ದೀನದಯಾಳ್ ಉಪಾಧ್ಯಯರವರ 102 ನೇ ಜನ್ಮದಿನಾಚರಣೆ

ಹಾವೇರಿ :

        ನಗರದ ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನದಯಾಳ್ ಉಪಾಧ್ಯಯರವರ 102 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದರಾಜ ಕಲಕೋಟಿ ಮಾತನಾಡಿ ಪಂಡಿತ ದೀನದಯಾಳ್ ಉಪಾಧ್ಯಯರವರು ರಾಷ್ಟ್ರದ ಎಳಿಗೆಗಾಗಿ ಜೀವನ ಪೂರ್ತಿ ಶ್ರಮಜೀವಿಯಾಗಿಯೇ ದುಡಿದರು.

       ಜನಸಂಘವನ್ನು ಸ್ಥಾಪಿಸುವ ಮೂಲಕ ರಾಷ್ಟ್ರದ ಜನತೆಯಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಹುಟ್ಟು ಹಾಕಿದರು, ಆ ಮೂಲಕ ರಾಷ್ಟ್ರದ ವೈಚಾರಿಕತೆ ಬದಲಾಗಲು ಶ್ರಮಿಸಿದರು ಎಂದರು.

       ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಪಂಡಿತ ದೀನದಯಾಳ್ ಉಪಾಧ್ಯಯರವರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಣೆ ಮಾಡಿದರು. ಆರ್‍ಎಸ್‍ಎಸ್ ವಿಚಾರಗಳಿಂದ ಪ್ರೇರೆಪಿತರಾಗಿ ತಾವು ಇರುವವರಗೆ ರಾಷ್ಟ್ರಕ್ಕಾಗಿ ಸೇವೆಗೈದರು. ರಾಷ್ಟ್ರೀಯ ಕಾಂಗ್ರೇಸಿನ ಇಬ್ಬುಗೆಯ ನೀತಿಯಿಂದ ಬೆಸತ್ತು ಜನಸಂಘವನ್ನು ಸ್ಥಾಪಿಸಿ ಆ ಮೂಲಕ ದೇಶದ ಜನರಲ್ಲಿ ವಿಶಿಷ್ಟ ವೈಚಾರಿಕತೆಯನ್ನು ಹುಟ್ಟು ಹಾಕಿದರು. ತದ ನಂತರ ಭಾರತೀಯ ಜನತಾ ಪಕ್ಷ ಪಂಡಿತ ದೀನದಯಾಳ್ ಉಪಾಧ್ಯಯ ರವರ ವಿಚಾರಗಳ ಅನ್ವಯ ಈಗ ಆಡಳಿತ ನಡೆಸುತ್ತಿದ್ದು, ರಾಷ್ಟ್ರದ ಜನತೆ ಬಿಜೆಪಿ ಕಡಗೆ ಮನಸೋತಿರುವದು ಪಂಡಿತ ದೀನದಯಾಳ್ ಉಪಾಧ್ಯಯ ರವರ ವಿಚಾರಗಳ ಪ್ರೇರಣೆ ಎಂದರು.

        ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲಕಟ್ಟಿ, ವೀರಣ್ಣ ಅಂಗಡಿ, ನಾಗರಾಜ ಹುರಳಿಕುಪ್ಪಿ, ಸದಾನಂದ ಸುರಳಿಹಳ್ಳಿ, ದ್ಯಾಮಣ್ಣ ಕೊಟ್ಟೂರ, ತಿರಕಪ್ಪ ಕರ್ಜಗಿ, ಗಣೇಶ ಕಮ್ಮಾರ, ನಾಗಪ್ಪ ಎರಿಮನಿ, ಕೆ.ಎಚ್. ಕಡ್ಲಿ, ಎನ್.ಎಮ್. ದೈವಜ್ಞ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link