ಚುನಾವಣಾ ಪ್ರಚಾರ ಸಭೆ

ರಾಣೆಬೆನ್ನೂರ :

      ಜನಪರ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನತೆ ಹೆಚ್ಚು ಆರ್ಶೀವಾದ ನೀಡಿದೆ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್‍ಅಭ್ಯರ್ಥಿ ಡಿ.ಆರ್.ಪಾಟೀಲ ಹೇಳಿದರು. ತಾಲೂಕಿನ ಮಾಕನೂರು, ಕರೂರು ಚೆಳಗೇರಿ, ಕಮಡೋಡ, ಇಟಗಿ,ಮುದ್ದೇನುರು, ಲಿಂಗದಹಳ್ಳಿ, ಅಂತರವಳ್ಳಿ, ಕುಪ್ಪೆಳೂರು ಸೇರಿದಂತೆಇತರೆಗ್ರಾಮದಲ್ಲಿ ಹಮ್ಮಿಕೊಂಡಿದ್ದಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆ ಹೇಳಿ ಜನರಿಗೆ ಮೋಸ ಮಾಡುತ್ತಾ ಬಂದಿದೆ

      ತಮ್ಮ ಲಾಭಕ್ಕಾಗಿಜಾತಿ ಜಾತಿಗಳ ನಡುವೆ ಜಗಳ ತಂದುಇಟ್ಟು, ಸಮಾಜದಲ್ಲಿರುವ ಸೌಹೌರ್ದಯತೆಯನ್ನು ಹೊಡೆದು ಹಾಕುತ್ತಿದ್ದಾರೆ.ಚುನಾವಣೆಯ ಬಂದಾಗಇವರಿಗೆ ಶ್ರೀರಾಮ ಮಂದಿರ ನೆನೆಪಗಾಗುತ್ತದೆ.ಇಷ್ಟು ದಿನ ಎಲ್ಲಿ ಹೋಗಿತ್ತುಎಂದು ಬಿಜೆಪಿ ವಿರುದ್ಧ ಪಾಟೀಲ ಗುಡುಗಿದರು.

        ರಾಜ್ಯ ಗಾ.ಪಂ ಸದಸ್ಯಯತ್ವದಒಕ್ಕೂಟದಅಧ್ಯಕ್ಷ ಸತೀಶ ಮಾತನಾಡಿ, ಪ್ರಜೆಗಳೇ ಪ್ರಭುಗಳೆಂದು ನಂಬಿದವರು ಡಿ.ಆರ್.ಪಾಟೀಲರುಜನರಅಭಿಪ್ರಾಯದ ಮೇಲೆ ಸುವ್ಯವಸ್ಥಿತವಾದ ಆಡಳತ ನಡೆಸುವ ಮನೋಭಾವನೆ ಹೊಂದಿದವರು. ಪ್ರಜೆಗಳ ಹಿತಬಯಸುವ ಪಾಟೀಲರನ್ನು ಈ ಬಾರಿ ಹೆಚ್ಚಿನ ಮತಗಳ ಅಂತರಗಳಿಂದ ಗೆಲ್ಲಿಸಿದರೆ ಹಾವೇರಿ ಲೋಕಸಭಾಕ್ಷೇತ್ರಕ್ಕೆ ಅಷ್ಟೇ ಅಲ್ಲದೆರಾಜ್ಯಕ್ಕೆ, ದೇಶಕ್ಕೆಒಬ್ಬಉತ್ತಮ ನಾಯಕನನ್ನು ನೀಡಿದಂತಾಗುತ್ತದೆ.

         ನಾನು ತುಮಕೊರಿನಿಂದ ಡಿ.ಆರ್.ಪಾಟೀಲರ ಸಲುವಾಗಿಯೇ ಬಂದಿದ್ದೇನೆ ಹಾವೇರಿ ಲೋಕಸಭಾಕ್ಷೇತ್ರದಜನರಿಗೆಒಂದು ಸುವರ್ಣ ಅವಕಾಶ ಬಂದೊದಗಿದೆ. ಅವರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೆಕೆಂದು ಮನವಿ ಮಾಡಿಕೊಂಡರು.
ವಿಧಾನಸಭಾ ಮಾಜಿಅಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ಚುನಾವಣೆಯನ್ನು ಗೆಲುವು ಸಲುವಾಗಿ ಹಿಂದುತ್ವವನ್ನು ಮುಂದಿಟ್ಟುತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

          ಬಿಜೆಪಿ ಸ್ಥಾಪಕರಾದ ಲಾಲಕೃಷ್ಣ ಅಡ್ವಾಣಿಇತ್ತೀಚಿಗೆ ಬೂತ ಮಟ್ಟದ ಸಭೆಯಲ್ಲಿ ಮೋದಿ ಹಾಗೂ ಷಾ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿ, ನೀವು ವಿರೋಧಿಗಳನ್ನು ದೇಶದ್ರೋಹಿಗಳಂತೆ ಬಿಂಭಿಸುತ್ತಿದ್ದಾರೆ, ನೀವು ಪಕ್ಷದ ಸಿದ್ಧಾಂತಗಳನ್ನು ಕಡೆಗಣಿಸುತ್ತಿದ್ದಾರೆಅಂತ ಬೇಸರವನ್ನುತೊಡಿಕೊಂಡಿದ್ದಾರೆ.ಕಾಂಗ್ರೇಸ್ ಪಕ್ಷಅಲ್ಪಸಂಖ್ಯಾತರ, ದೀನ ದಲಿತರ ಹಾಗೂ ಬಡವರ ಏಳ್ಗೆಗೆ ಶ್ರಮಿಸುತ್ತದೆಆದ್ದರಿಂದ ಪ್ರತಿಯೊಬ್ಬರುಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದರು.

           ಈ ಸಂದರ್ಭದಲ್ಲಿ ಕರಿಗೌಡರ ಬಾಗೂರ, ಎ.ಜಿ.ನಾರಂಗಿ, ಬಿ.ಬಿ.ನಂದಿಹಾಳ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷಎಂ.ಎಚ್. ಪಾಟೀಲ್, ಬಸವನಗೌಡ ಮರದ, ಕೆ.ಪಿ.ಸಿ.ಸಿ ಸದಸ್ಯಏಕನಾಥ ಬಾನವಳ್ಳಿ, ವಿರುಪಾಕ್ಷಪ್ಪ ಭಂಗಿ, ಅಜ್ಜಪ್ಪ ಚಳಗೇರಿ, ಉಜ್ಜಪ್ಪ ಮಾಗನೂರ, ವಿಜಯ ತಳವಾರ, ಕರಿಬಸಪ್ಪಕೂಲಿಯಾರ, ಕರಿಬಸವನಗೌಡ ಮಾಜಿಗೌಡ ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರುಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link