ಶ್ರದ್ದಾಂಜಲಿ ಕಾರ್ಯಕ್ರಮ

0
28

ಕೊರಟಗೆರೆ:-

       ತಾಲೂಕು ಸೇರಿದಂತೆಜಿಲ್ಲೆಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣ ಹಾಗೂ ಜಿರ್ಣೋದ್ದಾರ ಮಾಡಿ ಧಾರ್ಮಿಕಕ್ಷೇತ್ರದಲ್ಲಿ ಉತ್ತಮ ಸೇವೆಯೊಂದಿಗೆತಾಲೂಕಿನಆರ್ಯ ವೈಶ್ಯ ಸಮುದಾಯದಅಭಿವೃದ್ದಿಗೆ ಶ್ರಮಿಸಿರುವ ಹೃದಯವಂತಿಕೆಗೆ ಹೆಸರು ಪಡೆದಿರುವ ಗುಂಡಯ್ಯ ಶ್ರೇಷ್ಠಿಯವರ ಸಾವು ಧಾರ್ಮಿಕಕ್ಷೇತ್ರಕ್ಕೆ ನಷ್ಟ ಉಂಟಾಗಿದೆಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು

      ಅವರು ಪಟ್ಟಣದಕನ್ನಿಕಾ ಮಹಲ್‍ನಲ್ಲಿಆರ್ಯವೈಶ್ಯ ಮಂಡಲಿಯ ಅಂಗಸಂಸ್ಥೆಗಳು ಹಾಗೂ ಪಟ್ಟಣದ ವಿವಿಧ ದೇವಾಲಯಗಳ ಸೇವಾ ಸಮಿತಿಗಳು ಏರ್ಪಡಿಸಿದ್ದ ಇತ್ತೀಚೆಗೆ ನಿಧನರಾದ ಕೆ.ಎಸ್.ಗುಂಡಯ್ಯ ಶ್ರೇಷ್ಠಿ ರವರಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಆಶ್ರೀರ್ವಾಚನನೀಡಿ ಮಾತನಾಡಿಇವರಧಾರ್ಮಿಕ ಕಾಳಜಿ ಹಾಗೂ ಸಾಮಾಜಿಕ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು

      ಧಾರ್ಮಿಕಕ್ಷೇತ್ರದಲ್ಲಿ ನಿಸ್ವಾರ್ಥಸೇವಾ ಮನೋಭಾವ ಬೆಳಿಸಿಕೊಂಡು ಬದುಕು ಸಾರ್ಥಕವಾಗಿಸಿಕೊಂಡ ದಿವಂಗತ ಕೆ.ಎಸ್.ಗುಂಡಯ್ಯ ಶ್ರೇಷ್ಠಿ ರವರ ಹೆಸರು ಸಾರ್ವಜನಿಕರ ಮನದಲ್ಲಿ ಶಾಶ್ವತವಾಗಿ ಉಳಿಯುವುದೊಂದಿಗೆ ಪ್ರತಿಯೊಬ್ಬರಿಗೂಆದರ್ಶಮಯವಾಗಿದ್ದಾರೆ , ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಖಚಿತ ಬದುಕಿನ ನಡುವೆಅವರು ಸಾರ್ವಜನಿಕ ಸೇವೆ ಅವಿಸ್ಮರಣೀಯವಾದುದು

