ಬೇಡಜಂಗಮ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಹಗರಿಬೊಮ್ಮನಹಳಿ:

      ಜಂಗಮ ಸಮುದಾಯಕ್ಕೆ ಬೇಡಜಂಗಮ ಪ್ರಮಾಣಪತ್ರವನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ತಹಸೀಲ್ದಾರ್‍ರನ್ನು ಕೇಳಲು ಆಗಮಿಸಿದ ಸಮುದಾಯದ ಮುಖಂಡರು, ತಾಲೂಕು ಕಚೇರಿಯ ಮುಂದೆ ದಿಢೀರನೇ ಪ್ರತಿಭಟನೆ ಮಾಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

        ಅಖಿಲ ಕರ್ನಾಟಕ ಡಾ||ಅಂಬೇಡ್ಕರ್ ಬೇಡಜಂಗಮ ಪರಿಶೀಷ್ಟ ಜಾತಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಡಾ||ಎಂ.ಪಿ.ದ್ವಾರಕೇಶ್ವರಯ್ಯ ನೇತೃತ್ವದಲ್ಲಿ ಈ ತಾಲೂಕಿನಲ್ಲಿ ಜಾತಿ ಪ್ರಮಾಣಪತ್ರವನ್ನು ನೀಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಬುಧವಾರ ತಾಲೂಕು ಕಚೇರಿಗೆ ಆಗಮಿಸಿದರು. ತಹಸೀಲ್ದಾರ್ ವಿಜಯಕುಮಾರ್ ಹೊಸಪೇಟೆ ಕಚೇರಿಯ ಸಭೆಯಲ್ಲಿ ಪಾಲ್ಗೊಳ್ಳು ಹೋಗಿದ್ದರಿಂದ ಶಿರಸ್ಥಾದಾರರನ್ನು ಪ್ರಶ್ನಿಸಿದರು.

         ನಂತರ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕಾಧಿಕಾರಿಗಳನ್ನು ಪ್ರಮಾಣಪತ್ರ ನೀಡುವಲ್ಲಿ ಅನುಸರಿಸುತ್ತಿರುವ ನೀತಿ ಸರಿ ಇಲ್ಲವೆಂದು ತರಾಟೆಗೆ ತೆಗೆದುಕೊಂಡರು.

        ಅವರಿಗೆ ಯಾವುದೇ ಸರಿಯಾದ ಮಾಹಿತಿ ದೊರೆಯದ ಕಾರಣ ಅನಿವಾರ್ಯವಾಗಿ ತಾಲೂಕು ಕಚೇರಿಯ ಮುಂದೆ ತಮ್ಮ ಬೇಡಿಕೆಯನ್ನಿಟ್ಟು ಕೆಲ ಕಾಲ ಪ್ರತಿಭಟಿಸಿ, ತಹಸೀಲ್ದಾರ್ ವಿಜಯಕುಮಾರ್‍ಗೆ ಧಿಕ್ಕಾರ, ಜಾತಿ ಪ್ರಮಾಣ ಅವರನ್ನು ಕೂಡಲೆ ದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ದ್ವಾರಕೇಶ್ವರಯ್ಯ, ರಾಜ್ಯಾದ ನಾನಾ ಕಡೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡುತಿದ್ದಾರೆ.

       ಆದರೆ, ಈ ತಾಲೂಕಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಮರ್ಮ ಏನೆಂದು ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.
ಅಷ್ಟಕ್ಕೂ ನಾವು ಬೇಡ ಜಂಗಮ ಎಂದು ಜಾತಿ ಪ್ರಮಾಣಪತ್ರ ಕೇಳುತ್ತಿರುವುದು, ಅದು ಬಿಟ್ಟು ಇಂದಿಗೂ ವೀರಶೈವ ಲಿಂಗಾಯತ ಎಂದು ಧರ್ಮವನ್ನು ಜಾತಿಯಾಗಿ ಪ್ರಮಾಣಪತ್ರ ನೀಡುತಿದ್ದಾರೆ ಎಂದು ದೂರಿದರು. ಇದೇ ರೀತಿ ವಿಳಂಬಮಾಡುತ್ತ ಹೋದರೆ ತಹಸೀಲ್ದಾರ್ ಮೇಲೆ ದೂರನ್ನು ನೀಡುವ ಮೂಲಕ ಮೇಲಾಧಿಕಾರಿಗಳಿಂದ ಕ್ರಮ ಜರುಗಿಸುವಂತೆ ಒತ್ತಡ ತರಬೇಕಾಗುತ್ತೆ ಎಂದು ಎಚ್ಚರಿಸಿದರು.

      ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಪದಾಧೀಕಾರಿಗಳಾದ ಸೊನ್ನದ ಗುರುವಯ್ಯ, ಶ್ರೀನಿವಾಸ, ಪ್ರಕಾಶ, ಶಶಿಧರ, ನಾಗರಾಜ್, ವೀರಯ್ಯ, ಅಜ್ಜಯ್ಯ, ಜಗದೀಶ, ಆನಂದ, ಬೆಣಕಲ್ ಮಹೇಶ್ವರಯ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

                          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link