ಕೊಟ್ಟೂರು
ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮಳೆಗಾಗಿ ಪ್ರಾರ್ಥಿಸಿ ಗುರುವಾರದಂದು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮತ್ತು ಪರ್ಜನ್ಯ ಹೋಮದ ಸೇವೆಯನ್ನು ಸಲ್ಲಿಸಿತು.
ಗುರುವಾರ ಬೆಳಿಗ್ಗೆ 5 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ ಸೇವೆಯನ್ನು ಧರ್ಮಕರ್ತ ಸಿ.ಹೆಚ್.ಎಂ. ಗಂಗಾಧರ, ಲೋಕಯ್ಯ ನಿಜಲಿಂಗಸ್ವಾಮಿ, ನಾಗರಾಜ, ರಾಶಿ, ಮತ್ತಿತರರು ನೆರವೇರಿಸಿದರು.
ದೇವಸ್ಥಾನದ ಹೊರ ಭಾಗದಲ್ಲಿ ನಿರ್ಮಿಸಿದ ಹೋಮ ಕುಂಡದಲ್ಲಿ ಮೃತ್ಯುಂಜಯ ಹೋಮ ರುದ್ರಹೋಮ, ಪರ್ಜನ್ಯ ಹೋಮ ಮತ್ತು ನವಗ್ರಹ ಶಾಂತಿ ಪೂಜೆಗಳನ್ನು ಓಂಕಾರಶಾಸ್ತ್ರೀ, ಪ್ರಕಾಶ, ಅಣ್ಣಯ್ಯ, ಚಂದ್ರಯ್ಯ, ಶೇಖರಯ್ಯ ಮತ್ತಿತರ ಪೌರೋಹಿತ್ಯದಲ್ಲಿ ಸುಮಾರು 3 ಗಂಟಗಳ ವರೆಗೆ ನಡೆಯಿತು. ಕೊನೆಯಲ್ಲಿ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರ ಮತ್ತು ಪತ್ನಿ ಶಕುಂತಲ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಭರಮಣ್ಣ, ಮಾಜಿ ಸದಸ್ಯರಾದ ಮರಬದ ನಾಗರಾಜ, ಬುಗ್ಗಳ್ಳಿ ಕೊಟ್ರೇಶ, ಮಂಜುನಾಥ ಗೌಡ, ಕೆಂಪಳ್ಳಿ ಗುರುಸಿದ್ದನಗೌಡ, ಹಾಲಪ್ಪ, ಅಂಬರಿ ವೀರಣ್ಣ, ಮತ್ತಿತರರು ಪಾಲ್ಗೊಂಡಿದ್ದರು. ಪರ್ಜನ್ಯ ಹೋಮ ನಡೆಸುವ ಮುಂಚೆ ಕೊಟ್ಟೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಮಳೆ ಬಂದಿರುವುದು ರೈತರಲ್ಲಿ ಮತ್ತಷ್ಟು ಬಗೆಯ ಶ್ರೀಗುರುಕೊಟ್ಟೂರೇಶ್ವರನಲ್ಲಿ ನಂಬಿಕೆ ಇರಿಸುವಂತೆ ಮಾಡಿತು.