     ಶ್ರೀಯುತರು ಅವರ ಸೇವಾ ಮಾರ್ಗದರ್ಶನ ಅವರ ಕುಟುಂಬಕ್ಕೆ ಹಾಗೂ ಇತರರಿಗೆ ಮಾರ್ಗದರ್ಶನ ವಾಗಿಬೇಕು ಎಂದು ಏಲೆರಾಂಪುರ ಶ್ರೀ ನರಸಿಂಹಗಿರಿ ಕ್ಷೇತ್ರ ಹಾಗೂ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಹುನಮಂತನಾಥಸ್ವಾಮೀಜಿ ಮಾತನಾಡಿ ಶ್ರಿಯುತರು ಅನೇಕ ದೇವಾಲಯಗಳ ಜಿರ್ಣೋದ್ದಾರಕ್ಕಾಗಿ ಸಮಿತಿಗಳನ್ನು ರಚಿಸಿ ಕಣ್ಮರೆಯಾಗುತ್ತಿದ್ದ ದೇವಾಲಯಗಳನ್ನು ನಿರ್ಮಾಣಮಾಡಿ ದೇವಾಲಯಗಳಲ್ಲಿ ನಿತ್ಯ ಪೂಜೆಗೆಎಲ್ಲಾರೀತಿಯ ವ್ಯವಸ್ಥೆಮಾಡಿ ಪ್ರತಿನಿತ್ಯ ದೇವಾಲಯಗಳಿಗೆ ಬೇಟಿ ನೀಡಿತಮ್ಮ ವೃತ್ತಿಯಲ್ಲಿತೋಡಗುತ್ತಿದ್ದಅವರ ಸೇವೆ ಅವಿಸ್ಮರಣೀಯವಾಗಿದ್ದುಅವರುಧಾರ್ಮಿಕ ಸಂತರಾಗಿ ಮನುಷ್ಯತಮ್ಮಜೀವನದಲ್ಲಿ ಪರೋಪಕಾರ ಮಾಡುವ ಮೂಲಕ ಸಾಧನೆಗೆ ಮಾಡುಬೇಕೆಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿಯಕುಟುಂಬಕ್ಕೆಅವರ ಅಗಲಿಗೆ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಮಠದ ಶ್ರೀ ರಾಮಾನಂದಸ್ವಾಮೀಜಿ, ಬೇಳ್ಳಾವಿ ಶ್ರೀಖಾರದೇಶ್ವರ ಶ್ರೀಕ್ಷೇತ್ರ ಮಠದ ಶ್ರೀ ಖಾರದವೀರ ಬಸವ ಮಹಾಸ್ವಾಮೀಜಿಗಳು, ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್, ಕಟ್ಟೆಗಣಪತಿ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಪ.ಪಂ.ಸದಸ್ಯ ಎ,ಡಿ,ಬಲರಾಮಯ್ಯ, ಮೃತರ ಪತ್ನಿ ಭ್ಯಾಗ್ಯಲಕ್ಷ್ಮೀಗಂಡಯ್ಯಶ್ರೇಷ್ಠಿ, ಪುತ್ರರಾದ ಸುದೀರ್, ಬದ್ರಿನಾಥ್, ಆರ್ಯವ್ಯಶ್ಯಮಂಡಲಿಯ ಸಂಪಂಗಿರಾಮಕೃಷ್ಣಯ್ಯಶ್ರೇಷ್ಠಿ, ಕೆ.ಎಸ್.ವೆಂಕಟೇಶ ಶ್ರೇಷ್ಠಿ, ಅಶೋಕ್‍ ಕುಮಾರ್, ಗಂಗಾಧರ ಬಾಬು, ನಾಗರಾಜಶ್ರೇಷ್ಠಿ, ಮಾಜಿ ಪ.ಪಂ.ಸದಸ್ಯ ಶ್ರೀನಿವಾಸ್, ಚಿನ್ನಿಕೃಷ್ಣ, ಸದಾಶಿವಯ್ಯ ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳ ಸಮಿತಿಯ ಧರ್ಮದರ್ಶಿಗಳು, ಪ್ರಧಾದಿಕಾರಿಗಳು ಉಪಸ್ಥಿತರಿದ್ದು ದಿವಾಂಗತರಿಗೆ ಪುಷ್ಪ ನಮನ ಮಾಡಿದರು. ಕಾರ್ಯಕ್ರಮದಲ್ಲಿ ಗೊರವನಹಳ್ಳಿ ಲಕ್ಷ್ಮೀಪ್ರಸಾದ್ ಮತ್ತುಅವರತಂಡದಿಂದ ಸಂಗೀತಕಾರ್ಯಕ್ರಮಏರ್ಪಡಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here