟಗಳಿದ್ದು ಅದರಲ್ಲಿ ಹಳೇಪಾಳ್ಯದ ಸರ್ಕಾರಿ ಶಾಲೆಯಲ್ಲಿರುವ ವಾರ್ಡ್ 11 ಮತ್ತು 12 ಗಳನ್ನು ಅತೀಸೂಕ್ಷವೆಂದು ಗುರುತಿಸಲಾಗಿದ್ದು ಸೂಕ್ತ ಪೋಲೀಸ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಇದಕ್ಕೆ ಪೂರಕವಾಗಿ ಮೇ 27ರ ಸಂಜೆ 6 ರಿಂದ ಮೇ 29ರ ವರೆಗೆ ಮಧ್ಯಮಾರಾಟ ನಿಷೇದಮಾಡಲಾಗಿದ್ದು ಸಾರ್ವಜನಿಕರಿಗೆ ಏನಾದರೂ ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ಸಿಕ್ಕಿದರೆ 24/7 ಕಂಟೋಲ್ ರೂಂ ನಂ 08134-251039 ಗೆ ಕರೆಮಾಡಬಹುದೆಂದು ತಿಳಿಸಿದರು.

      ನಗರಸಭಾ ಚುನಾವಣೆಯಲ್ಲಿ 31 ವಾರ್ಡ್‍ಗಳಿಂದ ಬಿ.ಜೆ.ಪಿ 26, ಕಾಂಗ್ರೆಸ್ 29, ಜೆ.ಡಿ.ಎಸ್ 29, ಬಿ.ಎಸ್ಪಿ 1 ಮತ್ತು 52 ಜನ ಪಕ್ಷೇತರುರು ಸೇರಿ 134 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿ 21897 ಪುರುಷ, 23358 ಮಹಿಳಾ ಮತ್ತು 3 ಇತರೆ ಮತದಾರರು ಸೇರಿ ಒಟ್ಟು 45258 ಮತದಾರರಿದ್ದಾರೆ. ಮತ ಚಲಾಯಿಸಲು ಚುನಾವಣಾ ಆಯೋಗ ನಿಗಧಿಪಡಿಸಿರುವ ದಾಖಲೆಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ತೆಗೆದುಕೊಂಡು.

      ನಗರಠಾಣೆಯ ಸರ್ಕ್‍ಲ್ ಇನ್ಸ್‍ಪೆಕ್ಟರ್ ನವೀನ್ ಮಾತನಾಡಿ ಚುನಾವಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು 2 ಡಿ.ಆರ್ ತುಕಡಿ, ನಮ್ಮ ಠಾಣೆಯ ಸಿಬ್ಬಂದಿಯ ಜೊತೆಗೆ ತಿಪಟೂರು ಗ್ರಾಮಾಂತರ ಮತ್ತು ಚಿಕ್ಕನಾಯಕನಹಳ್ಳಿ ಯಿಂದಲೂ ಹೆಚ್ಚುವರಿ ಸಿಬ್ಬಂದಿಯ ಜೊತೆಗೆ ಹೋಂಗಾಡ್ರ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link