ಕರಮರಿದ ಕಲ್ಪತರು ನಾಡಿನ ರೈತರ ಆಶಾಕಿರಣ..!

ತಿಪಟೂರು

      ಕಲ್ಪತರು ನಾಡಿನಲ್ಲಿರಲಿ, ರಾಜ್ಯದಲ್ಲೇ ಇರಲಿ ಎಲ್ಲೆ ರೈತರಿಗೆ ತೊಂದರೆಯಾದರು ಮೊದಲು ನಿಲ್ಲುತ್ತಿದ್ದ ನಂಜುಂಡಸ್ವಾಮಿ ಪ್ರಭಾವಿತನಾದ ತಾಲ್ಲೂಕಿನ ರೈತ ಮುಖಂಡ ಮತ್ತು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜು ಭಾನುವಾರ ರಾತ್ರಿ ಅಸ್ತಂಗತರಾಗಿದ್ದು ಕಲ್ಪತರು ನಾಡು ರೈತ ಚಳುವಳಿಯ ಸಾರಥಿಯನ್ನು ಕಳೆದುಕೊಂಡಿದೆ.

     ಬೆನ್ನಾಯಕನಹಳ್ಳಿ ದೇವರಾಜು ಹುಟ್ಟು ಹೋರಾಟಗಾರರಾಗಿದ್ದು ರಾಜ್ಯ ರೈತಸಂಘದ ಅಧ್ಯಕ್ಷರಾಗುವ ಅವಕಾಶವು ಒದಗಿಬಂದರು ಅದನ್ನು ನಿರಾಕರಿಸಿ ತನ್ನ ತಾಯ್ನೆಲದಲ್ಲೇ ನಾನು ಹೋರಾಟ ಮಾಡಬೇಕಾದುದು ಬಹಳಷ್ಟಿದೆ ಎಂದು ಇಲ್ಲಯೇ ಉಳಿದರು ಎಂದು ರಾಜ್ಯ ರೈತ ಸಂಘದ ಅದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

     ಬೆನ್ನಾಯಕನಹಳ್ಳಿಯ ದೇವಣ್ಣನೆಂದೆ ಪರಿತರಾಗಿದ್ದ ಇವರು ರೈತರಲ್ಲಿ, ಜನ ಸಾಮಾನ್ಯರಲ್ಲಿ ಮತ್ತು ಅಧಿಕಾರಿ ವರ್ಗಗಳಲ್ಲಿ ಉತ್ತಮ ಸ್ನೇಹಿಯಾಗಿದ್ದವರು. ದೇವರಾಜುರವರಿಗೆ ಅನಾರೋಗ್ಯ ಕಾಡುತ್ತಿದ್ದರು ಇತ್ತೀಚೆಗೆ ನೆಡೆದ ರೈತರ ಕೊಬ್ಬರಿ ಬೆಲೆ ಕುಸಿತ ಕಂಡಾಗ ರೈತರ ನೆರೆವಿಗಾಗಿ ಸಂಘಟನೆಯಲ್ಲಿ ಪಾಲ್ಗೊಂಡು ಚಳುವಳಿ ನೆಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ 206 ಹಾಗೂ ಎತ್ತಿನಹೊಳೆ ಹೋರಾಟಗಳಲ್ಲಿ ಸಕ್ರಿಯರಾಗಿದ್ದು ಚಳುವಳಿಗಳಿಗೆ ಬೆಂಬಲ ನೀಡಿದ್ದನ್ನು ನಾವು ಸ್ಮರಿಸಲೇಬೇಕು.ತಿಪಟೂರಿನಲ್ಲಿ ಒಂದು ರೈತ ತಂಡವನ್ನು ಕಟ್ಟಿ ರೈತರ ಚಳುವಳಿಯನ್ನು ಬಲಗೊಳಿಸಬೇಕು ಎಂಬ ಆಸೆಯನ್ನು ಪದೇಪದೇ ವ್ಯಕ್ತ ಪಡಿಸುತ್ತಿದ್ದರು ಅದು ಫಲನೀಡುವ ಮುನ್ನವೇ ಅವರು ಮರೆಯಾಗಿದ್ದು ನಮ್ಮೆಲ್ಲರ ದುರ್ದೈವವೆಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ತಿಳಿಸಿದರು.

    ಇವರು ಪ್ರೊಫೆಸರ್ ನಂಜುಂಡಸ್ವಾಮಿಯವರ ನಿಖಟವರ್ತಿಗಳಾಗಿದ್ದವರು ಪ್ರೊಫೆಸರ್ ರವರಿಂದ ಪ್ರೇರಿತವಾಗಿ ಅವರ ತತ್ವಾಧರ್ಶಗಳನ್ನು ಪಾಲಿಸುತ್ತಾ ರಾಜ್ಯಾದ್ಯಂತ ನೆಡೆದ ರೈತ ಹೋರಾಟಗಳಲ್ಲಿ ಭಾಗವಹಿಸದ್ದರು. ಈ ಕಾರಣದಿಂದಾಗಿ ಅನೇಕ ಬಾರಿ ಜೈಲುವಾಸ ಅನುಭವಿಸಿದ್ದರು. ತಮ್ಮ ಜೀವನವನ್ನು ರೈತರಿಗಾಗಿ ಮತ್ತು ರೈತ ಸಂಘಗಳಿಗೋಸ್ಕರವೇ ಮುಡಿಪಾಗಿಟ್ಟಿದ್ದವರು.ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಎದುರಿಸುತ್ತಿರುವ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ್ದಾರೆ. ಕಲ್ಪತರು ನಾಡಿನ ಕಣ್ಮಣಿ ರೈತರ ಆಶಾಕಿರಣರಾದ ದೇವರಾಜುರವರ ಅಂತ್ಯಸಂಸ್ಕಾರಕ್ಕೆ ರೈತರುಗಳು, ರೈತ ಮುಖಂಡರು, ರೈತರ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಅವರ ಕರ್ಮಕ್ಷೇತ್ರವಾದಲ್ಲೇ ಇಂದು ಲೀನವಾಗಿದ್ದಾರೆ.

     ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷಗೋವಿಂದ ರಾಜು, ಆರ್.ಕೆ.ಎಸ್. ರಾಜ್ಯ ಸಮಿತಿ ಸದಸ್ಯಎಸ್.ಎನ್. ಸ್ಡಾಮಿ, ಹಸಿರು ಸೇನೆ ತಾಲ್ಲೂಕು ಅದ್ಯಕ್ಷ ಟಿ.ಎಸ್.ದೇವರಾಜು,  ಬೆಲೆ ಖಾವಲು ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ, ಕೃಷಿಕ ಸಮಾಜದ ತಾಲ್ಲೂಕು ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಹಾಗೂ ಇತರೆ ರೈತ ನಾಯಕರು ಸಂಘಟನೆಯವರು ಪಕ್ಷಾತೀತವಾಗಿ ಎಲ್ಲೂರು ಆಗಮಿಸಿ ನುಡಿ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap