ಬೆಂಗಳೂರು
ಫೇಸ್‍ಬುಕ್ ಸ್ನೇಹಿತನೊಬ್ಬ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಯುವಕನೊಬ್ಬನನ್ನು ನಂಬಿಸಿ ಉಪ್ಪಾರಪೇಟೆಯ ಲಾಡ್ಜ್‍ವೊಂದಕ್ಕೆ ಕರೆಸಿಕೊಂಡು ಪ್ರಜ್ಞೆ ತಪ್ಪುವ ಪಾನೀಯ ಕುಡಿಸಿ 4 ಲಕ್ಷ ರೂಗಳನ್ನು ವಂಚಿಸಿರುವ ಕೃತ್ಯ ನಡೆದಿದೆ.
ನಿರುದ್ಯೋಗಿಯಾಗಿದ್ದ ವಿನ್ಸೆಂಟ್‍ಗೆ ಕಳೆದ ಮಾರ್ಚ್‍ನಲ್ಲಿ ಫೇಸ್‍ಬುಕ್‍ನಲ್ಲಿ ಪರಿಚಿತನಾದ ಆರೋಪಿ ಪುನೀತ್ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಕೆನಡಾದಲ್ಲಿರುವ ಆರೋಪಿ ಮೋಹಿತ್ ಎಂಬುವವನ ಮೊಬೈಲ್ ನಂಬರ್ ಕೊಟ್ಟು ಅವನನ್ನು ಸಂಪರ್ಕಿಸಲು ತಿಳಿಸಿದ್ದ.
ಅದನ್ನು ನಂಬಿ ಸಂಪರ್ಕಿಸಿದಾಗ ಮೋಹಿತ್ 6000(4,19,034 ರೂ.) ಅಮೆರಿಕನ್ ಡಾಲರ್ ಕೊಟ್ಟರೆ ಕೆನಡಾದಲ್ಲಿ ಗ್ಯಾರಂಟಿ ಕೆಲಸ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದು ಅದನ್ನು ನಂಬಿದ್ದ ವಿನ್ಸೆಂಟ್ 4 ಲಕ್ಷ ರೂ. ಹಣ ಹೊಂದಿಸಿ ಕೋರಮಂಗಲದಲ್ಲಿ ಹಣವನ್ನು ಡಾಲರ್‍ಗೆ ಬದಲಾವಣೆ ಮಾಡಿಸಿಕೊಂಡು 6 ಸಾವಿರ ಅಮೆರಿಕನ್ ಡಾಲರ್ ಪಡೆದು ಮೇ 25 ರಂದು ಮೋಹಿತ್‍ಗೆ ವಿಷಯ ತಿಳಿಸಿದ್ದಾನೆ.
ಮೋಹಿತ್ ಮೇ 26 ರಂದು ವಾಟ್ಸಪ್ ಮೂಲಕ ಗಾಂಧಿ ನಗರದ ಲಾವಣ್ಯ ಲಾಡ್ಜ್‍ಗೆ ಬರುವಂತೆ ವಿನ್ಸೆಂಟ್‍ಗೆ ಸಂದೇಶ ಕಳಿಸಿದ್ದಾನೆ. ಲಾಡ್ಜ್‍ನಲ್ಲಿ ಮತ್ತಿಬ್ಬರು ಅಪರಿಚಿತರೊಂದಿಗೆ ಭೇಟಿಯಾದ ಪುನೀತ್, ವಿನ್ಸೆಂಟ್ ಸಹೋದರನ ಹೆಸರಿನಲ್ಲಿ ಲಾಡ್ಜ್ ರೂಮ್ ಬುಕ್ ಮಾಡಿಸಿದ್ದ.
ಪಾಸ್‍ಪೋರ್ಟ್ ಸೇರಿದಂತೆ ಕೆಲ ದಾಖಲೆಗಳನ್ನು ಪಡೆದಿದ್ದ, ಬಳಿಕ ವಿನ್ಸೆಂಟ್ ಹಾಗೂ ಆತನ ಸಹೋದರನಿಗೆ ಜ್ಯೂಸ್ ತರಿಸಿ ಕೊಟ್ಟಿದ್ದು ಅದನ್ನು ಕುಡಿದ ವಿನ್ಸೆಂಟ್ ಹಾಗೂ ಸಹೋದರ ಪ್ರಜ್ಞೆ ತಪ್ಪಿದ್ದು ಸಂಜೆ 7 ಗಂಟೆಗೆ ಎಚ್ಚರಗೊಂಡಾಗ ಆಸ್ಪತ್ರೆಯಲ್ಲಿದ್ದ ಸಹೋದರರಿಬ್ಬರಿಗೆ ಮೋಸ ಹೋಗಿರುವುದು ಗೊತ್ತಾಗಿದೆ.
ಫೇಸ್ ಬುಕ್ ಸ್ನೇಹಿತನನ್ನು ನಂಬಿ ಮೋಸ ಹೋದ ವಿನ್ಸೆಂಟ್ ನೀಡಿರುವ ದೂರು ದಾಖಲಿಸಿರುವ ಉಪ್ಪಾರಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








