ಕಂದಿಕೆರೆಯ ಪ್ರಾಚೀನ ಜಿನಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಮನವಿ

0
14

ಕಂದಿಕೆರೆ 

     ಇಲ್ಲಿ ಸುಮಾರು 800 ವರ್ಷಗಳ ಪ್ರಾಚೀನ ಜಿನಮಂದಿರವಿದೆ. ಇಲ್ಲಿ ಭಗವಾನ್ ಶ್ರೀ 1008 ಶಾಂತಿನಾಥಸ್ವಾಮಿ ಮತ್ತು ಭಗವಾನ್ ಶ್ರೀ 1008 ಅನಂತನಾಥಸ್ವಾಮಿ ಮಂಗಲ ಜಿನಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಈ ಶುಭ ಸ್ಥಾನವು ನರಸಿಂಹರಾಜಪುರದ ಸಿಂಹನಗದ್ದೆಯ ಶ್ರೀ ಬಸ್ತಿಮಠ ಸಂಸ್ಥಾನಕ್ಕೆ ಸೇರಿದ್ದು, ನಿತ್ಯ ಹಾಗೂ ನೈಮಿತ್ತಿಕ ಪೂಜೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ.

     ಇತ್ತೀಚೆಗೆ ರಸ್ತೆ ಅಗಲೀಕರಣದಿಂದಾಗಿ ಕಾಂಪೌಂಡ್ ಹಾಗೂ ಪಶ್ಚಿಮಾಭಿಮುಖವಾಗಿದ್ದ ಮುಖದ್ವಾರ ಹಾಗೂ ಮೇಲಿದ್ದ ಗೋಪುರವನ್ನು ಕೆಡವಲಾಗಿದೆ. ಈ ಉದ್ದೇಶದಿಂದ ಬಸದಿಯ ಜೀರ್ಣೋದ್ಧಾರ ಕಾರ್ಯಗಳು ಅಗತ್ಯವಾಗಿವೆ. ಇದಕ್ಕಾಗಿ ತ್ವರಿತಗತಿಯ ಯೋಜನೆಗಳು ರೂಪುಗೊಂಡಿವೆ.

     ಇದಕ್ಕಾಗಿ ಶ್ರೀಕ್ಷೇತ್ರ ಸಿಂಹನಗದ್ದೆ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಯೋಜನಾಬದ್ಧಗೊಂಡಿವೆ.

     ಈ ಬಸದಿಯ ಜೀರ್ಣೋದ್ಧಾರ ಕಾರ್ಯಗಳಿಗೆ ಹೊಸದುರ್ಗ ಶ್ರೀ ಇ.ವಿ.ಧನ್ಯಕುಮಾರ್‍ರವರ ಅಧ್ಯಕ್ಷತೆಯ ಸಮಿತಿಯ ಸದಸ್ಯರು ಹಾಗೂ ಹೊಸದುರ್ಗ ಮತ್ತು ಬೆಳಗುಲಿಯ ಜೈನ ಬಾಂಧವರು ಹೆಚ್ಚಿನ ಆಸಕ್ತಿವಹಿಸಿ, ಕಾರ್ಯೋನ್ಮುಖಗೊಂಡಿದ್ದಾರೆ. ಪೂಜ್ಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಆಗಮಿಸಿ ಸಲಹೆ ಸೂಚನೆ ನೀಡಿ, ಆಶೀರ್ವದಿಸಿರುತ್ತಾರೆ.

    ವಿನೂತನ ಯೋಜನೆಯಂತೆ ಜಿನಮೂರ್ತಿಗಳಿಗೆ ವಜ್ರಲೇಪನ ಮಾಡಿಸುವ ಅಭಿಪ್ರಾಯವಿದೆ. ಶಿಥಿಲಗೊಂಡಿರುವ ಕಾಂಪೌಂಡ್ ಹಾಗೂ ಮಳಿಗೆಗಳ ಕಾರ್ಯಗಳನ್ನು ನಡೆಸಿ, ಉತ್ತರಾಭಿಮುಖವಾಗಿ ಪ್ರವೇಶ ಕಲ್ಪಿಸುವ, ಮಹಾದ್ವಾರ ನಿರ್ಮಿಸುವ ಯೋಜನೆಗಳಾಗಿವೆ.

      ಈ ಗ್ರಾಮದಲ್ಲಿ ಎರಡು ಜೈನರ ಮನೆಗಳು ಮಾತ್ರ ಇವೆ. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಈ ಬಸದಿಯ ಪುನರುತ್ಥಾನಗೊಳಿಸುವ ಕಾರ್ಯ ಅನಿವಾರ್ಯವಾಗಿದೆ. ಇದಕ್ಕಾಗಿ ಧರ್ಮಬಾಂಧವರು ತನು ಮನ ಧನಪೂರ್ವಕ ಸೇವೆ-ಸಹಾಯ-ಸಹಕಾರ ನೀಡಬೇಕಾಗಿ ವಿನಂತಿ.

      ಸರ್ಕಾರದ ಅನುದಾನ ಬರುವವರೆಗೂ ಕಾಯುವುದಾದರೆ, ಜಿನಾಲಯವು ಇನ್ನೂ ಹೆಚ್ಚಿನ ಶಿಥಿಲ ಹೊಂದುವ ಪರಿಸ್ಥಿತಿ ಇದೆ. ಚೆಕ್ ಅಥವಾ ಬ್ಯಾಂಕ್ ಖಾತೆ ಮೂಲಕವು ಹಣ ನೀಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here