ಹೊಸಪೇಟೆ :
ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಗ್ರಾ.ಪಂ.ಕಚೇರಿಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.ಸಭೆಗೂ ಮುನ್ನ ನೂತನ ಗ್ರಾ.ಪಂ.ಅಧ್ಯಕ್ಷ ಎನ್.ಗೋವಿಂದಪ್ಪ ಇವರನ್ನು ಸನ್ಮಾನಿಸಲಾಯಿತು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋವಿಂದಪ್ಪ, ಗಣಿಭಾಧಿತ ಪ್ರದೇಶಕ್ಕೆ ಸೇರಿದ ಪಾಪಿನಾಯಕನಹಳ್ಳಿ, ವಡ್ಡರಹಳ್ಳಿ, ಶಂಕರನಗರ ಕ್ಯಾಂಪ್ ಹಾಗು ಇಂಗಳಿಗಿ ಗ್ರಾಮಗಳ ಸಮಗ್ರ ಅಭಿವೃದ್ದಿಗೆ 30 ಕೋಟಿ ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಕುರಿತು ಪ್ರಸ್ತಾಪಿಸಿದಾಗ, ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿ, ಸಭೆಯ ಅನುಮೋಧನೆ ಪಡೆಯಲಾಯಿತು.
ಇದಾದ ಬಳಿಕ 14ನೇ ಹಣಕಾಸು ಯೋಜನೆ, ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಕುಟುಂಬಗಳ ಫಲಾನುಭವಿಗಳಿಗೆ ಗ್ಯಾಸ್ ಮತ್ತು ಸ್ಟವ್ ನೀಡುವ ಕುರಿತು ಖನಿಜ ನಿಧಿ ಅಡಿಯಲ್ಲಿ ಅನುದಾನ ಪಡೆಯಲು ಹಕ್ಕೊತ್ತಾಯ ಮಂಡನೆ ಮಾಡಲಾಯಿತು.ಈ ಸಂಧರ್ಭದಲ್ಲಿ ಪಿ.ಡಿ.ಒ.ಗಳಾದ ಚಂದ್ರಮೌಳಿ, ಶ್ರೀನಿವಾಸನಾಯ್ಕ್ ಸೇರಿದಂತೆ ಸರ್ವ ಗ್ರಾ.ಪಂ.ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
