ಬೆಂಗಳೂರು
ಸಬ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ೫ ಲಕ್ಷ ರೂ. ವಂಚಿಸಿರುವುದಾಗಿ ಯುವತಿಯೊಬ್ಬರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಳೀಸರು ತನಿಖೆ ತೀವ್ರಗೊಳಿಸಿದ್ದಾರೆ.
ದೇವಿ ಪ್ರಸಾದ್ ಸಾಹೋ, ಮೋಹನ್, ಮೋಹನ್ ತಾಯಿ ರತ್ನಮ್ಮ, ತಂದೆ ರತ್ನಾಕರ ಹೆಗಡೆ, ವಿಜಯಾ ರ‍್ನಾಟಕ ಸಂಘದ ಸತೀಶ್ ಮತ್ತು ನಂಜಪ್ಪ, ನಾರಾಯಣ್ ದಾಸ್ ಜಾಜೂ, ಎಂ.ರಂಗಪ್ಪ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ ಎಂದು ಯುವತಿಯು ದೂರಿದಲ್ಲಿ ತಿಳಿಸಿದ್ದಾರೆ.
ಆರೋಪಿ ದೇವಿಪ್ರಸಾದ್ ೫ ಲಕ್ಷ ರೂ. ಹಣ ಪಡೆದು, ಯುವತಿಗೆ ವಂಚಿಸಿದ್ದಾನೆ. ಪ್ರೀತಿಯ ನೆಪದಲ್ಲಿ ಯುವತಿಗೆ ಹತ್ತಿರವಾಗಿದ್ದ ದೇವಿಪ್ರಸಾದ್. ಅದೇ ಸಲಿಗೆಯಲ್ಲಿ ಯುವತಿಗೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಹಣ ಮರಳಿ ಹಣ ಕೇಳಿದ್ದಕ್ಕೆ ಅಶ್ಲೀಲ ಫೋಟೋ ಫೇಸ್‌ಬುಕ್‌ಗೆ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದ ಎಂದು ಳಿದುಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡ








