ಹೊಸಪೇಟೆ :
ಬಳ್ಳಾರಿ ಜಿಲ್ಲಾದ್ಯಾಂತ ಗಣಿಗಾರಿಕೆಯನ್ನು ಪುನರ್ ಆರಂಭಿಸಬೇಕೆಂದು ವಿಜಯನಗರ ಪ್ರಜಾವೇದಿಕೆಯ ರಾಜ್ಯಧ್ಯಕ್ಷ ವೈ.ಗೋವಿಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಗಣಿಗಾರಿಕೆ ಮುಚ್ಚಿರುವುದರಿಂದ ಜನಸಾಮನ್ಯರ ಬದುಕು ದುಸ್ತರವಾಗಿದೆ ನಿತ್ಯದ ಬುದುಕು ಕಟ್ಟಿಕೊಳ್ಳುವಲ್ಲಿ ಜನರು ಪರದಾಡುತ್ತಿದ್ದಾರೆ ಹಾಗಾಗಿ ಗಣಿಗಾರಿಕೆ ಪುನರ್ ಆರಂಭವಾದರೆ ಇದನ್ನು ನೆಚ್ಚಿಕೊಂಡವರು ಬದುಕು ಹಸನವಾಗುತ್ತದೆ.
ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿತರಾಗಿ ಮಾಡುವುದು, ಯಾವುದೇ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತಿಲ್ಲ, ಉದ್ಯೋಗದ ಭದ್ರತೆ ಇಲ್ಲವಾಗಿ ನಿರುದ್ಯೋಗ ಹೆಚ್ಚಾಗಿದ್ದು ಕೆಲಸ ಮಾಡುವ ಕೈಗಳಿಗೆ ಉದ್ಯೋಗ ಇಲ್ಲವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಡೊನೋಷನ್ ಹಾವಳಿ ಹೆಚ್ಚಾಗಿದೆ.
ಸೆ.29 ರಿಂದ 30 ರ ವರೆಗೆ ಎರಡು ದಿನಗಳ ಕಾಲ ನಡೆಯುವ ಬಳ್ಳಾರಿ ಜಿಲ್ಲಾ ಮಟ್ಟದ ಅಧ್ಯಾಯನ ಶಿಬಿರದಲ್ಲಿ ಈ ಎಲ್ಲಾ ವಿಷಯಗಳ ಮೇಲೆ ರಾಜ್ಯಾದ್ಯಾಂತ ವಿವಿಧ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳಲ್ಲಿ ಚರ್ಚೆ ಮಾಡಿ ಇಡಿ ರಾಜ್ಯದ್ಯಾಂತ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹತ್ತಿ ಅಡಿವೆಪ್ಪ, ರಾಜ್ಯ ಜಂಟಿ ಕಾರ್ಯದರ್ಶಿ ದಾನಮ್ಮ, ವಿಜಯನಗರ ಪ್ರಜಾವೇದಿಕೆಯ ಜಿಲ್ಲಾ ಸಮಿತಿ ಸದಸ್ಯೆ ಶಂಷಾದ್ ಬೀ, ಹೊಸಪೇಟೆ ತಾಲೂಕು ಉಪಾಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಚಾಂದಬಾಷ, ವಕೀಲ ಮಲ್ಲಿಕಾರ್ಜುನ ಇನ್ನಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
