ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ : ದಿ.ಅನಂತಕುಮಾರ್‍ಗೆ ಶ್ರದ್ದಾಂಜಲಿ.

ಹೊಸಪೇಟೆ :

        ದಿ.ಅನಂತಕುಮಾರ್ ಅವರು ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಿಣಿಯಾಗಿದ್ದರು. ಅವರ ನಿಧನದಿಂದ ಪಕ್ಷಕ್ಕೆ ಭರಿಸಲಾಗದ ನಷ್ಠವುಂಟಾಗಿದೆ ಎಂದು ಶಾಸಕ ಶ್ರೀರಾಮುಲು ಹೇಳಿದರು.

        ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ದಿ.ಅನಂತಕುಮಾರ್‍ಗೆ ಶ್ರದ್ದಾಂಜಲಿ, ಜಿಲ್ಲಾ ಕಾರ್ಯಕಾರಿಣಿ ಹಾಗು ಲೋಕಸಭಾ ಉಪ ಚುನಾವಣೆಯ ಸೋಲಿನ ಆತ್ಮವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

         ಅನಂತಕುಮಾರ್‍ವರು ಎಲ್ಲರೊಂದಿಗೆ ಬೆರೆಯುವ ಸ್ವಾಭಾವವುಳ್ಳವರಾಗಿದ್ದರು. ಜಿಲ್ಲೆಯ ಅಭಿವೃದ್ದಿಗೆ ಸಂಬಂಧಪಟ್ಟಂತೆ ಚರ್ಚಿಸಿ, ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಿದ್ದರು. ಅವರಂಥಹ ಅಪರೂಪದ ರಾಜಕಾರಿಣಿಯನ್ನು ಪಕ್ಷ ಕಳೆದುಕೊಂಡಿದ್ದು ದೊಡ್ಡ ನಷ್ಟವುಂಟಾಗಿದೆ ಎಂದರು.

        ಸಂಸದ ಕರಡಿ ಸಂಗಣ್ಣ ಮಾತನಾಡಿ, ದಿ.ಅನಂತಕುಮಾರ್ ಅವರ ಮೇಲೆ ಇದುವರೆಗೂ ಕಪ್ಪುಚುಕ್ಕೆ ಎಂಬುದೇ ಇಲ್ಲ. ಅಂತಹ ಸರಳ, ಸಜ್ಜನ ರಾಜಕಾರಿಣಿಯಾಗಿ ಹೊರಹೊಮ್ಮಿದ್ದರು. ಸಂಘ ಪರಿವಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಇತರರಿಗೆ ಮಾದರಿಯಾಗಿದ್ದರು ಎಂದು ತಿಳಿಸಿದರು.

       ನಂತರ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಯಾವೆಲ್ಲ ಅಂಶಗಳು ಸೋಲಿಗೆ ಕಾರಣವಾದವು ಎಂಬುದರ ಕುರಿತು ಆತ್ಮವಲೋಕನ ನಡೆಯಿತು.

        ಈ ಸಂಧರ್ಭದಲ್ಲಿ ಶಾಸಕ ಸೋಮಲಿಂಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಾಜಿ ಶಾಸಕ ನೇಮಿರಾಜ ನಾಯ್ಕ್, ಚಂದ್ರಾನಾಯ್ಕ್, ಜಿಲ್ಲಾ ಕಾರ್ಯದರ್ಶಿ ಮುರಾರಿಗೌಡ, ಜಿ.ಪಂ.ಅಧ್ಯಕ್ಷೆ ಭಾರತಿರೆಡ್ಡಿ, ಮಂಡಲ ಅಧ್ಯಕ್ಷ ಅನಂತ ಪಧ್ಮನಾಭ, ತಾ.ಪಂ.ಅಧ್ಯಕ್ಷೆ ಜೋಗದ ನೀಲಮ್ಮ, ಪೂಜಪ್ಪ, ಜಿ.ಪಂ.ಸದಸ್ಯರಾದ ಮಲ್ಲಿಕಾರ್ಜುನ ನಾಯ್ಕ್, ಈಶ್ವರ್ ಗುರುಸಿದ್ದಪ್ಪ, ಆನಂದ ಕೋಗಳಿ, ಸತ್ಯ ಪ್ರಕಾಶ್, ಬಿ.ರಾಘವೇಂದ್ರ, ಮಾಧ್ಯಮ ಸಂಚಾಲಕ ಮೇಟಿ ಶಂಕರ್ ಸೇರಿದಂತೆ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link